ಮುಂಬೈ: ಮಹಿಳೆಯರು ತಮ್ಮ ಬ್ಯಾಗ್‌ನಲ್ಲಿ ಲಿಪ್ ಸ್ಟಿಕ್ ಜತೆಗೆ ಆತ್ಮರಕ್ಷಣೆಗೆಂದು ಚಾಕು ಹಾಗೂ ಮೆಣಸಿನ ಪುಡಿ ಇಟ್ಟುಕೊಂಡಿರಬೇಕು ಎಂದು ಮಹಾರಾಷ್ಟ್ರ ಸಚಿವ ಗುಲಾಬ್‌ರಾವ್ ಪಾಟೀಲ್ ಕರೆ ನೀಡಿದ್ದಾರೆ.
ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದು, ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ಅವರು ಈ ಸಲಹೆ ನೀಡಿದ್ದಾರೆ. ,
ನಾವು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದರೂ ಸಹ, ಇಂದು ಕೆಟ್ಟ ಘಟನೆಗಳು ನಡೆಯುತ್ತಿವೆ ಎಂದು ಅವರು ಇದೇ ಸಂದರ್ಭದಲ್ಲಿ ಆತಂಕ ವ್ಯಕ್ತಪಡಿಸಿದರು.
ಬಾಳಾಠಾಕ್ರೆ ಅಂದು ಮಹಿಳೆಯರು ಲಿಪ್ ಸ್ಟಿಕ್ ಜೊತೆಗೆ ಮೆಣಸಿನ ಪುಡಿ ಮತ್ತು ರಾಮಪುರಿ ಚಾಕುವನ್ನು ಒಯ್ಯಬೇಕು ಎಂದು ಹೇಳಿದ್ದಕ್ಕಾಗಿ ಪತ್ರಕರ್ತರು ಅವರನ್ನು ತೀವ್ರವಾಗಿ ಟೀಕಿಸಿದ್ದರು ಎಂದು ಅವರು ಹೇಳಿದರು.
ಆದರೆ ಇಂದಿನ ಪರಿಸ್ಥಿತಿಯೂ ಹಾಗೆಯೇ ಇದೆ. ಇಂದಿನ ಯುವತಿಯರು ತಮ್ಮ ಆತ್ಮ ರಕ್ಷಣೆಗಾಗಿ ಇದನ್ನು ಮಾಡಲೇ ಬೇಕಿದೆ ಎಂದು ಪಾಟೀಲ್ ಹೇಳಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4