ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಮೆಮು ರೈಲಿನ ಬಳಕೆಯನ್ನು ಉತ್ತೇಜಿಸಲು ನಾಗರಿಕ ಗುಂಪುಗಳು ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಕೆಐಎಗೆ 100ಕ್ಕೂ ಹೆಚ್ಚು ಜನರು ರೈಲಿನಲ್ಲಿ ಪ್ರಯಾಣಿಸಿದರು.
ರೈಲಿನಲ್ಲಿ ಸವಾರಿ ಮಾಡಿದ ಸಿಟಿಜನ್ಸ್ ಫಾರ್ ಸಿಟಿಜನ್ಸ್‌ನ ರಾಜ್‌ಕುಮಾರ್ ದುಗರ್ ಅವರು, ಮೆಮು ರೈಲುಗಳು ವಿಮಾನ ನಿಲ್ದಾಣಕ್ಕೆ ಉತ್ತಮ ಸಾರಿಗೆ ವಿಧಾನವಾಗಿದೆ. 30 ರೂ. ಗಳಲ್ಲಿ ವಿಮಾನ ನಿಲ್ದಾಣ ತಲುಪಬಹುದು. ಇದು ಕ್ಯಾಬ್‌ಗಳು ಮತ್ತು ಬಸ್‌ಗಳಿಗಿಂತ ಹೆಚ್ಚು ಮಿತವ್ಯಯಕಾರಿಯಾಗಿದೆ. ಅಲ್ಲದೆ ಇದು ಸುರಕ್ಷಿತವಾಗಿದೆ. ವಾಶ್‌ರೂಮ್‌ಗಳು ಮತ್ತು ಬ್ಯಾಗ್‌ಗಳಿಗೆ ಸಾಕಷ್ಟು ಸ್ಥಳಾವಕಾಶವಿರುವ ಏಕೈಕ ಸಾರಿಗೆ ವಿಧಾನವಾಗಿದೆ.
ಯಲಹಂಕ ನಿಲ್ದಾಣದಿಂದ ಸುಮಾರು 30 ವಿದ್ಯಾರ್ಥಿಗಳು ರೈಲನ್ನು ಹತ್ತಿದ್ದಾರೆ. 19 ವರ್ಷದ ದಿವ್ಯಾಕುಮಾರಿ ಮೊದಲ ಬಾರಿಗೆ ಮೆಮು ರೈಲಿನಲ್ಲಿ ಪ್ರಯಾಣಿಸಿ, ನಾನು ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುತ್ತಿರುವುದು ಇದು ಮೊದಲು. ಈ ರೈಲು ಸೇವೆ ವಿದ್ಯಾರ್ಥಿಗಳಿಗೆ ಪಾಕೆಟ್ ಸ್ನೇಹಿಯಾಗಿದೆ. ಅಲ್ಲದೆ ನಾನು ಸುರಕ್ಷಿತವಾಗಿರುತ್ತೇನೆ. ಮುಖ್ಯವಾಗಿ ನಾನು ಟ್ರಾಫಿಕ್ ಜಾಮ್‌ಗಳಲ್ಲಿ ಸಿಲುಕಿಕೊಳ್ಳಬೇಕಾಗಿಲ್ಲ ಎಂದು ಹರ್ಷ ವ್ಯಕ್ತಪಡಿಸಿದರು.
ಬೆಂಗಳೂರಿನ ಖಾಸಗಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಂತರಾಮ್ ಮಾತನಾಡಿ, ಅನಿಯಮಿತ ವೇಳಾಪಟ್ಟಿಯಿಂದಾಗಿ ಜನರು ಮೆಮು ರೈಲಿನ ಸೇವೆಗಳ ಬಗ್ಗೆ ಎಚ್ಚರದಿಂದಿದ್ದಾರೆ. ಬದಲಿಗೆ ಕ್ಯಾಬ್‌ಗಳನ್ನು ಆಯ್ಕೆ ಮಾಡುತ್ತಾರೆ ಎಂದರು.
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೆಮು ರೈಲನ್ನು ಆರಂಭಿಸಿದಾಗಿನಿಂದ ಪ್ರಯಾಣಕ್ಕೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೆಮು ರೈಲಿನ ಸೇವೆ ಆರಂಭಿಸಿದ ಮೊದಲ 11 ದಿನಗಳ ಅವಧಿಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರ ಸಂಖ್ಯೆ 3 ರಿಂದ 20 ನಡುವೆ ಇದ್ದು, ಹಿಂದಿರುಗುವ ಪ್ರಯಾಣಿಕರ ಸಂಖ್ಯೆ 3 ರಿಂದ 13 ರಷ್ಟಿತ್ತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy