nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕುಣಿಗಲ್ | ಬೈಕ್‌ ಗೆ ಕಾರು ಡಿಕ್ಕಿ: ದಂಪತಿಯ ದಾರುಣ ಸಾವು

    November 6, 2025

    ಸರಗೂರು: ಕೊನೆಗೂ ಜಯಲಕ್ಷ್ಮೀಪುರ ಗ್ರಾಮಕ್ಕೆ ಬಂತು ಸರ್ಕಾರಿ ಬಸ್: ಗ್ರಾಮಸ್ಥರಿಂದ ಹರ್ಷ

    November 5, 2025

    ಪ.ಜಾತಿ ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಗಳ ಆಧಾರ್ ಇ–ದೃಢೀಕರಣ ಕಡ್ಡಾಯ: ವಿ.ಕೆ.ಬಡಿಗೇರ

    November 5, 2025
    Facebook Twitter Instagram
    ಟ್ರೆಂಡಿಂಗ್
    • ಕುಣಿಗಲ್ | ಬೈಕ್‌ ಗೆ ಕಾರು ಡಿಕ್ಕಿ: ದಂಪತಿಯ ದಾರುಣ ಸಾವು
    • ಸರಗೂರು: ಕೊನೆಗೂ ಜಯಲಕ್ಷ್ಮೀಪುರ ಗ್ರಾಮಕ್ಕೆ ಬಂತು ಸರ್ಕಾರಿ ಬಸ್: ಗ್ರಾಮಸ್ಥರಿಂದ ಹರ್ಷ
    • ಪ.ಜಾತಿ ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಗಳ ಆಧಾರ್ ಇ–ದೃಢೀಕರಣ ಕಡ್ಡಾಯ: ವಿ.ಕೆ.ಬಡಿಗೇರ
    • ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಸ್ಪರ್ಧಾ ಕಾರ್ಯಕ್ರಮ ಮುಂದೂಡಿಕೆ
    • ನ.10: ಶ್ರೀ ಗುರುಸಂಗಮೇಶ್ವರಸ್ವಾಮಿ ಅವರ ಲಕ್ಷದೀಪೋತ್ಸವ ಆಚರಣೆ
    • ವಿದ್ಯಾರ್ಥಿ ವೇತನ: ಬಯೋಮೆಟ್ರಿಕ್ ಇ–ದೃಢೀಕರಣ ಕಡ್ಡಾಯ
    • ನವೆಂಬರ್ 7: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ತುಮಕೂರು ಜಿಲ್ಲಾ ಪ್ರವಾಸ
    • ತುಮಕೂರು | SSLC ಫಲಿತಾಂಶ ಸೇರಿದಂತೆ ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿತು ಜಿಲ್ಲೆಯ ಹಲವು ಸಮಸ್ಯೆಗಳು!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕಿನ್ನರಿ ಕಲಾವಿದ ದೊಡ್ಡಬಳ್ಳಾಪುರದ ಮುನಿಸ್ವಾಮಿ ಅವರಿಗೆ ಡಾ.ಬಾಬು ಜಗಜೀವನರಾಂ ಪ್ರಶಸ್ತಿ
    ಜಿಲ್ಲಾ ಸುದ್ದಿ April 8, 2022

    ಕಿನ್ನರಿ ಕಲಾವಿದ ದೊಡ್ಡಬಳ್ಳಾಪುರದ ಮುನಿಸ್ವಾಮಿ ಅವರಿಗೆ ಡಾ.ಬಾಬು ಜಗಜೀವನರಾಂ ಪ್ರಶಸ್ತಿ

    By adminApril 8, 2022No Comments2 Mins Read
    muniswamy

    ದಕ್ಕಲ ಆದಿಜಾಂಬವ ಪುರಾಣವನ್ನು ಹಾಡುವ ಕಿನ್ನರಿ ಕಲಾವಿದ ದೊಡ್ಡಬಳ್ಳಾಪುರದ ಮುನಿಸ್ವಾಮಿ ಅವರಿಗೆ ಕರ್ನಾಟಕ ಸರ್ಕಾರ ಡಾ.ಬಾಬು ಜಗಜೀವನರಾಂ ಅವರ 115 ನೇ ಜಯಂತಿಯ ದಿನ, ₹.500000 ನಗದು, ಸ್ಮರಣಿಕೆಗಳೊಂದಿಗೆ ಡಾ.ಬಾಬು ಜಗಜೀವನರಾಂ ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತದೆ.

    ದಕ್ಕಲ ಆದಿಜಾಂಬವ ಪುರಾಣ ಕಾವ್ಯವನ್ನು ಹಾಡುವ ಅಪರೂಪದ ಏಕೈಕ ಕಲಾವಿದ ಮುನಿಸ್ವಾಮಿ. ಈ ಪರಂಪರೆಯನ್ನು ಉಳಿಸಿ ಬೆಳೆಸಬೇಕೆಂಬ ಹಂಬಲದಿಂದ ಮತ್ತು ಅಪರೂಪದ ಕಲಾವಿದ ಮುನಿಸ್ವಾಮಿಯವರ ಬದುಕನ್ನು ಕಟ್ಟಿಕೊಡಬೇಕೆಂಬ ಕಳಕಳಿಯಿಂದ ಪತ್ರಕರ್ತ ಮಿತ್ರ ಡಿ.ಎಂ.ಘನಶ್ಯಾಮ ಅವರು 13-11-2017 ರ ಪ್ರಜಾವಾಣಿ ಪತ್ರಿಕೆಯಲ್ಲಿ  ಪರಿಚಯ ಲೇಖನ ಬರೆದು ಪ್ರಕಟಿಸಿದ್ದರು. ಇದಾದ ನಂತರದಲ್ಲಿ ಹಲವಾರು ಸಭೆ ಸಮಾರಂಭಗಳಲ್ಲಿ ವಿಚಾರ ಸಂಕಿರಣ ಹಾಗೂ ನಾಯಕತ್ವ ತರಬೇತಿ ಕಾರ್ಯಾಗಾರಗಳಲ್ಲಿ ನಾನು ದಕ್ಕಲ ಕಲಾವಿದ ಮುನಿಸ್ವಾಮಿಯನ್ನು ಕುರಿತು ಹಾಗೂ ಆದಿಜಾಂಬವ ಪುರಾಣವನ್ನು ಕುರಿತು ಚಿಂತನೆಗಳನ್ನು ಮಂಡಿಸಿರುತ್ತೇನೆ.


    Provided by
    Provided by

    ಆದಿಜಾಂಬವ ಪುರಾಣ ಅತ್ಯಂತ ಅಗತ್ಯವಾಗಿ ಸಂಗ್ರಹವಾಗಿ ಪ್ರಕಟವಾಗಬೇಕಾದ ಜನಪದ ಮಹಾಕಾವ್ಯ.  ಜಂಬೂದ್ವೀಪದ ಆದಿಮ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬರುತ್ತಿರುವವರು ಮುನಿಸ್ವಾಮಿಯಂತಹ ಅಸಲಿ ಜನಪದ ಕಲಾವಿದರು. ಈ ಕಾವ್ಯ ತುಂಬಾ ಮುಖ್ಯವಾದ ಹಾಗೂ ದಾಖಲಾಗಲೇಬೇಕಾದ ಮಹಾಕಾವ್ಯ,

    ಹಿಂದೆ ಪಿಚ್ಚಳ್ಳಿ ಶ್ರೀನಿವಾಸ ಅವರು ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಚಿಂತಕ ಕೋಲಾರ ಲಕ್ಷ್ಮೀಪತಿ ಅವರನ್ನು ಮತ್ತು ನನ್ನನ್ನೂ ಸಂಪರ್ಕಿಸಿ ಈ ಕಾವ್ಯದ ಸಂಶೋಧನೆಗೆ ಯೋಜನೆ ರೂಪಿಸಿದ್ದರು .ಪಿಚ್ಚಳ್ಳಿಯವರ ಅಧಿಕಾರದ ಅವಧಿಯಲ್ಲೇ ಈ ಕೆಲಸ ಕೈಗೂಡಬೇಕಿತ್ತು. ಇದು ಕಳೆದುಹೋಗುವ ಮುನ್ನವೇ ದಾಖಲಾಗಬೇಕಾದ ಅಗತ್ಯವಿದೆ. ಈಗ ಕಲಾವಿದ ಮುನಿಸ್ವಾಮಿಗೆ ವಾಸಿಸಲು ಮನೆ ಇರದೆ ನಿರ್ಗತಿಕ ಸ್ಥಿತಿಯಲ್ಲಿದ್ದಾರೆ.

    ಆದಿ ಜಾಂಬವ ಅಥವಾ ಮಹಾ ಆದಿಗ: ಆದಿಜಾಂಬವನು ಮಾದಿಗರ ಮೂಲ ಪುರುಷ. ಜಾನಪದ ಮೌಖಿಕ ಪುರಾಣ ಕಾವ್ಯಗಳ ಪ್ರಕಾರ ಅವನು ವಿಶ್ವಸೃಷ್ಡಿಗೂ ಆರು ತಿಂಗಳು ಮೊದಲೇ ಹುಟ್ಟಿದ ಆದಿ ಪುರುಷ. ವಿಶ್ವವನ್ನು ತಾನೆ ಸೃಷ್ಟಿಸಿದ ಆದಿ ವ್ಯಕ್ತಿಯಾದ ಕಾರಣ “ಆದಿಗ”. ವಿಶ್ವಸೃಷ್ಟಿಗೂ ಮೊದಲೇ ಈತನಿದ್ದ ಕಾರಣ ” ಮಹಾ ಆದಿಗ” ಆಗಿದ್ದಾನೆ. ಮಹಾಆದಿಗ ವ್ಯಕ್ತಿಯು ಮಾದಿಗ ಆಗಿ ಮತ್ತು ಅವನ ಸಂತತಿಯವರು ಮಾದಿಗರಾಗಿ ನಾಮಾಂಕಿತರಾಗಿದ್ದಾರೆ. ಆದಿಜಾಂಬವನೇ ಜಂಬೂದ್ವೀಪದ ಆದಿ ಮಾದಿಗ. ಭಾರತ ದೇಶದ ಪ್ರಾಚೀನ ಹೆಸರು ಜಂಬೂದ್ವೀಪ. ಜಂಬೂವ ಅರ್ಥಾತ್ ಜಾಂಬವನು ಭಾರತ ದೇಶದ ಎಲ್ಲಾ ಜೀವಿಗಳಿಗೆ ಮತ್ತು ಜನಾಂಗಗಳಿಗೆ ಹಿರಿಯವನಾಗಿ ಮೊದಲೇ ಹುಟ್ಟಿದ ಪಿತಾಮಹನಾದ್ದರಿಂದ ಇವನನ್ನು ‘ ಆದಿ ತಾತ ಅಥವಾ ತಾತ ಜಾಂಬವ’ ಎಂದು ಕರೆಯುತ್ತಾರೆ. ಎಮ್ಮಾ ರೋಶಾಂಬು ಕ್ಲೌ ಹೇಳುವಂತೆ “Aryans made their conquests, and this man Adi Jambava, who was ‘ the first Madiga’ was one of those who were in possessions of the soil when the invaders came”. ಅಂದರೆ ಆರ್ಯರು ಭಾರತದ ಮೇಲೆ ದಂಡೆಯಾತ್ರೆ ಮಾಡುವ ಮೊದಲೇ ಆದಿಜಾಂಬವನು ಈ ನೆಲದ ಒಡೆಯನಾಗಿದ್ದ ಕಾರಣ ಮಾದಿಗರ ವಶದಲ್ಲಿ ಇಡೀ ಭಾರತ ದೇಶವಿತ್ತು. ಆದಿಜಾಂಬವ ಪುರಾಣವು ಈ ಜಂಬೂದ್ವೀಪದ ಆದಿಭಾಗದ ಕಥನವನ್ನು ಮಂಡಿಸುತ್ತದೆ.

    ನಾನು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಡಾ.ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡು “ಕರ್ನಾಟಕ ಆದಿಜಾಂಬವ ಮಾತಂಗ ಪರಂಪರೆ ; ಸಾಂಸ್ಕೃತಿಕ ವಿಶ್ಲೇಷಣೆ” ಎಂಬ ಪಿಎಚ್.ಡಿ ಮಹಾಪ್ರಬಂಧ ರೂಪಿಸಿಕೊಟ್ಟಿದ್ದು , ಇದರಲ್ಲಿ ಆದಿಜಾಂಬ ಪುರಾಣದ ಸಂಪೂರ್ಣವಾದ ಕಥನವನ್ನು ವಿಶ್ಲೇಷಿಸಿರುತ್ತೇನೆ. ಆದರೆ ಕಾವ್ಯದ Audio visual ದಾಖಲೀಖರಣ ಮತ್ತು ಕಾವ್ಯದ ಸಂಪಾದನೆ ಮತ್ತು ಪ್ರಕಟಣೆ ಆಗಬೇಕಾಗಿದೆ. ಇತ್ತ ಕಡೆಗೆ ನೆರವಿನ ಹಸ್ತ ಚಾಚಿದರೆ ನಾನು, ಲಕ್ಷ್ಮೀಪತಿ ಕೋಲಾರ, ಕೋಟಿಗಾನಹಳ್ಳಿ ರಾಮಯ್ಯ, ಡಾ.ಎ.ಎಸ್.ಪ್ರಭಾಕರ್ ಮುಂತಾದವರು ಈ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಡಲು ಸಿದ್ಧರಿದ್ದೇವೆ

    ಡಾ.ವಡ್ಡಗೆರೆ ನಾಗರಾಜಯ್ಯ 8722724174, 9448538412

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಸರಗೂರು: ಕೊನೆಗೂ ಜಯಲಕ್ಷ್ಮೀಪುರ ಗ್ರಾಮಕ್ಕೆ ಬಂತು ಸರ್ಕಾರಿ ಬಸ್: ಗ್ರಾಮಸ್ಥರಿಂದ ಹರ್ಷ

    November 5, 2025

    ಬೀದರ್‌ | ದೇವರ ದರ್ಶನ ಮುಗಿಸಿ ಬರುತ್ತಿದ್ದ ವೇಳೆ ಭೀಕರ ಅಪಘಾತ: ಸ್ಥಳದಲ್ಲೇ ಮೂವರು ಸಾವು

    November 5, 2025

    ಹುಲಿ ದಾಳಿಗೆ ಹೆದರಿ ಹೊರಬಾರದ ಜನ: ಅರಣ್ಯ ಇಲಾಖೆಯಿಂದ ಆಹಾರದ ಕಿಟ್ ವಿತರಣೆ

    November 4, 2025

    Leave A Reply Cancel Reply

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕುಣಿಗಲ್

    ಕುಣಿಗಲ್ | ಬೈಕ್‌ ಗೆ ಕಾರು ಡಿಕ್ಕಿ: ದಂಪತಿಯ ದಾರುಣ ಸಾವು

    November 6, 2025

    ಕುಣಿಗಲ್‌: ಬೈಕ್‌ ಗೆ ಕಾರು ಡಿಕ್ಕಿಯಾಗಿ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ರಾಷ್ಟ್ರೀಯ ಹೆದ್ದಾರಿ ಸಿದ್ದಾಪುರ ಗೇಟ್ ಬಳಿ…

    ಸರಗೂರು: ಕೊನೆಗೂ ಜಯಲಕ್ಷ್ಮೀಪುರ ಗ್ರಾಮಕ್ಕೆ ಬಂತು ಸರ್ಕಾರಿ ಬಸ್: ಗ್ರಾಮಸ್ಥರಿಂದ ಹರ್ಷ

    November 5, 2025

    ಪ.ಜಾತಿ ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಗಳ ಆಧಾರ್ ಇ–ದೃಢೀಕರಣ ಕಡ್ಡಾಯ: ವಿ.ಕೆ.ಬಡಿಗೇರ

    November 5, 2025

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಸ್ಪರ್ಧಾ ಕಾರ್ಯಕ್ರಮ ಮುಂದೂಡಿಕೆ

    November 5, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.