ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ರಾಜ್ಯದಲ್ಲಿ ನಡೆದ ಎಲ್ಲಾ ನೇಮಕಾತಿ ಪರೀಕ್ಷೆಗಳು ವ್ಯಾಪಕ ಭ್ರಷ್ಟಾಚಾರ, ಅವ್ಯವಹಾರ ಹಾಗೂ ಪರೀಕ್ಷಾ ಅಕ್ರಮಗಳಿಗೆ ಸಾಕ್ಷಿಯಾಗಿವೆ. ಇದರ ನೇರ ಪರಿಣಾಮ ಅನುಭವಿಸಿದ್ದು ನಮ್ಮ ನಾಡಿನ ಲಕ್ಷಾಂತರ ಉದ್ಯೋಗಕಾಂಕ್ಷಿ ಯುವಕರು. ಇದನ್ನು ತಡೆಗಟ್ಟಲು, ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಅನೇಕ ಕ್ರಮಗಳ ಅನಿವಾರ್ಯತೆಯಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನೇಮಕಾತಿ ಪರೀಕ್ಷೆಗಳಲ್ಲಿನ ಭ್ರಷ್ಟಾಚಾರವನ್ನ ತಡೆಯಲು ಸದನದಲ್ಲಿಂದು ಖಾಸಗಿ ಮಸೂದೆಯನ್ನ ಜಾರಿಗೆ ತರಲು ಸಭಾಪತಿಗಳಿಗೆ ಸಲ್ಲಿಸಿದ್ದೇನೆ. ಇದರ ಅವಶ್ಯಕತೆ ಲೂಟಿ ಹೊಡೆಯಲೇ ಬಂದಿರುವ ಸರ್ಕಾರಕ್ಕೆ ಇಲ್ಲದಿರಬಹುದು, ಆದರೆ ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ನಮ್ಮ ಯುವಕರಿಗೆ, ಸುಗಮ ಹಾಗೂ ಸ್ಪೂರ್ತಿ ತುಂಬಿದ ಆಡಳಿತ ಬಯಸುತ್ತಿರುವ ಜನ ಸಾಮಾನ್ಯರಿಗೆ ಖಂಡಿತ ಇದೆ ಎಂದು ಅವರು ಹೇಳಿದ್ದಾರೆ.
ನಮ್ಮ ನಾಡಿನ ಯುವಕರಿಗೆ ನ್ಯಾಯಯುತವಾಗಿ ಉದ್ಯೋಗ ಕಲ್ಪಿಸಲು ಸರ್ವ ಪ್ರಯತ್ನಗಳನ್ನೂ ನಾನು ನನ್ನ ಕ್ಷಮತೆ ಮೀರಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ಪ್ರಿಯಾಂಕ್ ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


