ಬೆಂಗಳೂರಿನಲ್ಲಿ ಪೊಲೀಸ್ ಇನ್ ಫಾರ್ಮರ್ ಎಂದು ಪೊಲೀಸರಿಗೆ ವಂಚಿಸಿದ ಆರೋಪಿ ವಸೀಂ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇಲ್ಲೊಂದು ದಂಧೆ ನಡೀತಿದೆ. ನಾನು ಅಲ್ಲಿಗೆ ಹೋಗಿ ಲೊಕೇಷನ್ ಕಳಿಸ್ತೀನಿ ಎಂದವನು, ತಾನೇ ಅಲ್ಲಿಗೆ ಹೋಗಿ ಸ್ಪಾಟ್ ಲೊಕೇಷನ್ ಕಳಿಸ್ತೀನಿ ಅಂತಿದ್ದ. ನಂತರ ಆಟೋ ಪ್ರಾಬ್ಲಂ, ಪೆಟ್ರೋಲ್, ಬೈಕ್ ಇಲ್ಲ, ಮನೆಯಲ್ಲಿ ಸಮಸ್ಯೆ ಎಂದು ನಂಬಿಸಿ ಎರಡೂರು ಸಾವಿರ ಪೋನ್ ಪೇ ಮಾಡಿ ಅಂತಿದ್ದ. ಸರಿ ಎಂದು ಹಣ ಪೋನ್ ಪೇ ಮಾಡಿದ್ರೆ, ಅದರ ನಂತರ ಕೆಲವೇ ಕ್ಷಣಗಳಲ್ಲಿ ಪರಾರಿ ಆಗುತ್ತಿದ್ದ.
ಕಳೆದ ನಾಲ್ಕು ವರ್ಷದಿಂದ ಪೊಲೀಸರಿಗೆ ವಂಚಿಸಿ ಪಬ್ ಬಾರ್ ಗಳಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ವಸೀಂ ಎಂಬ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಸೀಂ, ಪೊಲೀಸರ ಜೊತೆಯಲ್ಲಿ ಇದ್ದುಕೊಂಡೇ ಅವರಿಗೆ ಸಹಾಯ ಮಾಡುವಂತೆ ಅವರ ಬಳಿಯಿಂದಲೇ ಹಣ ಪಡೆದು ವಂಚಿಸಿದ್ದಾನೆ.


