ಬಿಗ್ ಬಾಸ್ ಕನ್ನಡ ಸೀಸನ್ 11 ಮೊದಲ ವಾರದ ಪಂಚಾಯಿತಿ ಶನಿವಾರ ನಡೆಯಿತು. ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರು ಭರ್ಜರಿ ಉಡುಪು ಧರಿಸಿ, ಸ್ಟೈಲಿಷ್ ಆಗಿ ಎಂಟ್ರಿಕೊಟ್ಟಿದ್ದಾರೆ,. ಆದರೆ, ಕಿಚ್ಚ ಸುದೀಪ್ ಅವರು ಬರೀಗಾಲಲ್ಲೇ ಬಿಗ್ ಬಾಸ್ ವೇದಿಕೆಗೆ ಆಗಮಿಸಿ ಅಚ್ಚರಿ ಸೃಷ್ಟಿಸಿದರು.
ಬೂದು ಬಣ್ಣದ ಶೇರ್ವಾನಿ ಮಾದರಿಯ ಉಡುಪು ಧರಿಸಿ ಸರಳವಾಗಿ ವೇದಿಕೆಗೆ ಎಂಟ್ರಿ ಕೊಟ್ಟ ಸುದೀಪ್, ಬರೀಗಾಲಲ್ಲೇ ಬಿಗ್ ಬಾಸ್ ವೇದಿಕೆ ಏರಿದರು. ಅದಕ್ಕೆ ಕಾರಣ ಕೂಡ ಇದೆ.
ನವರಾತ್ರಿ ಆಚರಣೆ ಮಾಡುವಂತೆ ಸುದೀಪ್ ಅವರ ತಾಯಿ ಹೇಳಿದಂತೆ, ಕಿಚ್ಚ ಸುದೀಪ್ ಚಪ್ಪಲಿ ಧರಿಸದೇ ವೇದಿಕೆಗೆ ಆಗಮಿಸಿದ್ದಾರೆ.
ಅವರು ವೇದಿಕೆ ಹತ್ತಿದ ಬಳಿಕ, ಬರಿಗಾಲಲ್ಲಿ ಬಂದಿದ್ದೀನಿ, ಬೂದು ಬಣ್ಣದ ಶೇರ್ವಾನಿ ಮಾದರಿ ಬಟ್ಟೆ ಹಾಕಿಕೊಂಡಿದ್ದೀನಿ, ಓಕೆ ನಾ ಅಮ್ಮ ಎಂದು ಬಿಗ್ ಬಾಸ್ ವೇದಿಕೆಯಲ್ಲಿ ಅವರು ಹೇಳಿಕೊಂಡರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q