ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಅನುಪ್ ಭಂಡಾರಿ ಅವರ ಬಿಲ್ಲ ರಂಗ ಭಾಷ ಚಿತ್ರ ಇಂದಿನಿಂದ ಶೂಟಿಂಗ್ ಆರಂಭಗೊಂಡಿದೆ. ಪೋಸ್ಟರ್ ರಿಲೀಸ್ ಮಾಡುವ ಮೂಲಕ ಈ ಬಗ್ಗೆ ಕಿಚ್ಚ ಸುದೀಪ್ ಮಾಹಿತಿ ನೀಡಿದ್ದಾರೆ.
ವಿಕ್ರಾಂತ್ ರೋಣದ ಬಳಿಕ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಅನುಪ್ ಭಂಡಾರಿ ಬಿಲ್ಲ ರಂಗ ಭಾಷ ಚಿತ್ರದ ಮೂಲಕ ಕೈಜೋಡಿಸಿದ್ದಾರೆ.
ಹಿಮ ಬೀಳುವ ಪ್ರದೇಶದಲ್ಲಿ ಸುದೀಪ್ ನಿಂತಿದ್ದಾರೆ. ಅವರ ಮೈಮೇಲೆ ನೀರಿನ ಹನಿ ಇದೆ. ಅವರು ಕನ್ನಡಕದ ರೀತಿಯ ವಸ್ತುವನ್ನು ಹಣೆಮೇಲೆ ಇಟ್ಟುಕೊಂಡಿದ್ದಾರೆ. ಕನ್ನಡಕದ ಮೇಲಿನ ಪ್ರತಿಬಿಂಬದಲ್ಲಿ ಕಟ್ಟವೊಂದಕ್ಕೆ ಬೆಂಕಿ ಬಿದ್ದಿರುವಂತೆ ಕಾಣಿತ್ತಿದೆ. ಸುದೀಪ್ ಹಿಂಭಾಗದಲ್ಲಿ ಕಟ್ಟವೊಂದು ಇದೆ. ಈ ಪೋಸ್ಟರ್ ಈಗ ಸಿನಿಪ್ರಿಯರ ಗಮನ ಸೆಳೆದಿದೆ.
‘ಇದು ನನ್ನ ವೃತ್ತಿ ಜೀವನದ ಅತಿ ದೊಡ್ಡ ಸಿನಿಮಾ. ಬಜೆಟ್ ಹಾಗೂ ಸಿನಿಮಾ ಮೇಕಿಂಗ್ ಎರಡೂ ವಿಚಾರದಲ್ಲೂ ಇದು ದೊಡ್ಡದೇ’ ಎಂದು ಸುದೀಪ್ ಹೇಳಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW