ಖಿದ್ಮಾ ಫೌಂಡೆಶನ್ ಕರ್ನಾಟಕ ನೀಡುವ ಖಿದ್ಮಾ ಕಾವ್ಯ ಪ್ರಶಸ್ತಿಗೆ ಪ್ರೊ ಫರ್ಹಾನಾಜ಼್ ಆಯ್ಕೆ ಆಗಿದ್ದಾರೆ. ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೆಲಮಂಗಲ ಇಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಸಾಹಿತ್ಯ ಕ್ಷೇತ್ರ ದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.
ಹಲವು ಪುಸ್ತಕ ಬರೆದಿದ್ದಾರೆ ಅಲ್ಲದೆ ಹಲವು ಪತ್ರಿಕೆ ಗಳಲ್ಲಿ ಇವರ ಲೇಖನ ಗಳು ಪ್ರಕಟ ಗೊಂಡು ಜನರ ಮೆಚ್ಚುಗೆಯನ್ನು ಪಡೆದಿವೆ.ಅಲ್ಲದೆ ಸಾಮಾಜಿಕ ಜಾಗೃತಿ ಚಟುವಟಿಕೆ ಗಳಲ್ಲಿ ಇವರು ಸಕ್ರಿಯ ರಾಗಿದ್ದಾರೆ. ಇವರ ಸಾಹಿತ್ಯ ಸೇವೆ ಪರಿಗಣಿಸಿ ಖಿದ್ಮಾ ಫೌಂಡೆಶನ್ ಕರ್ನಾಟಕ ತನ್ನ 4 ನೇ ವರ್ಷದ ವಾರ್ಷಿಕೊತ್ಸವ ಪ್ರಯುಕ್ತ ಮಾರ್ಚ್ 5 ರನ್ದು ಧಾರವಾಡ ದಲ್ಲಿ ನಡೆಯುವ ಕಾರ್ಯಕ್ರಮ ದಲ್ಲಿ ಇವರಿಗೆ ಖಿದ್ಮಾ ಕಾವ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ವರದಿ : ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


