ಬೆಂಗಳೂರು: ದನದ ಮಾಂಸ ಪೂರೈಕೆ ಮಾಡುತ್ತಿದ್ದ ವ್ಯಕ್ತಿಯನ್ನು ಅಪಹರಿಸಿ 10 ಸಾವಿರ ಹಣ ಪಡೆದು, ಮಾಂಸ ದೋಚಿದ್ದ ಮಾಂಸದಂಗಡಿ ಮಾಲೀಕ ಸೇರಿದಂತೆ ನಾಲ್ವರನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿ ಕಾರನ್ನು ವಶಪಡಿಸಿಕೊಂಡಿದ್ದಾರೆ.
ದನದ ಮಾಂಸದಂಗಡಿ ಮಾಲೀಕ ಮೊಹಮ್ಮದ್ ಹಾಗೂ ಮಧು, ದಿನೇಶ್, ಕಾರ್ತಿಕ್ ಬಂಧಿತರು. ಇಲಿಯಾಸ್ ನಗರದಲ್ಲಿ ಮೊಹಮ್ಮದ್ ದನದ ಮಾಂಸದ ಅಂಗಡಿ ನಡೆಸುತ್ತಿದ್ದು, ಫಯಾಜ್ ಎಂಬಾತ ರಾಮನಗರದಿಂದ ಮಾಂಸವನ್ನು ಬೊಲೆರೋ ವಾಹನದಲ್ಲಿ ತಂದು ಈತನ ಅಂಗಡಿಗೆ ಕೊಡುತ್ತಿದ್ದರು.


