ಹಿರಿಯೂರು: ವಿ ವಿ ಸಾಗರ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಹಂಗಾಮಿನ ಕೃಷಿ ಬೆಳೆಗೆ ಅವಶ್ಯಕತೆಯಿರುವುದರಿಂದ ನೀರು ಹರಿಸಲು ಚಿತ್ರದುರ್ಗ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಫೆಬ್ರವರಿ 4 ರಂದು ವಿವಿ ಸಾಗರದ ಅಚ್ಚುಕಟ್ಟು ಪ್ರದೇಶಗಳಿಗೆ ಇಂದು ಹರಿಸಲಿದ್ದಾರೆ ಆದರೆ , ಆದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ವಿವಿ ನಾಲವನ್ನು ಅಚ್ಚುಕಟ್ಟು ಗೊಳಿಸದೆ ಪ್ಲಾಸ್ಟಿಕ್ , ಗಾಜು , ಕಸಕಡ್ಡಿ ತುಂಬಿರುವಂತಹ ನಾಲಕ್ಕೆ ನೀರು ಹರಿಸಲು ಸಿದ್ಧತೆ ಮಾಡಿದ್ದಾರೆ ಎಂದು ಇಲ್ಲಿನ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿರಿಯೂರು ತಾಲ್ಲೂಕಿನ ವಿ ವಿ ಸಾಗರದ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಹಂಗಾಮಿನ ಕೃಷಿ ಬೆಳೆಗೆ ಅವಶ್ಯಕತೆಯಿರುವ ಹಿನ್ನೆಲೆಯಲ್ಲಿ ಫೆ4ರಂದು ಇಂದು ನೀರು ಹರಿಸಲು ಆದೇಶಿಸಿದೆ . ಹಾಲಿ ಶೇಂಗಾ , ಮೆಕ್ಕಜೋಳ ಮತ್ತು ಹತ್ತಿ ಹಾಗೂ ಅಡಿಕೆ, ತೆಂಗು ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳಿಗೆ ನೀರಿನ ಅವಶ್ಯಕತೆ ಇದೆ . ಆದರೆ ತ್ಯಾಜ್ಯ ವಸ್ತುಗಳ ಹಾಗೂ ಫೈರುಗಳು ಬೆಳೆದಿರುವ ನಾಲೆಗಳ ಹೂಳು ತೆಗೆದು ಸ್ವಚ್ಛಗೊಳಿಸದೇ ನೀರು ಹರಿಸಲು ಮುಂದಾಗಿರುವುದು ಅವೈಜ್ಞಾನಿಕ. ಅಲ್ಲದೇ ಕೊನೆಯ ಭಾಗದವರೆಗೂ ನೀರು ಸರಗವಾಗಿ ಹೋಗುವುದು ಅನುಮಾನವಾಗಿದೆ ಎನ್ನುವ ಅಭಿಪ್ರಾಯಗಳು ಇದೀಗ ಕೇಳಿ ಬಂದಿವೆ.
ತಂಗುದಾಣವಾಗಿರುವ ನಗರದ ಟಿ.ಬಿ ವೃತ್ತದ ಹಾಗೂ ಹುಳಿಯಾರ ರಸ್ತೆಯ ಎರಡು ಕಡೆಗಳಲ್ಲಿ ಹಾದು ಹೋಗುವ ವಿವಿಸಾಗರದ ಎಡ ಹಾಗೂ ಬಲದಂಡೆ ನಾಲೆಗಳು ಕಸಕಡ್ಡಿಯ ರಾಶಿ , ಪ್ಲಾಸ್ಟಿಕ್ , ಗಾಜು , ಬಟ್ಟೆಬರೆಗಳು , ಮನೆಗಳ ಚರಂಡಿ ನೀರು , ಗಾಜಿನ ಬಾಟಲು , ಬೇಡವಾದ ಎಲ್ಲಾ ರೀತಿಯ ವಸ್ತುಗಳು ಸೇರಿದಂತೆ ತ್ಯಾಜ್ಯವಸ್ತುಗಳಿಂದ ಕೂಡಿದೆ. ಕೊಳಚೆ ನೀರು ನಿಂತು ನಾಲೆಯುದ್ದಕ್ಕೂ ನಾಚಿಕಟ್ಟಿ ಹಂದಿಗಳು ಉರುಳಾಡುವಂತಹ ಕೊಳಚೆ ಪ್ರದೇಶವಾಗಿದೆ. ಅಲ್ಲಲ್ಲಿ ಎತ್ತರಕ್ಕೆ ಬೆಳೆದು ನಿಂತಿರುವ ಕಳೆ, ಪೈರು, ಗಿಡಗಂಟೆಗಳು , ಮುಳ್ಳಿನ ಗಿಡಗಳಿವೆ. ಇಂತಹ ವ್ಯವಸ್ಥೆಯಲ್ಲಿ ನಾಲೆ ಸ್ವಚ್ಛಗೊಳಿಸದೇ ನೀರು ಹರಿಸಿದರೆ , ನಾಲೆಯಲ್ಲಿನ ಗಲೀಜೆಲ್ಲವೂ ಹೊಲಗಳಿಗೆ ಸೇರುತ್ತದೆ ಎಂದು ಜನರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಮ್ಯಾನುಯಲ್ ವರ್ಕರ್ ನೀಡಿದ್ದು , ಕಳೆದ ಎರಡು ತಿಂಗಳಿಂದ ಎರಡು ನಾಲೆಯಲ್ಲಿ ಬೆಳೆದಿರುವ ಜಂಗಲ್ ಹಾಗೂ ಗಿಡಗಂಟೆ ತೆಗೆಸಲಾಗಿದೆ . ಆದರೆ ನಾಲೆ ಹೂಳು 2-3 ವರ್ಷಗೊಳಿಗೊಮ್ಮೆ ಮಾತ್ರ ತೆಗೆಯುತ್ತೇವೆ . ಪ್ರತಿ ವರ್ಷದಂತೆ ಹೂಳು ತೆಗೆಯಲು ಅನುದಾನ ನೀಡುವುದಿಲ್ಲ . ಇದರಿಂದ ರೈತರ ಬೆಳೆಗಳಿಗೂ ಕೆಲವು ರೋಗಗಳು ತಗುಲುವ ಸಾಧ್ಯತೆಯಿದೆ . ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ನಾಲೆಯ ಮೂಲಕ ಅಚ್ಚುಕಟ್ಟೆ ಪ್ರದೇಶಗಳಿಗೆ ನೀರು ಹರಿಸುವ ಸಮಯದಲ್ಲಿ ನೀರಾವರಿ 2358 ನಾಲೆಯಲ್ಲಿ ಹೂಳು ತೆಗೆಸುವ ಕಾರ್ಯ ನಡೆಸಿದರೂ ಅದು ಕೇವಲ ನಾಮಾಕವಸ್ಥೆಗೆ ಮಾತ್ರ ಕೆಲಸ ಮಾಡಿತ್ತು .
ನೀರು ಹರಿಸುವ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಹೇಳಿದ್ರೆ, ನಾಲೆ ಸ್ವಚ್ಛಗೊಳಿಸಿ , ನೀರು ಹರಿಸಬೇಕು . ಗಡಿ ಭಾಗದ ಪ್ರತಿಯೊಬ್ಬ ತನ ಜಮೀನಿಗೂ ನೀರು ಹಾಯಿಸಬೇಕು ಎಂದು , ಅವರು ಕೂಡಾ ಎಲ್ಲಾ ಸಿದ್ಧತೆ ಮಾಡಿಕೊಂಡು ನೀರು ಹರಿಸುತ್ತೇವೆ ಎಂದಿದ್ದರು .
ಆದರೆ ನಾಲೆಯಲ್ಲಿ ಹೂಳು ತೆಗೆದಿರುವುದು ಎಲ್ಲಿಯೂ ಕಂಡುಬಂದಿಲ್ಲ . ಇದರಿಂದ ನೀರು ಪೋಲಾದರೆ ಅಧಿಕಾರಿಗಳೇ ಹೊಣೆಗಾರರು .ಎಂಬುದಾಗಿ ತಾಲ್ಲೂಕಿನ ರೈತರು ಸರ್ಕಾರದ ಮೇಲೆ ತೀವ್ರ ಬೇಸಾರ ವ್ಯಕ್ತಪಡಿಸಿದ್ದಾರೆ.
ಆದರೆ ತಿಂಗಳುಗಳು ಕಳೆದರೂ ವಿಲೇವಾರಿ ಮಾಡಲಿಲ್ಲ . ಕೊನೆಗೆ ನಿವಾಸಿಗಳು ಹಾಗೂ ಸಾರ್ವಜನಿಕರ ದೂರುಗಳಿಗೆ ಬೇಸತ್ತ ನೀರಾವರಿ ಇಲಾಖೆ ಅಧಿಕಾರಿಗಳು ಅದನ್ನೇಲ್ಲವನ್ನು ಬೇರೆಕಡೆಗೆ ವೀಲೆವಾರಿ ಮಾಡದೇ ಪುನಃ ನಾಲೆಗೆ ತಳ್ಳಿದರು . ಇದರಿಂದ ನಾಲೆಗಳು ಇನ್ನಷ್ಟೂ ಗಲೀಜು ಆಗಿವೆ. ಒಂದು ವರ್ಷದಿಂದ ಸಾಕಷ್ಟು ತಾಜ್ಯ ವಸ್ತುಗಳು ಸಾಲೆಯಲ್ಲಿ ತುಂಬಿವೆ . ಆದರೂ ಅಧಿಕಾರಿಗಳು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಪ್ರಸ್ತುತ ಜಲಾಶಯದಲ್ಲಿ 124.60 ಅಡಿ ನೀರು ಸಂಗ್ರಹವಿದ್ದು , ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಅವಶ್ಯಕತೆಯಿಂದ ಫೆ.4 ರಿಂದ 30 ದಿನಗಳವರೆಗೆ ನೀರು ಹರಿಸಲು ಚಿತ್ರದುರ್ಗ ಜಿಲ್ಲಾಧಿಕಾರಿ ಹಾಗೂ ನೀರಾವರಿ ಸಲಹಾ ಸಮಿತಿ ಆದೇಶ ನೀಡಿ , ನೀರು ನಿರ್ವಹಣೆ ಮಾಡಲು ಹಾಗೂ ಪೋಲಾಗದಂತೆ ಸೂಕ್ತ ಕಾನೂನು ಸುವ್ಯವಸ್ಥೆ ಮತ್ತು ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದರೂ , ಅಧಿಕಾರಿಗಳು ಮಾತ್ರ ಕ್ರಮಗಳನ್ನು ಕೈಗೊಳ್ಳದೇ ನೀರು ಹರಿಸಲು ಮುಂದಾಗಿದ್ದಾರೆ .
ಇದರಿಂದ ನೀರು ಹೆಚ್ಚು ಸೋಲಾಗುವುದರ ಜತೆಗೆ ಜಮೀನುಗಳಿಗೆ ಸರಗಳವಾಗಿ ನೀರು ತಲುಪುವುದು ಕಷ್ಟ ಅಡ್ಡ ಹಾದಿಯಲ್ಲಿ ಎಲ್ಲೆಡೆ ಹುದು ಅಪವ್ಯಯವಾಗಲಿದೆ ಎಂದು ಇಲ್ಲಿನ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ವರದಿ: ಮುರುಳಿಧರನ್ ಆರ್. ಹಿರಿಯೂರು ( ಚಿತ್ರದುರ್ಗ ).
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB