ಪಂಜಾಬ್: 6 ವರ್ಷದ ಮಗು ಕೊಳವೆ ಬಾವಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಪಂಜಾಬ್ ನ ಹೋಷಿಯಾರ್ ಪುರ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ರಿತಿಕ್ ರೋಷನ್ ಎಂಬ 6 ವರ್ಷ ವಯಸ್ಸಿನ ಬಾಲಕ ಆಟವಾಡುತ್ತಿದ್ದ ವೇಳೆ 300 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದು, ಘಟನೆ ಸಂಬಂಧ ಸಂಬಂಧ ಹೊಲದ ಮಾಲೀಕನ ವಿರುದ್ಧ ವಿವಿಧ ಐಪಿಸಿ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ.
ಭಾನುವಾರ ಹೊಲದಲ್ಲಿ ಆಟವಾಡುತ್ತಿದ್ದ ರಿತಿಕ್ ನನ್ನು ನಾಯಿಗಳು ಅಟ್ಟಿಸಿಕೊಂಡು ಬಂದಿದೆ. ಈ ವೇಳೆ ಆತ ಹೆದರಿ, ಸೆಣಬಿನ ಚೀಲ ಮುಚ್ಚಲಾಗಿದ್ದ 9 ಇಂಚಿನ ಅಗಲ ಇರುವ ಕೊಳವೆ ಬಾವಿಯನ್ನು ಹತ್ತಿದ್ದು, ಈ ವೇಳೆ ಮಗು ಕೊಳವೆ ಬಾವಿಯೊಳಗೆ ಕುಸಿದು ಬಿದ್ದಿದ್ದಾನೆ.
7 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ, ಮಗುವನ್ನು ಬಾವಿಯಿಂದ ಹೊರಗೆ ತರಲಾಗಿತ್ತು. ಆದರೆ, ಮಗುವಿನ ಶ್ವಾಸಕೋಶದಲ್ಲಿ ಹೆಚ್ಚು ನೀರು ಪ್ರವೇಶಿಸಿದ್ದರಿಂದ ಮಗು ಉಳಿಯಲಿಲ್ಲ ಎಂದು ಹಿರಿಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5