ಬೆಳಗಾವಿ: ಬೆಳಗಾವಿಯ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಬಸರೀಕಟ್ಟಿ ಗ್ರಾಮದಲ್ಲಿ ಫೆ.20ರ ರಾತ್ರಿ ವೇಳೆಯಲ್ಲಿ ಮಾರುತಿ ಪವನ ತಂದೆ ಪರಶುರಾಮ ಖನ್ನುಕರ, (32) ಎನ್ನುವವನನ್ನು ಕೊಲೆ ಮಾಡಿದ ಆರೋಪದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಯಾರೋ ದುಷ್ಕರ್ಮಿಗಳು ಮಾರುತಿಯನ್ನು ಕೊಲೆ ಮಾಡಿದ ಬಗ್ಗೆ ಆತನ ತಂದೆ ಪರಶುರಾಮ ಬಸವಂತ ಖನ್ನುಕರ್ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸ್ ಆಯುಕ್ತರು, ಡಿಸಿಪಿ (ಕಾ&ಸು) ಬೆಳಗಾವಿ ನಗರ ಹಾಗೂ ಗೋಪಾಲಕೃಷ್ಣ ಗೌಡರ ಎಸಿಪಿ ಬೆಳಗಾವಿ ಗ್ರಾಮೀಣ ಉಪವಿಭಾಗ ಇವರ ಮಾರ್ಗದರ್ಶನದಲ್ಲಿ ಮಾರಿಹಾಳ ಪೊಲೀಸ್ ಠಾಣೆಯ ಪಿಐ ಚಂದ್ರಶೇಖರ ತಿಗಡಿ ನೇತೃತ್ವದ ತಂಡವು ಕಾರ್ಯಪ್ರವೃತ್ತರಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.
1] ಸೋಮನಾಥ ಗುಂಡು ಗೋಮನ್ನಾಟೆ. (25) ಸಾ ತಾನಾಜಿ ಗಲ್ಲ, ನಿಲಜಿ. ತಾ,ಜಿ!! ಬೆಳಗಾವಿ,
2] ಪ್ರಶಾಂತ@ಪರಶುರಾಮ ವಸಂತ ಮೋದಗೇಕರ, (27) ಸಾ ಬ್ರಹ್ಮ ನಗರ, ನಿಲಜಿ. ತಾ,ಜಿ|| ಬೆಳಗಾವಿ ಬಂಧಿತರು.
ಇವರನ್ನು ಪತ್ತೆ ಮಾಡಿ ದಿನಾಂಕ 23/02/2023 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದ ತನಿಖೆ ಮುಂದುವರೆಸಲಾಗಿದೆ ಎಂದರು.
ಕೊಲೆ ಆರೋಪಿತರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಶ್ರಮಿಸಿದ ಪಿಐ ಮಾರಿಹಾಳ ಹಾಗೂ ಅವರ ತಂಡದ ಕಾರ್ಯವೈಖರಿಯನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗಳು ಶ್ಲಾಘಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


