ಬೀದರ್: ಜಿಲ್ಲೆಯ ಔರಾದ ತಾಲೂಕಿನ ಕೊಳ್ಳುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕ ಕಲ್ಲಪ್ಪ ಬೋರಾಳೆ ಅವರಿಗೆ ಬೀಳ್ಕೊಡುಗೆ ಸಮಾರಂಭ ಆಚರಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಟಿ.ಎಚ್.ರಂಗೇಶ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ಶಿಶು ಅಭಿವೃದ್ಧಿ ಅಧಿಕಾರಿ ಈಮಲ್ಲಪ್ಪಾ, ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಮಕ್ಕಳ ಹಕ್ಕುಗಳು ಬಗ್ಗೆ ತಿಳಿಸಿದರು ಮತ್ತು ಬಾಲ್ಯ ವಿವಾಹ ಮಕ್ಕಳ ದೌರ್ಜನ್ಯಗಳು ತಡೆಯುವಂತೆ ಪೋಷಕರಲ್ಲಿ ಜಾಗೃತಿ ಮೂಡಿಸಿದರು.
ಚಿಂತಾಕಿ ಪೊಲೀಸ್ ಠಾಣೆ ಪಿಎಸ್ ಐ ಚಂದ್ರಶೇಖರ್ ನಿರ್ಣಾಕರ್ ಅವರು ಮಾತನಾಡಿ, ಮಕ್ಕಳ ಕೈಗಳಿಗೆ ಮೊಬೈಲ್ ನೀಡಿ ಅವರ ಭವಿಷ್ಯ ಹಾಳು ಮಾಡಬೇಡಿ ಮತ್ತು ಅಪ್ರಾಪ್ತ ಮಕ್ಕಳ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ ಪಾಲಕರು ಮತ್ತು ಶಿಕ್ಷಕರು ಜಾಗೃತರಾಗಿ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವ ಕಡೆ ಗಮನಹರಿಸುವಂತೆ ಕರೆ ನೀಡಿದರು.
ಕೊಳ್ಳುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 26 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಶಾಲೆಯಿಂದ ವರ್ಗಾವಣೆಗೊಂಡ ಕಲ್ಲಪ್ಪ ಬೋರಳೆ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಿ ಅವರಿಗೆ ಅದ್ದೂರಿಯಾಗಿ ಸನ್ಮಾನ ಮಾಡಿ ಗೌರವಿಸಲಾಯಿತು.
ಮುಖಂಡ ಸುಧಾಕರ ಕೊಳ್ಳುರ ಅವರು ಮಾತನಾಡಿ, ಮಕ್ಕಳ ದಿನಾಚರಣೆ ಅಂದು ಮಕ್ಕಳ ಹಕ್ಕುಗಳು ಮತ್ತು ಅವರ ಭವಿಷ್ಯದ ಕನಸುಗಳು ಬಗ್ಗೆ ತಿಳಿ ಹೇಳಿದರು. 26 ವರ್ಷಗಳ ಕಾಲ ಶಿಕ್ಷಕರಾಗಿ ನಮ್ಮ ಶಾಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಶ್ರಮ ಪಟ್ಟ ಶಿಕ್ಷಕ ಕಲ್ಲಪ್ಪ ಬೋರಾಳೆ ಅವರ ಸೇವೆ ಶ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ವಿಜಯಕುಮಾರ್ ದೇಗಲವಾಡೆ ವಹಿಸಿದ್ದರು. ಗ್ರಾಮದ ಮುಖಂಡರಾದ ಸೂರ್ಯಕಾಂತ್ ಮಜ್ಜಗೆ, ಬಾಬುರಾವ್ ಪಾಟೀಲ್, ವಿಶ್ವನಾಥ ಸ್ವಾಮಿ, ಶಿವಲಿಂಗಯ್ಯ ಸ್ವಾಮಿ, ಸೂರ್ಯಕಾಂತ್ ವರ್ಮಾ, ಸೂರ್ಯಕಾಂತ್ ಸೋಮ, ಶಿವಲಿಂಗಯ್ಯ ಸ್ವಾಮಿ, ವಿಜಯಕುಮಾರ ಜಾಧವ ವೇದಿಕೆ ಮೇಲೆ ಉಪಸ್ಥಿತರಿದ್ದು ಮಾತನಾಡಿದರು
ಶಿಕ್ಷಕರಾದ ರಾಜಕುಮಾರ್ ಚಳಕಾಪೂರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಆಶಾ ಬಿ. ಅವರು ಕಾರ್ಯಕ್ರಮದ ನಿರೂಪಣೆ ನಡೆಸಿಕೊಟ್ಟರು, ಶಿಕ್ಷಕರಾದ ರಾಜಕುಮಾರ್ ಪಾಂಚಾಳ್, ಮುಕ್ತ ಬಾಯ್, ದಸರತ್, ಧರ್ಮಪ್ರಿಯ, ಜ್ಯೋತಿ, ಫಯಾಜ್ , ರಿಯಾಜ್ ಪಾಷಾ ಮುಂತಾದವರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


