ಚೆನ್ನೈ: ಕಾಲಿವುಡ್ ನಟ ಬಿಜಿಲಿ ರಮೇಶ್ ಇಂದು ಬೆಳಗ್ಗೆ ನಿಧನರಾಗಿದ್ದು, ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಿಜಿಲಿ ರಮೇಶ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಚೆನ್ನೈನ ಎಂಜಿಆರ್ ನಗರದಲ್ಲಿರುವ ರುದ್ರಭೂಮಿಯಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ.
ಬಿಜಿಲಿ ರಮೇಶ್ ಸಿನಿಮಾದಲ್ಲಿ ಪೋಷಕ ಪಾತ್ರಗಳು ಮತ್ತು ಯೂಟ್ಯೂಬ್‌ನಲ್ಲಿ ಪ್ರ್ಯಾಂಕ್ ವಿಡಿಯೋಗಳನ್ನು ಮಾಡಿ ಫೇಮಸ್ ಆಗಿದ್ದರು.
ಕುಡಿತದ ಚಟಕ್ಕೆ ದಾಸರಾಗಿದ್ದ ಇವರು ಲಿವರ್ ಗೆ ಸಂಬಂಧಿಸಿದ ಕಾಯಿಲೆಗೆ ತುತ್ತಾಗಿದ್ದರು. ಇದರೊಂದಿಗೆ ಆರ್ಥಿಕ ಸಂಕಷ್ಟವೂ ಕಾಡಿತ್ತು ಎಂದು ತಿಳಿದು ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q