ಕೊರಟಗೆರೆ: ತಾಲೂಕಿಗೆ ನೀಡಲಾಗಿರುವ ತುರ್ತು ಪೊಲೀಸ್ ವಾಹನ 112 ಪದೇ ಪದೇ ದಾರಿಯಲ್ಲಿ ಕೆಟ್ಟು ನಿಲ್ಲುತ್ತಿದ್ದು, ಇದು ಪೊಲೀಸರಿಗೆ ಮತ್ತು ಸಾರ್ವಜನಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ರಾತ್ರಿ ತುರ್ತು ಕರೆ ಬಂದಾಗ ಪೊಲೀಸರು ತೆರಳುವ ವೇಳೆ ಪೊಲೀಸ್ ಜೀಪ್ ಕೆಟ್ಟು ನಿಂತಿರುವ ಹಲವು ಉದಾಹರಣೆಗಳಿವೆ. ಜೊತೆಗೆ ರಾತ್ರಿ ಯಾರಾದರೂ ತುರ್ತು ಕರೆ ಮಾಡಿದರೆ, ಜೀಪು ಸ್ಟಾರ್ಟ್ ಆಗುತ್ತೋ, ಇಲ್ಲವೋ ಎಂದು ಸಿಬ್ಬಂದಿ ಭಯಪಡುವಂತಹ ಸನ್ನಿವೇಶ ಸೃಷ್ಟಿಯಾಗಿದೆ ಎಂದು ವರದಿಯಾಗಿದೆ.
ಕೆಟ್ಟು ನಿಂತಾಗ ಸಿಬ್ಬಂದಿಯೇ ಸಾರ್ವಜನಿಕರ ಸಹಾಯದಿಂದ ವಾಹನ ತಳ್ಳಿಸಿಕೊಂಡು ಹೋಗಬೇಕಾದ ಸನ್ನಿವೇಶ ಸಾಮಾನ್ಯವಾಗಿದೆ, ಜನರು ನಮ್ಮ ಮೇಲೆ ಆರೋಪ ಮಾಡುತ್ತಾರೆ. ನಾವು ತುರ್ತಾಗಿ ಕರೆ ಬಂದ ಸ್ಥಳಕ್ಕೆ ತಲುಪುವಾಗಲೇ ಜೀಪ್ ಒಮ್ಮೊಮ್ಮೆ ಕೈಕೊಡುತ್ತದೆ. ಇದರಿಂದ ಸಮಸ್ಯೆಯಾಗುತ್ತಲೇ ಇದೆ ಎಂದು ಪೊಲೀಸ್ ಸಿಬ್ಬಂದಿ ಹೇಳುತ್ತಿದ್ದಾರೆ.
ಈ ವಾಹನಗಳನ್ನು ಸ್ಥಳೀಯ ವರ್ಕ್ ಷಾಪ್ ಗಳಲ್ಲಿ ದುರಸ್ತಿ ಮಾಡಲಾಗುತ್ತಿದೆಯೊ ತಿಳಿಯದು. ಆದರೆ ಮೆಕ್ಯಾನಿಕ್ ಗಳು ಬಂದು ಸರಿಪಡಿಸಿದರೂ ಈ ಜೀಪ್ ಗಳು ಸ್ಥಿರವಾಗಿ ಕೆಲಸ ಮಾಡುವುದಿಲ್ಲ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC