ಕೊರಟಗೆರೆ: ತಾಲೂಕಿನ ಬೋಡ ಬಂಡೆನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಚುನಾವಣೆಯ ಪರ್ವ ದೇಶದ ಗರ್ವ ಎಂಬ ಧ್ವಜವನ್ನು ಹಾರಿಸಿ ಮತದಾನದ ಮಹತ್ವವನ್ನು ಸಾರಲಾಯಿತು.
ಮತದಾರರ ನಡೆ ಮತಗಟ್ಟೆಯ ಕಡೆ ಮತದಾನದ ಮಹತ್ವದ ಬಗ್ಗೆ ವಿಶೇಷ ಅರಿವು ಕಾರ್ಯಕ್ರಮದ ಅಂಗವಾಗಿ ಗ್ರಾಮದ ಅಶ್ವಥ್ ಕಟ್ಟೆಯ ಬಳಿ ಅಧಿಕಾರಿಗಳು ಹಾಗೂ ಗ್ರಾಮದ ಪ್ರಜ್ಞಾವಂತ ಮತದಾರರು, ಮತದಾನದ ಪ್ರತಿಜ್ಞೆ ಮಾಡುವ ಮೂಲಕ ಮತದಾನದ ಅರಿವು ಮೂಡಿಸಿದರು.
ಸಂವಿಧಾನವು ನಮಗಾಗಿ ಕೊಟ್ಟ ಬಳುವಳಿ ಈ ಮಹತ್ವದ ಮತದಾನ, ಆದ್ದರಿಂದ ಪ್ರತಿಯೊಬ್ಬರೂ ಕೂಡ ಮತದಾನ ಮಾಡಬೇಕು ಮತದಾನ ನಮ್ಮ ಹಕ್ಕು ನಾವು ಅದನ್ನ ಚಲಾಯಿಸಲೇಬೇಕು. ಏಪ್ರಿಲ್ 26 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ. 18 ವರ್ಷ ಮೇಲ್ಪಟ್ಟ ಎಲ್ಲಾ ಯುವಕ ಯುವತಿಯರು ಹಿರಿಯರು ಸೇರಿ ನೂರಕ್ಕೆ ನೂರರಷ್ಟು ಮತದಾನವನ್ನು ಮಾಡಲೇಬೇಕು. ತಪ್ಪದೇ ನಾವೆಲ್ಲರೂ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು ಅದು ನಮ್ಮೆಲ್ಲರ ಕರ್ತವ್ಯ ಎಂದು ಜಾಗೃತಿ ಮೂಡಿಸಲಾಯಿತು.
ಈ ವೇಳೆ ಸ್ಥಳೀಯ ಬಿ ಎಲ್ ಓ ನಾರಾಯಣಪ್ಪ, ಅಂಗನವಾಡಿ ಶಿಕ್ಷಕಿ ಛಾಯಾದೇವಿ, ಗ್ರಾಮ ಪಂಚಾಯತಿಯ ಸ್ವಚ್ಛತಾ ವಾಹನದ ಚಾಲಕಿ ಮೀನಾಕ್ಷಿ ಹಾಗೂ ಯುವಕರು ಹಿರಿಯರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296