ಕೊರಟಗೆರೆ : ಕೊರಟಗೆರೆಯ ಗ್ರಾಮೀಣ ಮತ್ತು ಪಟ್ಟಣದಲ್ಲಿ ಇದುವರೇಗೆ 168 ಡೆಂಗ್ಯೂ ಪ್ರಕರಣ ಪತ್ತೆಯಾಗಿದೆ. ಸ್ವಚ್ಚತೆ ಇಲ್ಲದೇ ಅನೈರ್ಮಲ್ಯ ಹೆಚ್ಚಾಗಿ ಡೇಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗ್ತಿದೆ.
ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 168 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಡೆಂಗ್ಯೂಜ್ವರ ಹೆಚ್ಚಾಗಿ ಕೊರಟಗೆರೆಯ ಪಟ್ಟಣ ಮತ್ತು ಗ್ರಾಮೀಣದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿಯ ಜೆಟ್ಟಿಅಗ್ರಹಾರ ಗ್ರಾಮ ಪಂಚಾಯಿತಿಯ ಜಂಪೇನಹಳ್ಳಿ ಕ್ರಾಸಿಗೆ ಮೂಲಸೌಲಭ್ಯವೇ ಮರೀಚಿಕೆಯಾಗಿದೆ. ಜಂಪೇನಹಳ್ಳಿ ಕ್ರಾಸ್ ಒಂದೇ ಗ್ರಾಮದಲ್ಲೇ 8ಕ್ಕೂ ಅಧಿಕ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆ.
ಚರಂಡಿ ಮತ್ತು ರಸ್ತೆಗಳೇ ಇಲ್ಲದ ಜಂಪೇನಹಳ್ಳಿ ಕ್ರಾಸಿನಲ್ಲಿ ಅನೈರ್ಮಲ್ಯ ಹೆಚ್ಚಳವಾಗಿದೆ. ಚರಂಡಿಗಳೇ ಇಲ್ಲದೇ ಕೆರೆಯಂತಾದ ರಸ್ತೆಗಳ ಅಕ್ಕಪಕ್ಕ ಅನೈರ್ಮಲ್ಯ ತಾಂಡವವಾಡುತ್ತಿದೆ.
ಜೆಟ್ಟಿಅಗ್ರಹಾರ ಗ್ರಾಮ ಪಂಚಾಯಿತಿ ಪಿಡಿಓ ಮತ್ತು ತಾಲೂಕು ಪಂಚಾಯಿತಿ ಇಓ ನಿರ್ಲಕ್ಷ್ಯದ ವಿರುದ್ದ ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡೆಂಗ್ಯುಊ ಪ್ರಕರಣ ಏರಿಕೆಯಾದ್ರು ಆರೋಗ್ಯ ಮತ್ತು ಗ್ರಾಮ ಪಂಚಾಯಿತಿ ನಿರ್ಲಕ್ಷ್ಯವಹಿಸಿದೆ. ಹಳ್ಳಿಗಳಿಗೆ ಮೂಲಸೌಲಭ್ಯ ಕಲ್ಪಿಸುವಲ್ಲಿ 24 ಗ್ರಾಮ ಪಂಚಾಯಿತಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎನ್ನುವ ಆಕ್ರೋಶಗಳು ಕೇಳಿ ಬಂದಿವೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q