nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಹಿಳೆಯರಿಂದಲೇ ಮಹಿಳೆಯರ ಮೇಲೆ ನಡೆಯುವ ಶೋಷಣೆಗಳು ಮೊದಲು ನಿಲ್ಲಲಿ: ತಹಶೀಲ್ದಾರ್ ಮಮತಾ ಎಂ.

    March 9, 2026

    ಕೊರಟಗೆರೆ: ಮೂಢನಂಬಿಕೆಯಿಂದಾಗಿ ಬಳಕೆಯಾಗದೆ ಪಾಳುಬಿದ್ದ ಬಾಲಿಕಾ ವಿದ್ಯಾರ್ಥಿನಿಲಯ

    March 9, 2026

    ಕಣ್ಣಿನ ಶಸ್ತ್ರಚಿಕಿತ್ಸೆಗೆ ಲಂಚ ಕೇಳಿದ್ದ ತುಮಕೂರು ಜಿಲ್ಲಾ ಆಸ್ಪತ್ರೆ ವೈದ್ಯೆ ಲೋಕಾಯುಕ್ತ ಬಲೆಗೆ

    March 9, 2026
    Facebook Twitter Instagram
    ಟ್ರೆಂಡಿಂಗ್
    • ಮಹಿಳೆಯರಿಂದಲೇ ಮಹಿಳೆಯರ ಮೇಲೆ ನಡೆಯುವ ಶೋಷಣೆಗಳು ಮೊದಲು ನಿಲ್ಲಲಿ: ತಹಶೀಲ್ದಾರ್ ಮಮತಾ ಎಂ.
    • ಕೊರಟಗೆರೆ: ಮೂಢನಂಬಿಕೆಯಿಂದಾಗಿ ಬಳಕೆಯಾಗದೆ ಪಾಳುಬಿದ್ದ ಬಾಲಿಕಾ ವಿದ್ಯಾರ್ಥಿನಿಲಯ
    • ಕಣ್ಣಿನ ಶಸ್ತ್ರಚಿಕಿತ್ಸೆಗೆ ಲಂಚ ಕೇಳಿದ್ದ ತುಮಕೂರು ಜಿಲ್ಲಾ ಆಸ್ಪತ್ರೆ ವೈದ್ಯೆ ಲೋಕಾಯುಕ್ತ ಬಲೆಗೆ
    • ನಡೆಯಲಿಲ್ಲ ಪವಾಡ!: ಮಲ್ಲಿಕಾರ್ಜುನ ಮುತ್ಯಾಗೆ ಬಿಗ್ ಶಾಕ್ | ಜಾಮೀನು ಅರ್ಜಿ ವಜಾ
    • ಬರಗೂರು ‘ಕೆಪಿಎಸ್ ಮ್ಯಾಗ್ನೆಟ್’ ಯೋಜನೆ ಕೈಬಿಡಿ:  AIDSO ಆಗ್ರಹ
    • ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹತ್ಯೆ; ಪವಾಡಸದೃಶ ರೀತಿಯಲ್ಲಿ ಬದುಕುಳಿದ 2 ವರ್ಷದ ಕಂದಮ್ಮ!
    • ಆಟಿಕೆ ಗನ್ ತೋರಿಸಿ ‘ಪ್ರಾಂಕ್’ ಮಾಡಲು ಯತ್ನಿಸಿದ ಯುವಕನಿಗೆ ಸಂಕಷ್ಟ!
    • RSS ನಿಷೇಧ ವಿಚಾರ ಅನಗತ್ಯ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೊರಟಗೆರೆ: ಮೂಢನಂಬಿಕೆಯಿಂದಾಗಿ ಬಳಕೆಯಾಗದೆ ಪಾಳುಬಿದ್ದ ಬಾಲಿಕಾ ವಿದ್ಯಾರ್ಥಿನಿಲಯ
    ಕೊರಟಗೆರೆ March 9, 2026

    ಕೊರಟಗೆರೆ: ಮೂಢನಂಬಿಕೆಯಿಂದಾಗಿ ಬಳಕೆಯಾಗದೆ ಪಾಳುಬಿದ್ದ ಬಾಲಿಕಾ ವಿದ್ಯಾರ್ಥಿನಿಲಯ

    By adminMarch 9, 2026No Comments2 Mins Read
    student hostel

    ತುಮಕೂರು (ಕೊರಟಗೆರೆ): ಗ್ರಾಮೀಣ ಭಾಗದ ಬಾಲಕಿಯರ ಶಿಕ್ಷಣಕ್ಕೆ ಅನುಕೂಲವಾಗಲೆಂದು ಸರ್ಕಾರದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡವೊಂದು ಮೂಢನಂಬಿಕೆಯ ಕಾರಣಕ್ಕೆ ಒಂದು ದಿನವೂ ಬಳಕೆಯಾಗದೆ ಹಾಳಾಗುತ್ತಿರುವ ಘಟನೆ ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರ ಗ್ರಾಮದಲ್ಲಿ ವರದಿಯಾಗಿದೆ.

    ಸುಮಾರು ಏಳು–ಎಂಟು ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸುಮಾರು ₹69 ಲಕ್ಷ ವೆಚ್ಚದಲ್ಲಿ ಕಸ್ತೂರಿಬಾ ಗಾಂಧಿ ಬಾಲಿಕಾ ವಿದ್ಯಾರ್ಥಿ ನಿಲಯದ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಗಿತ್ತು. ಇದರಲ್ಲಿ ವಸತಿ ಕೊಠಡಿಗಳು, ಅಡುಗೆಮನೆ, ಶೌಚಾಲಯ ಹಾಗೂ ಸೋಲಾರ್ ವ್ಯವಸ್ಥೆಯಂತಹ ಎಲ್ಲಾ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ಆದರೆ, ಅಂದಿನಿಂದ ಇಂದಿನವರೆಗೂ ಈ ಕಟ್ಟಡದ ಬಾಗಿಲು ತೆರೆದಿಲ್ಲ.


    Provided by
    Provided by

    ಅಡ್ಡಿಯಾದ ಮೂಢನಂಬಿಕೆ:

    ಈ ವಿದ್ಯಾರ್ಥಿನಿಲಯದ ಸಮೀಪದಲ್ಲೇ ಗ್ರಾಮದೇವತೆ ‘ಏಳುಮಂದೆಮ್ಮ’ ದೇವಸ್ಥಾನವಿದೆ. ದೇವಿಯ ಪಾರಂಪರಿಕ ಕಟ್ಟುಪಾಡುಗಳ ಪ್ರಕಾರ, ಋತುಸ್ರಾವವಾದ ಮಹಿಳೆಯರು ಅಥವಾ ಬಾಣಂತಿಯರು ಈ ಭಾಗದಲ್ಲಿ ಸಂಚರಿಸಬಾರದು ಎಂಬ ಬಲವಾದ ನಂಬಿಕೆ ಗ್ರಾಮದಲ್ಲಿದೆ. ಒಂದು ವೇಳೆ ಈ ನಿಯಮವನ್ನು ಮೀರಿದರೆ ದೇವಿಯ ಮುನಿಸಿಗೆ ಗುರಿಯಾಗಿ ಅನಾಹುತಗಳು ಸಂಭವಿಸಬಹುದು ಎಂಬ ಭಯ ಗ್ರಾಮಸ್ಥರಲ್ಲಿದೆ. ಈ ಕಾರಣದಿಂದಾಗಿ ಹೆಣ್ಣು ಮಕ್ಕಳನ್ನು ಈ ವಸತಿ ನಿಲಯಕ್ಕೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಹಿಂದಿನ ಬಿಇಒ ಹಾಗೂ ಪ್ರಸಿದ್ಧ ವಿಚಾರವಾದಿ ಹುಲಿಕಲ್ ನಟರಾಜು ಅವರು ಗ್ರಾಮಕ್ಕೆ ಭೇಟಿ ನೀಡಿ, ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದರು. ಆದರೂ ಜನರ ಮನಸ್ಸಿನಿಂದ ಈ ಭಯ ದೂರವಾಗಿಲ್ಲ. ನಿಲಯ ಬಳಕೆಯಾಗದ ಕಾರಣ ಕಟ್ಟಡದ ಕಿಟಕಿ–ಬಾಗಿಲುಗಳು ಜೀರ್ಣಾವಸ್ಥೆಗೆ ತಲುಪಿದ್ದು, ಸೋಲಾರ್ ವ್ಯವಸ್ಥೆ ಕೂಡ ಹಾಳಾಗುತ್ತಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.

    ಲಕ್ಷಾಂತರ ರೂಪಾಯಿ ವೆಚ್ಚದ ಸರ್ಕಾರಿ ಸ್ವತ್ತು ವ್ಯರ್ಥವಾಗುತ್ತಿರುವುದಕ್ಕೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. “ಗ್ರಾಮದ ಮಧ್ಯಭಾಗದಲ್ಲಿರುವ ಬಾಲಕರ ವಿದ್ಯಾರ್ಥಿನಿಲಯವನ್ನು ಈ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿ, ಬಾಲಕಿಯರ ವಸತಿ ನಿಲಯವನ್ನು ಗ್ರಾಮದ ಒಳಗಿನ ಸುರಕ್ಷಿತ ಜಾಗಕ್ಕೆ ಬದಲಾಯಿಸಿದರೆ, ಯಾವುದೇ ವಿವಾದಗಳಿಲ್ಲದೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ” ಎಂದು ಸ್ಥಳೀಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಒಟ್ಟಿನಲ್ಲಿ, ವೈಜ್ಞಾನಿಕ ಯುಗದಲ್ಲೂ ಮೂಢನಂಬಿಕೆಯ ಕಾರಣಕ್ಕೆ ಬಾಲಕಿಯರ ಶೈಕ್ಷಣಿಕ ಸೌಲಭ್ಯವೊಂದು ವ್ಯರ್ಥವಾಗುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆಯಾಗಿದೆ. ಮಹಿಳಾ ಆಯೋಗ ಇತ್ತ ಗಮನ ಹರಿಸಬೇಕಿದೆ ಅನ್ನೋ ಮಾತುಗಳು ಕೂಡ ಕೇಳಿ ಬರುತ್ತಿದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಆದಿಶಕ್ತಿ ದೇವತೆಗಳ ಪವಾಡ ರಾಜ್ಯದ ಗಮನ ಸೆಳೆದಿದೆ: ಶಶಾಂಕ್‌ ರಾಜ್

    March 8, 2026

    ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಲು ಶಾರದಾ ಪೂಜೆ ಅತ್ಯಂತ ಮಂಗಳಕರ: ಮುಖ್ಯ ಶಿಕ್ಷಕಿ ಮಂಜುಳ

    March 8, 2026

    ನಿರ್ವಹಣೆ ಕೊರತೆ: ಕೇವಲ 15 ವರ್ಷದಲ್ಲೇ ಶಿಥಿಲಾವಸ್ಥೆ ತಲುಪಿದ ಕೊರಟಗೆರೆ ಮಿನಿ ವಿಧಾನಸೌಧ

    March 7, 2026

    Leave A Reply Cancel Reply

    Our Picks

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಮಹಿಳೆಯರಿಂದಲೇ ಮಹಿಳೆಯರ ಮೇಲೆ ನಡೆಯುವ ಶೋಷಣೆಗಳು ಮೊದಲು ನಿಲ್ಲಲಿ: ತಹಶೀಲ್ದಾರ್ ಮಮತಾ ಎಂ.

    March 9, 2026

    ಚಿಕ್ಕನಾಯಕನಹಳ್ಳಿ: ತನ್ನ ಕುಟುಂಬದ ಪ್ರತಿಯೊಬ್ಬ ಸದಸ್ಯರ ಏಳಿಗೆಗಾಗಿ ಶ್ರಮಿಸಿ, ಅವರನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವುದೇ ಒಬ್ಬ ಮಹಿಳೆಯ ಜೀವನದ ದೊಡ್ಡ…

    ಕೊರಟಗೆರೆ: ಮೂಢನಂಬಿಕೆಯಿಂದಾಗಿ ಬಳಕೆಯಾಗದೆ ಪಾಳುಬಿದ್ದ ಬಾಲಿಕಾ ವಿದ್ಯಾರ್ಥಿನಿಲಯ

    March 9, 2026

    ಕಣ್ಣಿನ ಶಸ್ತ್ರಚಿಕಿತ್ಸೆಗೆ ಲಂಚ ಕೇಳಿದ್ದ ತುಮಕೂರು ಜಿಲ್ಲಾ ಆಸ್ಪತ್ರೆ ವೈದ್ಯೆ ಲೋಕಾಯುಕ್ತ ಬಲೆಗೆ

    March 9, 2026

    ನಡೆಯಲಿಲ್ಲ ಪವಾಡ!: ಮಲ್ಲಿಕಾರ್ಜುನ ಮುತ್ಯಾಗೆ ಬಿಗ್ ಶಾಕ್ | ಜಾಮೀನು ಅರ್ಜಿ ವಜಾ

    March 9, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.