ಕೊರಟಗೆರೆ:15ವರ್ಷಗಳಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಅವಕಾಶ ನೀಡಿದ್ದೀರಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಈ ಬಾರಿ ಬಿಜೆಪಿ ಬೆಂಬಲಿಸಿ ಕ್ಷೇತ್ರದಲ್ಲಿನ ಕುಂದುಕೊರತೆಗಳನ್ನು ಸರಿಪಡಿಸಲು ಸಹಕರಿಸಿ ಎಂದು ಬಿಜೆಪಿ ಅಭ್ಯರ್ಥಿ ಬಿ.ಎಚ್.ಅನಿಲ್ ಕುಮಾರ್ ಮನವಿ ಮಾಡಿದರು.
ಕೋರ ಹೋಬಳಿಯ ಗೊಲ್ಲಹಳ್ಳಿ ಸುಪ್ರಸಿದ್ಧ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದು ಮತಯಾಚನೆ ಪ್ರಾರಂಭಿಸಿದ ಬಿ.ಹೆಚ್ ಅನಿಲ್ ಕುಮಾರ್ ಮತದಾರರನ್ನು ಉದ್ದೇಶಿ ಮಾತನಾಡಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾ ಹೋಬಳಿಯ ಗೊಲ್ಲಹಳ್ಳಿ ಗ್ರಾಮದ ಮನೆ ಮನೆಗೆ ತೆರಳಿ ಬಿಜೆಪಿ ಯೋಜನೆಗಳನ್ನು ಜನರಿಗೆ ತಿಳಿಸಿ ಮತಯಾಚನೆ ಮಾಡಿದರು, ಕ್ಷೇತ್ರದಲ್ಲಿ ಅಭ್ಯರ್ಥಿ ಅನಿಲ್ ಕುಮಾರ್ ರವರಿಗೆ ಆರತಿ ಬೆಳಗುವುದರ ಮೂಲಕ ಪ್ರತಿ ಗ್ರಾಮದಲ್ಲಿ ಅದ್ಧೂರಿ ಸ್ವಾಗತ ಕೋರಿ ಮತ ನೀಡುವ ಆಶ್ವಾಸನೆ ನೀಡುತ್ತಿರುವುದೇ ಬಿಜೆಪಿ ಗೆದ್ದು ಇತಿಹಾಸ ಬರೆಯಲಿದೆ.
ಕೋರಾ ಹೋಬಳಿ ಸುಮಾರು 80 ಗ್ರಾಮಗಳ ಮನೆ ಮನೆಗೆ ಭೇಟಿ ನೀಡಿ ಬಿಜೆಪಿ ಕಮಲ ಗುರುತಿಗೆ ಮತನೀಡಿ ಎಂದು ಮನವಿ ಮಾಡಿದರು. ಎಲ್ಲಾ ಗ್ರಾಮಗಳಲ್ಲಿಯೂ ಅಭೂತಪೂರ್ವ ಬೆಂಬಲ ದೊರೆಯುತ್ತಿದ್ದು, ಈ ಬಾರಿ ಸುಮಾರು 25 ಸಾವಿರ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಕ್ಷೇತ್ರದ ಜನತೆ ಅತೀ ಹೆಚ್ಚಿನ ಸಂಖ್ಯೆ ಯಲ್ಲಿ ಸಹಕರಿಸಿ ಎಂದರು.
ಬಿಬಿಎಂಪಿ ಮಾಜಿ ಕಾರ್ಪೋರೆಟರ್ ಲೋಕೇಶ್ ಗೌಡ ಮಾತನಾಡಿ ಕಳೆದ ಬಾರಿ ಡಾ. ಜಿ ಪರಮೇಶ್ವರ್ ರವರಿಗೆ 10 ವರ್ಷ ಹಾಗೂ ಸುಧಾಕರ ಲಾಲ್ ರವರಿಗೆ 5 ವರ್ಷ ಶಾಸಕರನ್ನಾಗಿ ಮಾಡಿದ್ದೀರಾ, ಈಗಿನ ಶಾಸಕರು ಜನಪರ ಕೆಲಸಗಳನ್ನು ಮಾಡದೆ ನೆಲಮಂಗಲದಲ್ಲಿ ಆಸ್ತಿಗಳಿಸಲು ಬ್ಯೂಸಿಯಾಗಿದ್ದಾರೆ. ಈ ಬಾರಿ ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಗೆ ಮತ ನೀಡಿ ಅಭಿವೃದ್ಧಿ ಮಾಡಲು ಅವಕಾಶ ನೀಡಿ ಎಂದರು.
ಸಮ್ಮಿಶ್ರ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ಈ ಕಾಂಗ್ರೆಸ್ ಶಾಸಕರು ಯಾವುದೇ ಜನಪರ ಕೆಲಸ ಮಾಡದೇ ನಾನು ಅಭಿವೃದ್ಧಿ ಮಾಡಿದ್ದೇನೆ ಎಂದು ಚುನಾವಣಾ ಸಂದರ್ಭದಲ್ಲಿ ಹಳ್ಳಿಗೆ ಬರುತ್ತಿರುವವರು ನಾನು ಏನು ಬೇಕಾದರೂ ಮಾಡಬಹುದು ವೊಟನ್ನು ಕೊಂಡಿಕೊಳ್ಳುವ ಮಾತು ಹೇಳ್ತಾರೆ. ಜೆಡಿಎಸ್ ಶಾಸಕರು ಕ್ಷೇತ್ರದಲ್ಲಿದ್ದಾಗ ಅಭಿವೃದ್ಧಿ ಮಾಡಲು ಬಿಡಲಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕ ಪರಮೇಶ್ವರ್ ಆ ಕಾಲದಲ್ಲಿ ತಂದ ಕ್ಷೇತ್ರದ ಹಣವನ್ನು ವಾಪಾಸ್ಸು ಕಳುಹಿಸುವಂತೆ ಮಾಡಿದ್ದರು, ಇಂತಹ ಶಾಸಕರು ನಮ್ಮ ಕ್ಷೇತ್ರಕ್ಕೆ ಬೇಕೇ. ಈ ಬಾರಿ ಬಿಜೆಪಿ ಶಾಸಕರ ಗೆಲುವಿಗೆ ಮತದಾರರು ಶಕ್ತಿ ತುಂಬಬೇಕಿದೆ ಎಂದು ಅನಿಲ್ ಕುಮಾರ್ ಹೇಳಿದರು.
ಈ ಮತಯಾಚನೆ ಕಾರ್ಯಕ್ರಮದಲ್ಲಿ ಮಾಜಿ ಬಿಬಿಎಂಪಿ ಕಾರ್ಪೊರೇಟರ್ ಲೋಕೇಶ್ ಗೌಡ, ಗುರುದತ್ತ್, ರೈತ ಮೋರ್ಚ ಅಧ್ಯಕ್ಷ ವಿಶ್ವನಾಥ್ ಅಪ್ಪಾಜಪ್ಪ, ಯುವಮೋರ್ಚ ಅಧ್ಯಕ್ಷ ಅರುಣ್ ಕೆ.ಎಸ್.ಸೇರಿದಂತೆ ಇತರರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA