ಕೊರಟಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಪ್ತರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದ ಕೊರಟಗೆರೆ ತಾಲ್ಲೂಕು ಕುರುಬ ಸಂಘದ ಅಧ್ಯಕ್ಷರಾದ ಮೈಲಾರಪ್ಪನವರ ಅಕಾಲಿಕ ಮರಣದಿಂದ ತೆರವಾದಂತ ಸ್ಥಾನಕ್ಕೆ ಹಾಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಕುರುಡುಗಾನಹಳ್ಳಿ ರಂಗಯ್ಯನವರನ್ನ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಕೊರಟಗೆರೆ ಪಟ್ಟಣದ ಬೈಲಾಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಕನಕ ಭವನದ ಬಳಿ 26 ಜನ ಸದಸ್ಯರು ಸರ್ವಾನುಮತದಿಂದ ಹಾಲಿ ಉಪಾಧ್ಯಕ್ಷರಾದ ಕುರುಡಗಾನಹಳ್ಳಿ ರಂಗಯ್ಯನವರನ್ನ ಆಯ್ಕೆ ಮಾಡಲಾಗಿದೆ.
ಕೊರಟಗೆರೆ ತಾಲೂಕು ಕುರುಬ ಸಂಘದ ಅಧ್ಯಕ್ಷರಾಗಿದ್ದ ಮೈಲಾರಪ್ಪನವರ ಅಕಾಲಿಕ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆ ಭಾನುವಾರ ಆಯ್ಕೆ ಪ್ರಕ್ರಿಯೆ ಜರುಗಿ 39 ಸದಸ್ಯ ಬಲವಿರುವ ತಾಲೂಕು ಕುರುಬ ಸಂಘದಲ್ಲಿ 29 ಜನ ಸದಸ್ಯರು ಒಂದು ಕಡೆ ಸೇರಿ ಸರ್ವಾನುಮತದಿಂದ ಆಯ್ಕೆ ಪ್ರಕ್ರಿಯೆ ನಡೆಸಿದ್ದಾರೆ.
ನೂತನ ಅಧ್ಯಕ್ಷರಾದ ಕುರುಡಗಾನಹಳ್ಳಿ ರಂಗಯ್ಯ ಮಾತನಾಡಿ, ತಾಲೂಕು ಕುರುಬ ಸಂಘಕ್ಕೆ ಈ ಹಿಂದಿನ ಅಧ್ಯಕ್ಷರಾದ ಮೈಲಾರಪ್ಪ 2 ಎಕ್ರೆ ಜಮೀನು ತಂದಿದ್ದು, ಮೂರ್ನಾಲ್ಕು ಕೋಟಿ ರೂಪಾಯಿ ಅಂದಾಜು ಮೊತ್ತದಲ್ಲಿ ಬಹು ದೊಡ್ಡ ಮಟ್ಟದ ಭವನ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಮಹದಾಸೆ ಹೊಂದಿದ್ದು, ಹಿರಿಯರ ಮಾರ್ಗದರ್ಶನದಲ್ಲಿ ಹಿರಿಯರು ಹಾಗೂ ಕಿರಿಯರ ಸಹಕಾರದೊಂದಿಗೆ ಕನಕ ಭವನ ಪೂರ್ಣಗೊಳಿಸುವುದರ ಜೊತೆ ಜೊತೆಯಲ್ಲಿ ಸಮಾಜದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು,
ತಾಲ್ಲೂಕು ಕುರುಬ ಸಂಘದ ಗೌರವಾಧ್ಯಕ್ಷರಾದಂತ ಲಾರಿ ಮಲ್ಲಯ್ಯ ಮಾತನಾಡಿ, ತಾಲೂಕು ಕುರುಬ ಸಂಘದ ಹಾಲಿ ಅಧ್ಯಕ್ಷ ಮೈಲಾರಪ್ಪ ಇತ್ತೀಚಿಗೆ ಮರಣ ಹೊಂದಿದ್ದು, ಆ ಹುದ್ದೆಗೆ ಹಿರಿತನ ಸೇರಿದಂತೆ ಮೈಲಾರಪ್ಪನವರ ಜೊತೆ ಜೊತೆಯಲ್ಲಿ ಜಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಅವಿರತ ಶ್ರಮವಹಿಸಿದ್ದು, ಮುಂದಿನ ದಿನಗಳಲ್ಲಿ ಕನಕ ಭವನ ಸಹ ಪೂರ್ಣಗೊಳಿಸುವಂತಹ ವಿಶ್ವಾಸ ನಮ್ಮಲ್ಲಿದೆ ಈ ವಿಚಾರದಲ್ಲಿ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಕುರುಡುಗಾನಹಳ್ಳಿ ರಂಗಯ್ಯ ಹೆಚ್ಚು ಆಸಕ್ತಿ ವಹಿಸಿಕೊಂಡು ಪೂರ್ಣಗೊಳಿಸಬೇಕು ಎಂದರು.
ತಾಲೂಕು ಕುರುಬ ಸಂಘದ ಪ್ರಧಾನ ಕಾರ್ಯದರ್ಶಿಯಾದ ರಂಗಶಾಮಯ್ಯ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಈ ಹಿಂದೆ ರಂಗಯ್ಯ ನವರ ಕೊಡುಗೆ ಅಪಾರವಾಗಿದ್ದು, ಮುಂದಿನ ದಿನಗಳಲ್ಲಿ ಕನಕ ಭವನ ಪೂರ್ಣಗೊಳಿಸುವ ವಿಚಾರ ಸೇರಿದಂತೆ ಸಮಾಜದ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ಹೆಚ್ಚು ಶ್ರಮವಹಿಸಬೇಕು, ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಗುರುತಿಸಿ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಸಮಾಜದ ಅಭಿವೃದ್ಧಿಗೆ ಹೆಚ್ಚು ಶ್ರಮಿಸುವಂತಾಗಬೇಕು ಎಂದರು.
ಸಮಾಜದ ಮುಖಂಡರಾದಂತಹ ಗಂಗರಂಗಯ್ಯ ಮಾತನಾಡಿ, ಅಧ್ಯಕ್ಷರಾದವರು ಸಮಾಜದ ಶ್ರೇಯ ಅಭಿವೃದ್ಧಿಗೆ ಹೆಚ್ಚು ಶ್ರಮಿಸಬೇಕು, ಈ ಕೆಲಸ ನೂತನ ಅಧ್ಯಕ್ಷರಾದ ರಂಗಯ್ಯನವರಿಂದ ಸಾಧ್ಯ ಎಂಬ ಮನಸ್ಥಿತಿಯಿಂದ ಎಲ್ಲರೂ ಒಗ್ಗೂಡಿ ನೂತನವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ, ಇವರ ಆಯ್ಕೆ ಪ್ರಕ್ರಿಯೆ ಹಿಂದೆ ಹಿರಿತನ ಹಾಗೂ ಈ ಹಿಂದೆ ಸಮಾಜಕ್ಕೆ ಹೆಚ್ಚು ತೊಡಗಿಸಿಕೊಂಡಿದ್ದರಿಂದ 39 ಸದಸ್ಯರಲ್ಲಿ 29 ಸದಸ್ಯರು ಸರ್ವಾನು ಮತದಿಂದ ಆಯ್ಕೆ ಮಾಡಿದ್ದಾರೆ ತಾಲೂಕ ಅಧ್ಯಕ್ಷರ ಜವಾಬ್ದಾರಿ ಅರಿತು ಸಮಾಜದ ಶ್ರೇಯ ಅಭಿವೃದ್ಧಿಗೆ ಹೆಚ್ಚು ಶ್ರಮವಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶೀ ಟಿ.ಡಿ.ರಂಗಶಾಮಯ್ಯ, ಖಜಾಂಚಿ ಚಿಕ್ಕಹನುಮಯ್ಯ, ಉಪಾಧ್ಯಕ್ಷ ಮಲ್ಲಿಕಾರ್ಜುನ ನಿರ್ದೇಶಕರುಗಳಾದ ಸಿದ್ದಲಿಂಗಪ್ಪ ರಂಗಾಪುರ, ಡಿ.ರಂಗಯ್ಯ, ಹನುಮಂತರಾಯಪ್ಪ, ರಂಗಧಾಮಯ್ಯ, ಗೋವಿಂದರಾಜು ನಾಗರಹಳ್ಳಿ, ಚಿಕ್ಕನಾಗಪ್ಪ, ಕೆಂಚಪ್ಪ, ಮುದ್ದಣ್ಣ , ಸಿದ್ದಪ್ಪ ವಿವೇಕಾನಂದ ಸ್ಕೂಲ್, ಹರೇ ಚಂದ್ರಪ್ಪ, ರಾಮಕೃಷ್ಣಯ್ಯ, ಗೋವಿಂದರಾಜು , ನಾಗರಾಜು, ರಂಗನಾಥ್ ಕ್ರಾಸ್, ವಿಜಯ ನರಸಿಂಹ, ವೇಣುಗೋಪಾಲ್ (ಎಲ್ ಐಸಿ) ರಂಗಸ್ವಾಮಯ್ಯ, ರಂಗನಾಥ ಕೆ.ಎಂ., ಕೆಂಪ ರಂಗಯ್ಯ , ವೀರಭದ್ರಯ್ಯ , ತಿಮ್ಮರಾಜು ಬೇಕರಿ, ತಿಮ್ಮರಾಜು ಕನಕ ಫ್ಯಾಷನ್ ಮುಖಂಡರಾದ ಸಾಹುಕಾರ್ ನಾರಾಯಣಪ್ಪ, ಬಿಸಿ ದೇವರಾಜು, ಗ್ರಾಮ .ಪಂ ಅಧ್ಯಕ್ಷ ಜಗನ್ನಾಥ್, ನಟರಾಜು ಸಿ.ಎಸ್., ಗಂಗರಾಜು ಕಂಟ್ರಾಕ್ಟರ್, ರಾಮಮೂರ್ತಿ, ರಮೇಶ್ ಡ್ರೈವರ್, ನಾಗರಾಜು ದೈಹಿಕ ಶಿಕ್ಷಕರು, ಗುರುಪ್ರಸಾದ್, ಮಲ್ಲೇಶ್ , ಪ್ರಸನ್ನ, ರವಿ (ಕೊಬ್ಬರಿ) ಲಕ್ಷ್ಮಪ್ರಸಾದ್ ಸಿ.ಆರ್., ಶಿವು, ನಂಜುಂಡಯ್ಯ, ಡಿ.ಕೆ.ಶ್ರೀನಿವಾಸ್, ವೀರನಾಗಯ್ಯ, ದೊಡ್ಡಯ್ಯ, ಲಕ್ಷ್ಮಣ್, ಪವನ್ ಶ್ರೀ ರಾಮಯ್ಯ, ಬಜ್ಜನಹಳ್ಳಿ ಅಕ್ಕಣ್ಣ, ಬಿಜಿ ವೀರಣ್ಣ ಹನುಮಂತರಾಜು , ಶಂಕರ್, ಅರೇಲಿಂಗಯ್ಯ ಶಿವಕುಮಾರ್, ಸೇರಿದಂತೆ ಹಲವು ಸಮಾಜದ ಮುಖಂಡರುಗಳು ಹಾಜರಿದ್ದರು.
ವಿವಿಧ ಮುಖಂಡರಿಂದ ಸನ್ಮಾನ
ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಮಹಾಲಿಂಗಪ್ಪ, ತಾಲೂಕು ಜೆಡಿಎಸ್ ಅಧ್ಯಕ್ಷ ಕಾಮರಾಜು, ಪಿಆರ್ ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ, ಟಿ ಏ ಪಿ ಸಿ ಎಂ ಎಸ್ ಅಧ್ಯಕ್ಷ ಈಶ್ವರಪ್ಪ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಲ್ ಐಸಿ ರಾಜಣ್ಣ ಸೇರಿದಂತೆ ಹಲವು ಮುಖಂಡರು ಸನ್ಮಾನಿಸಿ ಶುಭಕೋರಿದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


