ಕೊರಟಗೆರೆ: ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ದಾಸೋಹ ನಿಲಯದ ಉಗ್ರಾಣದಲ್ಲಿ ಹೆಚ್ಚುವರೆಯಾಗಿ ಸಂಗ್ರಹಿಸಿರುವ ಅಕ್ಕಿ, ಬೆಲ್ಲ, ಹುಣಸೆ ಹಣ್ಣು, ರಾಗಿ ಮತ್ತು ತೆಂಗಿನಕಾಯಿ, ಸ್ಥಳೀಯ ಸಾರ್ವಜನಿಕರ ಮುಂದೆ ಕೊರಟಗೆರೆ ಗ್ರೇಡ್ 2 ತಹಶೀಲ್ದಾರ್ ರಾಮ್ ಪ್ರಸಾದ್ ಹಲವು ಗೊಂದಲಗಳನ್ನು ಬಗೆಹರಿಸಿ ಸ್ಥಳೀಯ ಸಾರ್ವಜನಿಕರ ಮುಂದೆ ಯಶಸ್ವಿಯಾಗಿ ಹರಾಜು ಪ್ರಕ್ರಿಯೆ ನಡೆಸಿದರು.
ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ದಾಸೋಹ ಭವನದ ಆವರಣದಲ್ಲಿ ಬಹಿರಂಗ ಹರಾಜು ಪ್ರಕ್ರಿಯೆ ಸ್ಥಳೀಯ ಸಾರ್ವಜನಿಕರ ಇಚ್ಛೆಯಂತೆ ಷರತ್ತು ಬದ್ಧವಾಗಿ ನಡೆಯಿತು.ಬಹಿರಂಗ ಹರಾಜು ಮಾಡುವ ಸಂದರ್ಭದಲ್ಲಿ ಸುಮಾರು 30 ಜನ ಠೇವಣಿದಾರರು ಬಹಿರಂಗ ಹರಾಜಿನಲ್ಲಿ ಪಾಲ್ಗೊಂಡಿದ್ದರು.
ಸ್ಥಳೀಯ ಸಾರ್ವಜನಿಕರಿಗೆ ಮತ್ತು ರೈತರಿಗೆ ಹರಾಜು ಪ್ರಕ್ರಿಯೆಯಲ್ಲಿ ಸ್ಥಳೀಯರ ಇಚ್ಛೆಯಂತೆ ಪಾಲ್ಗೊಳ್ಳಲು ಗ್ರೇಡ್ 2 ತಹಶೀಲ್ದಾರ್ ರಾಮ್ ಪ್ರಸಾದ್ ಅವಕಾಶ ಮಾಡಿಕೊಟ್ಟರು.
ಹೊರಗಡೆಯಿಂದ ಬಂದು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಠೇವಣಿದಾರರಿಗೆ ಸ್ಥಳೀಯರು.. ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಘಟನೆಯೂ ನಡೆಯಿತು.
ದಿನಾಂಕ: 26.3.2025 ರಂದು ಹಲವು ಗೊಂದಲಗಳಿಂದ ಮತ್ತು ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಕೈಗೊಳ್ಳಬೇಕಾದ ಕಾನೂನು ಕ್ರಮಗಳನ್ನು ಕೈಗೊಳ್ಳದೆ, ಬಹಿರಂಗವಾಗಿ ಹರಾಜು ಪ್ರಕ್ರಿಯೆ ನಡೆಸಲು ಮುಂದಾಗಿದ್ದ ಮುಜರಾಯಿ ಇಲಾಖೆಯ ಎಫ್. ಡಿ. ಎ. ಸೌಭಾಗ್ಯಮ್ಮ ನಡೆ ಖಂಡಿಸಿದ್ದ ಸಾರ್ವಜನಿಕರು. ಗ್ರೇಡ್ 2 ತಹಶಿಲ್ದಾರ್ ರಾಮ್ ಪ್ರಸಾದ್ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ತೀಕ್ಷ್ಣವಾಗಿ ಪರಿಶೀಲಿಸಿ ದಿನಾಂಕ ನಿಗದಿಪಡಿಸಿದ್ದರು ಅದರಂತೆ ಇಂದು ಬಹಿರಂಗ ಹರಾಜು ಯಶಸ್ವಿಯಾಗಿದೆ.
ತುಮಕೂರು ಮಧುಗಿರಿ ಮತ್ತು ಇತರೆ ಭಾಗಗಳಿಂದ ಬಹಿರಂಗ ಹರಾಜಿನಲ್ಲಿ ಪಾಲ್ಗೊಳ್ಳಲು ಬಂದಿದ್ದ ಇಪ್ಪತ್ತಕ್ಕೂ ಹೆಚ್ಚು ಠೇವಣಿದಾರರಿಗೆ ತುಂಬು ಸಭೆಯಲ್ಲಿ ಸ್ಥಳೀಯರು ಗೇರಾವು ಹಾಕಿದರು.
ಬೀಟ್ ನಲ್ಲಿ ಸ್ಥಳೀಯರನ್ನು ಬಿಟ್ಟು ಹೊರಗಡೆಯಿಂದ ಬಂದು ಯಾರು ಭಾಗವಹಿಸಬಾರದೆಂದು ಆಕ್ರೋಶ ಹೊರ ಹಾಕಿದ ಸ್ಥಳೀಯರು, ಬೀಟ್ ದಾರರು. ಹೊರಗಡೆಯಿಂದ ಬಂದಂತಹ ಬೀಟ್ ದಾರರ ಮತ್ತು ಸ್ಥಳೀಯ ಸಾರ್ವಜನಿಕರ ಮಧ್ಯೆ ಗಲಾಟೆ ಅತಿರೇಕಕ್ಕೇರಿತು. ನಂತರ ಗ್ರೇಟ್ ತಹಶೀಲ್ದಾರ್ ರಾಮ್ ಪ್ರಸಾದ್ ಮಧ್ಯಪ್ರವೇಶಿಸಿ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಸ್ಥಳೀಯರ ಒತ್ತಾಯದಂತೆ ಸ್ಥಳೀಯರಿಗೆ ಮೊದಲ ಆದ್ಯತೆ ಎಂದು ತಿಳಿಸಿ ಬಹಿರಂಗ ಹರಾಜು ಪ್ರಕ್ರಿಯೆ ಪ್ರಾರಂಭಿಸಿದರು.
ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಗ್ರೇಟ್ 2 ತಹಶೀಲ್ದಾರ್ ರಾಮ್ ಪ್ರಸಾದ್, ಬಹಿರಂಗ ಹರಾಜಿನಲ್ಲಿ ಒಟ್ಟು ಐದು ದಿನಸಿ ಸಾಮಗ್ರಿಗಳನ್ನು ಮಾತ್ರ ಹರಾಜು ಮಾಡಲಾಗುತ್ತಿದ್ದು ಅದರಲ್ಲಿ ಅಕ್ಕಿ, ರಾಗಿ, ಹುಣಸೆ, ಬೆಲ್ಲ, ಮತ್ತು ತೆಂಗಿನಕಾಯಿ ಇವುಗಳನ್ನು ಮಾತ್ರ ಬಹಿರಂಗವಾಗಿ ಹರಾಜು ಮಾಡಲಾಗಿದೆ. ಈ ಬಹಿರಂಗ ಹರಾಜಿನಲ್ಲಿ ಒಟ್ಟು 30 ಜನ ಬೀಟ್ ದಾರರು ಭಾಗವಹಿಸಿದ್ದಾರೆ, ಈ ಪೈಕಿ ಅಂತಿಮವಾಗಿ ಐದು ಜನ ಬೀಟ್ ದಾರರು ಈ ಬಹಿರಂಗ ಹರಾಜಿನಲ್ಲಿ ಯಶಸ್ವಿಯಾಗಿದ್ದಾರೆ. ಈ ಬಹಿರಂಗ ಹರಾಜಿನಲ್ಲಿ ಸ್ಥಳೀಯರು ಮೇಲುಗೈ ಸಾಧಿಸಿದ್ದಾರೆ ಎಂದರು.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4 Koratagere: Open auction process successful despite many confusions