ಕೊರಟಗೆರೆ: ಫೆ.2ರಂದು ಕೊರಟಗೆರೆ ಪಟ್ಟಣದ ಸಿವಿಲ್ ಬಸ್ ನಿಲ್ದಾಣದಲ್ಲಿ ಹೊಳವನಹಳ್ಳಿ ಗ್ರಾಮದ ಅಶೋಕ ಎಂಬುವರು ಬಸ್ಸು ಹತ್ತುವಾಗ ಅಶೋಕರವರ ಜೇಬಿನಿಂದ OPPO ಕಂಪನಿಯ ಸುಮಾರು 25,000/-ರೂ ಬೆಲೆ ಬಾಳುವ ಮೊಬೈಲ್ ಪೋನ್ ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿದ್ದರು. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಮೊ.ನಂ–27/2026, ಕಲಂ–303(2), 313, 317(4) ಬಿ.ಎನ್.ಎಸ್–2023 ರೀತ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.
ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್.ಕೆ.ವಿ. ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಸಿ.ಗೋಪಾಲ್ ಮತ್ತು ಪುರುಷೋತ್ತಮ.ಎಂ.ಎಲ್.ರವರ ನೇತೃತ್ವದಲ್ಲಿ, ಮಧುಗಿರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಮಂಜುನಾಥ ರವರ ಮಾರ್ಗಸೂಚನೆ ಮೇರೆಗೆ, ಕೊರಟಗೆರೆ ವೃತ್ತ ನಿರೀಕ್ಷಕರಾದ ಅನಿಲ್.ಆರ್.ಪಿ., ಕೊರಟಗೆರೆ ಪೊಲೀಸ್ ಠಾಣಾ ಪಿ.ಎಸ್.ಐ ತೀರ್ಥೇಶ್, ವೈ.ಜಿ.ಕೋಳಾಲ ಪೊಲೀಸ್ ಠಾಣಾ ಪಿ.ಎಸ್.ಐ. ಅಭಿಷೇಕ್.ಎಸ್.ಆರ್., ಹಾಗೂ ಕೊರಟಗೆರೆ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಗಂಗಾಧರ್, ಪ್ರಸನ್ನ ಕುಮಾರ್, ಮಹೇಶ್, ಸಂಜೀವರೆಡ್ಡಿ, ದೊಡ್ಡಲಿಂಗಯ್ಯ, ಜಗದೀಶ್ ಕುಮಾರ್, ಪಾಂಡುರಂಗ ರಾವ್, ರವಿ, ನವೀನ್ ಕುಮಾರ್, ಮಲ್ಲೇಶ್, ಗಣೇಶ್, ಪ್ರಸಾದ್ ಬಾಬು, ದಯಾನಂದ್, ರಮೇಶ್ ಬಾಬು ರವರನ್ನು ಒಳಗೊಂಡ ಅಪರಾಧ ಪತ್ತೆ ತಂಡವನ್ನು ರಚಿಸಲಾಗಿತ್ತು, ಕೆಳಕಂಡ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಆರೋಪಿಗಳಾದ ಶಿವಶಂಕರ್ @ ಎರುಕಲ ಶಿವಶಂಕರ್ ಬಿನ್ ಮಣಿ @ ಕುಮಾರ್, (19 ವರ್ಷ), ಜಿರಾಯ್ತಿ, ವೈ.ಎಸ್.ನಗರ, ಡೌನ್ ಟೌನ್ ಮತ್ತು ತಾಲ್ಲೂಕು ಕರ್ನೂಲ್ ಜಿಲ್ಲೆ, ಆಂದ್ರ ಪ್ರದೇಶ ರಾಜ್ಯ, ಪವನ್ @ ಪವನ ವೆಂಕಟೇಶ ಕೊರಸರ ಬಿನ್ ವೆಂಕಟೇಶ್, ಕೊರಸರ, (20 ವರ್ಷ), ಡೈವರ್ ಕೆಲಸ, ಘಟಪ್ರಭ ಗ್ರಾಮ, ಗೋಕಾಕ್ ತಾಲ್ಲೂಕು, ಪರಶುರಾಮ್ ಬಿನ್ ಲೇಟ್ ಅಪ್ಪಣ್ಣ, (22 ವರ್ಷ), ಹೂವಿನ ವ್ಯಾಪಾರ, ಕೌಲ್ ಬಜಾರ್, ಗುಂಡಕಲ್ಲು ಟೌನ್, ಅನಂತಪುರ ಜಿಲ್ಲೆ, ಆಂದ್ರಪ್ರದೇಶ ರಾಜ್ಯ ರಾಮು @ ರಾಮಯ್ಯ ಬಿನ್ ಲೇಟ್ ವೆಂಕಟರವಣಪ್ಪ, (19 ವರ್ಷ), ರಾಮರಾವ್ ಕಾಲೋನಿ, ಮದನಪಲ್ಲಿ ತಾಲ್ಲೂಕು, ತಿರುಪತಿ ಜಿಲ್ಲೆ, ಆಂದ್ರಪ್ರದೇಶ ರಾಜ್ಯ ಈ ಎಲ್ಲ ಮೇಲ್ಕಂಡ ಆರೋಪಿಗಳ ಕಡೆಯಿಂದ ವಿವಿಧ ಕಂಪನಿಗಳ ಸುಮಾದ 35,00.000/- ರೂ ಬೆಲೆ ಬಾಳುವ 137 ಮೊಬೈಲ್ ಪೋನ್‌ಗಳು ಹಾಗೂ ಕೃತ್ಯಕ್ಕೆ ಬಳಿಸಿದ KA-02-MQ-7068 ನೇ ERTIGA ಕಾರನ್ನು ವಶಪಡಿಸಿಕೊಂಡಿರುತ್ತದೆ.
ಅಂತರ ರಾಜ್ಯ ಕಳ್ಳರನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಶ್ರಮಿಸಿದ ಪತ್ತೆ ತಂಡವನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಕೆ.ವಿ.ಅಶೋಕ್, ಐ.ಪಿ.ಎಸ್ ರವರು ಪ್ರಶಂಸಿರುತ್ತಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


