ಕೊರಟಗೆರೆ: ನಾಡಿನಲ್ಲೆಡೆ ಗೌರಿ ಗಣೇಶ ಹಬ್ಬದ ಸಡಗರ, ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಯ್ತು. ನಾಡಿನ ಪ್ರತಿ ಗ್ರಾಮದಲ್ಲೂ ಗಣೇಶ ಮೂರ್ತಿಯನ್ನು ಕೂರಿಸಿ ಅದ್ದೂರಿಯಾಗಿ ನಿಂತಿರುವ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ಕೊರಟಗೆರೆ ಪಟ್ಟಣದ ಸತ್ಯ ಗಣಪತಿ ಹಾಗೂ ಕಟ್ಟೆ ಗಣಪತಿ ಅದ್ದೂರಿಯಾಗಿ ಪ್ರತಿಷ್ಠಾಪನೆಗೊಂಡಿತು. ಕಟ್ಟೆ ಗಣಪತಿಯ ಸನ್ನಿಧಾನದಲ್ಲಿ 16ನೇ ವರ್ಷದ ವಿಶೇಷವಾಗಿ ಅಮರನಾಥೇಶ್ವರನ ರೂಪದಲ್ಲಿ ಗಣಪತಿಯ ಪ್ರತಿಷ್ಠಾಪನೆ ನಡೆಯಿತು.
ಪಟ್ಟಣದ ಸತ್ಯ ಗಣಪತಿ ಸಮಿತಿ ವತಿಯಿಂದ 65ನೇ ವರ್ಷದ ವೈಭವದ ಗಣಪತಿಯ ಪ್ರತಿಷ್ಠಾಪನೆ ಮಾಡಲಾಯಿತು. ಕೊರಟಗೆರೆ ಪಟ್ಟಣದಲ್ಲಿ ಈ ಬಾರಿ ದಸರಾ ಉತ್ಸವದ ಹಾಗೆ ಗಣಪತಿಗಳ ವಿಸರ್ಜನಾ ಕಾರ್ಯಕ್ರಮ ನಡೆಯುತ್ತದೆ.
250 ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳ ನಿಯೋಜನೆಯಲ್ಲಿ ವಿವಿಧ ವಾದ್ಯಗೋಷ್ಠಿಗಳೊಂದಿಗೆ ಗಣಪತಿ ಹಬ್ಬದಿಂದ 12 ದಿನಗಳ ಕಾಲ ವಿಶೇಷ ಪೂಜೆಗಳನ್ನು ನೆರವೇರಿಸಲಾಗುವುದು.
ಪಟ್ಟಣದಲ್ಲಿ ಸ್ಥಾಪಿಸಿರುವ ಎಲ್ಲಾ ಗಣಪತಿ ಮೂರ್ತಿಗಳ ವಿಶೇಷ ಮೆರವಣಿಗೆಯೊಂದಿಗೆ ಪಟ್ಟಣದ ಪೊಲೀಸ್ ಅಧಿಕಾರಿಗಳು, ಗಣ್ಯಾದಿ ಗಣ್ಯರ, ಸಾವಿರಾರು ಭಕ್ತಾದಿಗಳ ಜೊತೆಗೂಡಿ ಅದ್ದೂರಿ ವಿಸರ್ಜನೆ ಮಾಡಲು ಪಟ್ಟಣದ ಜನತೆ ತೀರ್ಮಾನಿಸಿದ್ದಾರೆ.
ಸಮಸ್ತ ನಾಡಿನ ಜನತೆಗೆ ಕಟ್ಟೆ ಗಣಪತಿ ಹಾಗೂ ಸತ್ಯ ಗಣಪತಿ ಯುವಕ ಮಂಡಳಿ ವತಿಯಿಂದ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನ ಪಟ್ಟಣದ ಗಣಪತಿ ಯುವಕ ಮಂಡಳಿಯ ಯುವಕರು ತಿಳಿಸಿದರು.
ವರದಿ : ಮಂಜುಸ್ವಾಮಿ ಎಂ.ಎನ್.ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q