ಕೊರಟಗೆರೆ: ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವ ಸಿ ಅನಂತರಾಮ್ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ 2025–26ನೇ ಸಾಲಿನ ತಾಲ್ಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸಭೆ ನಡೆಯಿತು.
ತಾಲ್ಲೂಕು ರಾಜ್ಯೋತ್ಸವ ಆಯ್ಕೆ ಸಮಿತಿಯ ಸಭೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಒಟ್ಟು 31 ಅರ್ಜಿಗಳು ಸ್ವೀಕೃತವಾಗಿದ್ದು, ಈ ಅರ್ಜಿಗಳಲ್ಲಿ ರಂಗಭೂಮಿ ಕ್ಷೇತ್ರಕ್ಕೆ 10, ಸಮಾಜ ಸೇವೆ/ ಸಾಮಾಜಿಕ ಹೋರಾಟಗಾರರು ಕ್ಷೇತ್ರಕ್ಕೆ 04, ಕನ್ನಡ ಸಾಹಿತ್ಯ / ಸಂಶೋಧನೆ ಕ್ಷೇತ್ರಕ್ಕೆ 03, ಕ್ರೀಡಾ/ ಯೋಗಾ ಕ್ಷೇತ್ರಕ್ಕೆ 02, ಕಲೆ/ ಸಂಗೀತ/ ಜನಪದ ಕ್ಷೇತ್ರಕ್ಕೆ 03, ಪತ್ರಿಕಾ ರಂಗ 03, ಆಡಳಿತ ಕ್ಷೇತ್ರ 02, ಕನ್ನಡ ಪರ ಹೋರಾಟಗಾರರು ಕ್ಷೇತ್ರಕ್ಕೆ 04 ರಂತೆ ಅರ್ಜಿಗಳು ಸ್ವೀಕೃತವಾಗಿರುವುದಾಗಿ ಸಭೆಗೆ ಮಾಹಿತಿ ನೀಡಿದರು. ಹಾಗೂ ಈ ಅರ್ಜಿಗಳಲ್ಲಿ 2025-26ನೇ ಸಾಲಿಗೆ ಒಟ್ಟು 14 ಅರ್ಜಿಗಳನ್ನು ಆಯ್ಕೆ ಮಾಡಬೇಕಾಗಿದ್ದು, ಪ್ರತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಕನ್ನಡ ರಾಜ್ಯೋತ್ಸವದ ವಿಶೇಷ ಆಚರಣೆಗಾಗಿ 14 ಜನರನ್ನು ಮಾತ್ರ ಪ್ರಶಸ್ತಿಗೆ ಆಯ್ಕೆ ಮಾಡಬೇಕಿದ್ದು ಅದರಲ್ಲಿ ರಂಗಭೂಮಿ ಕ್ಷೇತ್ರದಿಂದ-05, ಕನ್ನಡ ಪರ ಹೋರಾಟಗಾರರು-02, ಮಾಧ್ಯಮ ಕ್ಷೇತ್ರ-01, ಕೃಷಿ ಕ್ಷೇತ್ರ-01, ಕ್ರೀಡಾ ಕ್ಷೇತ್ರ-01, ಸಾಮಾಜಿಕ ಹೋರಾಟ/ಸಮಾಜ ಸೇವೆ ಕ್ಷೇತ್ರ -01, ಸಾಹಿತ್ಯ ಕ್ಷೇತ್ರ -01, ಆಡಳಿತ ಕ್ಷೇತ್ರ-01, ಪೌರ ಕಾರ್ಮಿಕರು ಕ್ಷೇತ್ರ -01 ರಂತೆ ಆಯ್ಕೆ ಮಾಡಬೇಕಾಗಿ ಸಭೆಗೆ ತಿಳಿಸಿದರು.
ಸದರಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡಂತೆ ಸಾಧಕರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಸಮಿತಿಯು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ರಂಗಭೂಮಿ ಕ್ಷೇತ್ರ:
- ಶ್ರೀನಿವಾಸಯ್ಯ ಬಿನ್ ಹನುಮಂತಯ್ಯ ಯಾದಗೆರೆ, ಕೊರಟಗೆರೆ ತಾಲ್ಲೂಕು
- ದೊಡ್ಡಯ್ಯ ಬಿ.ಟಿ ಜಂಪೇನಹಳ್ಳಿ ಕ್ರಾಸ್, ಕೊರಟಗೆರೆ ತಾಲ್ಲೂಕು
- ಪ್ರಸನ್ನ ಕುಮಾರ್ ಬಿ.ಎನ್ ಬಿನ್ ದಿ ನಂಜಪ್ಪಾರಾಧ್ಯ ಬಿರದೇನಹಳ್ಳಿ, ಕೊರಟಗೆರೆ ತಾಲ್ಲೂಕು
- ನಾಗಭೂಷಣ ಟಿ ಸಿ ತೀತಾ ಗ್ರಾಮ, ಕೊರಟಗೆರೆ ತಾಲ್ಲೂಕು
- ವೆಂಕಟೇಶ್ (ರಾಜಣ್ಣ) ಬಿನ್ ವೀರಣ್ಣ ತುಂಬಾಡಿ, ಕೊರಟಗೆರೆ ತಾಲ್ಲೂಕು
ಕನ್ನಡ ಪರ ಹೋರಾಟಗಾರರ ಕ್ಷೇತ್ರ:
- ಪುಟ್ಟರಾಜು ಎನ್ ಎಲ್ ಬಿನ್ ಲಕ್ಷ್ಮಯ್ಯ, ನರಸಯ್ಯನಪಾಳ್ಯ, ಕೊರಟಗೆರೆ ತಾಲ್ಲೂಕು
- ಕೆ .ಎನ್ ಗೋಪಾಲಕೃಷ್ಣ ಅಧ್ಯಕ್ಷರು, ಜಯ ಕರ್ನಾಟಕ, ಕೊರಟಗೆರೆ ತಾಲ್ಲೂಕು
ಮಾಧ್ಯಮ ಕ್ಷೇತ್ರ:
- ಬಾಬುನಾಯ್ಕ ಎಂ ಬಿನ್ ಮುನಿಯನಾಯ್ಕ (ಜಯನುಡಿ ದಿನ ಪತ್ರಿಕೆ) ಶಕುನಿತಿಮ್ಮನಹಳ್ಳಿ, ಕೊರಟಗೆರೆ ತಾಲ್ಲೂಕು
ಕೃಷಿ ಕ್ಷೇತ್ರ
- ನಾಗರಾಜು ವೈ ಬಿ ಬಿನ್ ಬಸವಲಿಂಗಯ್ಯ ಹೊಳವನಹಳ್ಳಿ, ಕೊರಟಗೆರೆ ತಾಲ್ಲೂಕು
- ಸಿದ್ದರಾಜು ಕೆ.ಜೆ ಬಿನ್ ಜಯಣ್ಣ ಕೆ.ಎಸ್ ಕೊರಟಗೆರೆ, ಕೊರಟಗೆರೆ ತಾಲ್ಲೂಕು
ಸಮಾಜ ಸೇವೆ ಕ್ಷೇತ್ರ :
- ಆದಿಲಕ್ಷಮ್ಮ
ಅಂಗನವಾಡಿ ಕಾರ್ಯಕರ್ತೆ, ಆರ್ ವೆಂಕಟಾಪುರ, ಕೊರಟಗೆರೆ ತಾಲ್ಲೂಕು
ಸಾಹಿತ್ಯ ಕ್ಷೇತ್ರ :
- ಉಷಾ ಎನ್ ಕೋಂ ರವೀಶ್ ಎ.ಎಸ್ ಅಳಾಲಸಂದ್ರ, ಕೊರಟಗೆರೆ ತಾಲ್ಲೂಕು
ಆಡಳಿತ ಕ್ಷೇತ್ರ :
- ಗುರುಮೂರ್ತಿ ಎಂ.ಬಿ
ಸಹಾಯಕ ನಿರ್ದೇಶಕರು (ಗ್ರಾಉ), ತಾಲ್ಲೂಕು ಪಂಚಾಯಿತಿ ಕೊರಟಗೆರೆ, ಕೊರಟಗೆರೆ ತಾಲ್ಲೂಕು
ಪೌರ ಕಾರ್ಮಿಕರ ಕ್ಷೇತ್ರ :
- ಕೋಳಾಲ ಗ್ರಾಮ ಪಂಚಾಯಿತಿಯ ಶ್ರೀ ಚಾಮುಂಡೇಶ್ವರಿ ಸ್ವ-ಸಹಾಯ ಸಂಘ (ಸ್ವಚ್ಛ ವಾಹಿನಿ ಚಾಲಕರು ಮತ್ತು ಸ್ವಚ್ಛ ಸಂಗ್ರಹಕಾರರು)
ನವಂಬರ್ 01 ರ ಬೆಳಗ್ಗೆ 9:00 ಗಂಟೆಗೆ ಕೊರಟಗೆರೆಯ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲ್ಲೂಕು ಆಡಳಿತ ಕೊರಟಗೆರೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಆಯ್ಕೆಯಾದ ಸಾಧನೆಗಾಗಿ ಕನ್ನಡ ರಾಜ್ಯೋತ್ಸವ ಪುಶಸ್ತಿಗೆ ಆಯ್ಕೆ ಮಾಡಲಾಗಿರುತ್ತದೆ. ಕಾರ್ಯಕ್ರಮದಲ್ಲಿ ಆಯ್ಕೆಯಾದ ಎಲ್ಲ ಪ್ರಶಸ್ತಿ ಪುರಸ್ಕೃತರು ಹಾಜರಾಗಿ ಪ್ರಶಸ್ತಿಯನ್ನು ಗೌರವ ಪೂರ್ವಕವಾಗಿ ಸ್ವೀಕರಿಸಬೇಕಾಗಿ ತಾಲ್ಲೂಕು ಆಡಳಿತದಿಂದ ಕೋರಲಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
 
		 
					
					 


