ಕೊರಟಗೆರೆ: ಕೊರಟಗೆರೆ ಪಟ್ಟಣ ಪಂಚಾಯಿತಿ ಇದೀಗ ಪುರಸಭೆಯಾಗಿ ಮೇಲ್ದರ್ಜೆಗೇರಿದೆ. ಎರಡು ದಶಕಗಳಲ್ಲಿ ಪಟ್ಟಣದ ಜನಸಂಖ್ಯೆ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಹೆಚ್ಚಳ ಕಂಡುಬಂದಿರುವ ಕಾರಣ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ವರದಿಗಳ ಪ್ರಕಾರ, ಹೊಸದಾಗಿ ರಚಿಸಲಾದ ಕೊರಟಗೆರೆ ಪುರಸಭೆ ವ್ಯಾಪ್ತಿಗೆ ಮೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 13 ಗ್ರಾಮಗಳು ಒಳಪಡಲಿವೆ. ಹುಲಿಕುಂಟೆ ಗ್ರಾಮ ಪಂಚಾಯಿತಿಯಿಂದ: ದೇವರಹಳ್ಳಿ, ಹೊಸಹಳ್ಳಿ, ಕಾಮೇನಹಳ್ಳಿ, ಓಬಳದೇವರಹಳ್ಳಿ, ಗುಂಡಿನಪಾಳ್ಯ, ಚಿಕ್ಕೇಗೌಡನಹಳ್ಳಿ, ಕಾಮರಾಜನಹಳ್ಳಿ, ತುಂಬಾಡಿ ಗ್ರಾಮ ಪಂಚಾಯಿತಿಯಿಂದ ಕಂಬದಹಳ್ಳಿ, ಹಂಚಿಹಳ್ಳಿ ಗ್ರಾಮ ಪಂಚಾಯಿತಿಯಿಂದ: ಬೋಡಬಂಡೇನಹಳ್ಳಿ, ಮಲ್ಲೇಶಪುರ. ಜಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿಯಿಂದ: ಜಂಪೇನಹಳ್ಳಿ, ಕಲ್ಲುಗುಟ್ಟರಹಳ್ಳಿ, ಜಟ್ಟಿ ಅಗ್ರಹಾರ ಗ್ರಾಮಗಳು ಈಗ ಕೊರಟಗೆರೆ ಪುರಸಭೆಯ ವ್ಯಾಪ್ತಿಗೆ ಸೇರಲಿದೆ.
2011ರ ಜನಗಣತಿ ಪ್ರಕಾರ ಕೊರಟಗೆರೆ ಪ್ರದೇಶದಲ್ಲಿ 24,264 ಜನ ವಾಸವಿದ್ದು, 17.53 ಚದರ ಕಿಲೋಮೀಟರ್ ವಿಸ್ತೀರ್ಣವಿದೆ. ಪ್ರತಿ ಚದರ ಕಿಲೋಮೀಟರಿಗೆ 1,384 ಜನರ ಸಾಂದ್ರತೆ ದಾಖಲಾಗಿದೆ.
ಪುರಸಭೆ ರಚನೆಗೆ ಸಂಬಂಧಿಸಿದ ಆಡಳಿತಾತ್ಮಕ ಕ್ರಮಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ. ಹೊಸ ಗಡಿನಿರ್ಣಯ, ಆಡಳಿತ ವಿಂಗಡಣೆ, ಬಜೆಟ್ ವ್ಯವಸ್ಥೆ ಹಾಗೂ ಚುನಾವಣೆ ಪ್ರಕ್ರಿಯೆ ಕುರಿತು ಸರ್ಕಾರ ಮುಂದಿನ ದಿನಗಳಲ್ಲಿ ಪ್ರಕಟಣೆ ಹೊರಡಿಸಲಿದೆ ಎಂದು ತಿಳಿದು ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


