ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೃಷಿ ಇಲಾಖೆಗಳಲ್ಲಿ ರೈತರು ಸ್ಪ್ಲಿಂಕ್ಲರ್ ( Splinkler ) ಸೆಟ್ ಆಗಲಿ ಮತ್ತೊಂದುಕ್ಕಾಗಲಿ ದಿನನಿತ್ಯ ಅನಾವಶ್ಯಕವಾಗಿ ರೈತರನ್ನು ಅಲೆದಾಡಿಸುತ್ತಿದ್ದು , ಸಂಬಂಧಪಟ್ಟ ರೇಷ್ಮೆ ಇಲಾಖೆಯ ಅಧಿಕಾರಿಯನ್ನು ವಿಚಾರಿಸಿದಾಗ ರೇಷ್ಮೆ ಇಲಾಖೆಯ ಅಧಿಕಾರಿ ಸರ್ವೇಶ್ ಬಾವಿ ಕಟ್ಟಿ ಮಾಹಿತಿ ನೀಡಿದರು.
ಈಗಾಗಲೇ ಸಂಬಂಧಪಟ್ಟ ಕೃಷಿ ಇಲಾಖೆಯ ಅಧಿಕಾರಿಯವರಿಗೆ ನಾವು ಈಗಾಗಲೇ ಕೃಷಿ ಇಲಾಖೆಯಲ್ಲಿ ಕೃಷಿ ಉಪಕರಣಗಳನ್ನು ಪಡೆದುಕೊಳ್ಳಲು ಬರುವಂತಹ ರೈತರ ಸಮಯವನ್ನು ವ್ಯರ್ಥ ಮಾಡಿಸಬೇಡಿ ಎಂದು ಹೇಳಿದ್ದೇವೆ ಎಂದು ಅವರು ಹೇಳಿದರು.
ಕೋವಿಡ್ ೩ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ದೃಷ್ಟಿಯಿಂದ ರೈತರಿಗೆ ತಾವುಗಳು ಕೃಷಿ ಉಪಕರಣಗಳನ್ನು ನೀಡಬಹುದಾಗಿಯೂ ಸಹ ತಿಳಿಸಿದರು .
ಹಾಗೂ ಅದಕ್ಕೆ ಸಂಬಂಧ ಪಟ್ಟಂತ ವಿತರಣ ನಿರಪೇಕ್ಷಣ ಪತ್ರವನ್ನು ಸಹ ಈಗಾಗಲೇ ಕೃಷಿ ಇಲಾಖೆಯ ಅಧಿಕಾರಿಗಳಿಗೆ ನೀಡಿದಾಗಿಯೂ ಸಹ ಸರ್ವೇಶ್ ಬಾವಿ ಕಟ್ಟಿ ಅವರು ತಿಳಿಸಿದ್ದಾರೆ.
ವರದಿ: ಮುರುಳಿಧರನ್ ಆರ್. ಹಿರಿಯೂರು ( ಚಿತ್ರದುರ್ಗ)