ತುಮಕೂರು: ಆರೋಪಗಳು ಶಿವ, ಬ್ರಹ್ಮ ಕೃಷ್ಣನನ್ನೇ ಬಿಟ್ಟಿಲ್ಲ, ಸಮಂತಕ ಮಣಿ ವಿಚಾರದಲ್ಲಿ ಕೃಷ್ಣನನ್ನೇ ಕಳ್ಳ ಅಂದರು ಅಂತರದಲ್ಲಿ ಮೋದಿಯನ್ನು ಬಿಡ್ತಾರಾ? ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ಪ್ರಶ್ನಿಸಿದರು.
ರಾಷ್ಟ್ರೀಯ ಲಾಂಛನ ತಿರುಚಿದ್ದಾರೆ ಎಂಬ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದಗಂಗಾ ಭೇಟಿಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಗುರುಪೂರ್ಣಿಮೆಯಂದು ಗುರುಗಳ ದರ್ಶನ ಪಡೆದಿದ್ದೇನೆ. ಮನಸ್ಸಿಗೆ ಖುಷಿ ಅನಿಸಿದೆ ಶ್ರೀಗಳ ಆಶೀರ್ವಾದ ನನ್ನ ಮೇಲೆ ಸದಾ ಇದೆ ಎಂದರು.
ಈ ರಾಷ್ಟ್ರದ ಜನ ಎದ್ದೆಯುಬ್ಬಿಸಿ ಹೇಳಬೇಕಾದದ್ದುದಂತಹ ಒಳ್ಳೇ ಧೀಮಂತ ನಾಯಕ ಸಿಕ್ಕಿದ್ದಾನೆ. ಘರ್ಜಿಸುತ್ತಿರುವ ಆ ಸಿಂಹ ಆಯಪ್ಪನೇ ಮೋದಿ, ಅಶೋಕ ಲಾಂಛನದ ಮೂಲ ಇವರುಗಳು ಮ್ಯೂಸಿಯಂನಲ್ಲಿ ನೋಡಲಿ, ಮ್ಯೂಸಿಯಂನಲ್ಲಿ ಇರುವ ಹಾಗೆ ಯಥಾವತ್ ಸಿಂಹ ಲಾಂಛನವನ್ನು ಸೆಂಟ್ರಲ್ ವಿಸ್ತಾದಲ್ಲಿ ಮಾಡಲಾಗಿದೆ. ಇಷ್ಟು ವರ್ಷ ಲಾಂಛನದ ಬಾಯಿ ಮುಚ್ಚಿತ್ತು. ಈಗ ಬಹಳ ಸ್ವಾಭಿಮಾನದಿಂದ ಬಾಯಿ ತೆರೆದಿದೆ. ಮತ್ತೆ ಘರ್ಜನೆ ಮಾಡುತ್ತಿದೆ ಎಂದರು.
ಸುಖಾಸುಮ್ಮನೆ ಮೋದಿ ವಿರುದ್ದ ಮಾತಾಡುತ್ತಾರೆ. ಅವರನ್ನು ಆರಾಧಿಸುವವರ ಸಂಖ್ಯೆ 98% ಇದೆ. ವಿರೋಧಿಸುವವರ ಸಂಖ್ಯೆ 2%ರಷ್ಟಿದೆ ಇದೆ. ಅದಕ್ಕೆ ಏನೂ ಮಾಡೋಕೆ ಆಗಲ್ಲ ಎಂದು ಅವರು ಹೇಳಿದರು.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz