ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು, ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯು ಮಂಗಳವಾರ ಕುಣಿಗಲ್ ಗೆ ತಲುಪಿತು.
ಬೆಳ್ತಂಗಡಿಯಿಂದ ಈ ಪಾದಯಾತ್ರೆಯು ಬೆಂಗಳೂರಿನವರೆಗೆ 14 ದಿನಗಳ ಕಾಲ ನಡೆಯಲಿದೆ. ಪಾದಯಾತ್ರೆಯ 11ನೇ ದಿನವಾದ ಇಂದು ಯಡಿಯೂರುನಿಂದ 12.30ಕ್ಕೆ ಹೊರಟು 250 ಕಿ.ಮೀ. ಕ್ರಮಿಸಿ ಕುಣಿಗಲ್ ಗೆ ತಲುಪಿತು.
ಪಾದಯಾತ್ರೆಯ ಉದ್ದಕ್ಕೂ ಜನರು ತಮ್ಮ ಬೆಂಬಲ ವ್ಯಕ್ತಪಡಿಸಿದರು ಹಾಗೂ ಹಲವಾರು ಜನರು ದೇಣಿಗೆ ನೀಡಿ ಈ ಪ್ರಕರಣದಲ್ಲಿ ನ್ಯಾಯ ಒದಗಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಣಿಗಲ್ ನ ಹುಚ್ಚ್ ಮಾಸ್ತಿ ಗೌಡ ಸರ್ಕಲ್ ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಕೆ ಆರ್ ಎಸ್ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ರಘು ಜಾಣಗೆರೆ ಮಾತನಾಡಿ, ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಮರುತನಿಗೆ ಆಗಬೇಕು, ಸೌಜನ್ಯ ಮಹಿಳಾ ಸುರಕ್ಷಾ ಆಯೋಗ ಸ್ಥಾಪನೆ ಆಗಬೇಕು, ಕರ್ತವ್ಯಲೋಪವಿಸಗಿದ ತನಿಖಾಧಿಕಾರಿಯ ವಿರುದ್ಧ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ. ಎನ್., ರಾಜ್ಯ ಜಂಟಿ ಕಾರ್ಯದರ್ಶಿ ರಘುಪತಿ ಭಟ್, ರಾಜ್ಯ ಉಪಾಧ್ಯಕ್ಷರಾದ ಲಿಂಗೇಗೌಡ ಎಸ್.ಎಚ್, ರಾಜ್ಯ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಭಟ್ಟರಹಳ್ಳಿ ಮತ್ತು ನರಸಿಂಹಮೂರ್ತಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ನಂದಾರೆಡ್ಡಿ, ಆರೋಗ್ಯಸ್ವಾಮಿ, ಎಲ್. ಜೀವನ್, ಕೇಶವ್ ಮೂರ್ತಿ, ತಾಲೂಕು ಸಂಘಟನಾ ಕಾರ್ಯದರ್ಶಿ ಮಂಜುನಾಥ, ನಾಗೇಂದ್ರ ವೈ. ಪಿ. ಹಾಗೂ ಪದಾಧಿಕಾರಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.


