ತುಮಕೂರು: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಉಪನೋಂದಣಿ ಕಚೇರಿಯಲ್ಲಿ ಲಂಚ ಪಡೆಯಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರಿಂದ ಅಧಿಕಾರಿಯ ಟೇಬಲ್ ಮೇಲೆ ಚಿಲ್ಲರೆ ಹಣ ಸುರಿದು ಆಕ್ರೋಶ ವ್ಯಕ್ತಪಡಿಸಿರೋ ಘಟನೆ ನಡೆದಿದೆ.
ಅಲ್ಲದೆ ಲಂಚಕ್ಕೆ ಬೇಡಿಕೆ ಇರಿಸಿರೋ ಅಧಿಕಾರಿಗೆ ಸನ್ಮಾನಿಸಿ ಪ್ರತಿಭಟನೆ ಯತ್ನ ನಡೆಸಲಾಯಿತು. ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರಿಂದ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು.
ಜನರಿಂದ ಭಿಕ್ಷೆ ಬೇಡಿ ಹಣ ಸಂಗ್ರಹಿಸಿದ್ದ ಕೆ.ಆರ್.ಎಸ್. ಕಾರ್ಯಕರ್ತರು, ಉಪನೋಂದಣಾಧಿಕಾರಿ ರಾಘವೇಂದ್ರ ಒಡಯರ್ ಟೇಬಲ್ ಮೇಲೆ ಚಿಲ್ಲರೆ ಸುರಿದರು. ಅಲ್ಲದೆ ರಾಘವೇಂದ್ರ ಒಡೆಯರ್ ಅವರಿಗೆ ಮೈಸೂರು ಪೇಟೆ ತೊಡಿಸಿ ಸನ್ಮಾನಿಸಲು ಯತ್ನಿಸಿದರು.
ಸನ್ಮಾನದಿಂದ ತಪ್ಪಿಸಿಕೊಂಡ ಹೊರ ಹೋಗಲು ಯತ್ನಿಸಿದರು, ಅಲ್ಲದೆ ಕುರ್ಚಿಗೆ ಹಾರ ಹಾಕಿ ಪೇಟ ತೊಡಿಸಿದ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.
ಕೆ.ಆರ್.ಎಸ್. ಪಕ್ಷದ ಕಾರ್ಯಕರ್ತರ ಪ್ರತಿಭಟನೆಯಿಂದ ರಾಘವೇಂದ್ರ ಒಡೆಯರ್ ತೀವ್ರ ಮುಜುಗರಕ್ಕೊಳಗಾದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4