ಉತ್ತರ ಕೊರಿಯಾದ ಸರ್ವೋಚ್ಚ ನಾಯಕ ಕಿಮ್ ಜಾಂಗ್ ಉನ್ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ತನ್ನ ಮಗಳೊಂದಿಗೆ ಕಾಣಿಸಿಕೊಂಡಿದ್ದಾರೆ.
ರಾಜ್ಯ ಏಜೆನ್ಸಿ ಹಂಚಿಕೊಂಡಿರುವ ಚಿತ್ರಗಳಲ್ಲಿ ಕಿಮ್ ಜಾಂಗ್ ಉನ್ ತಮ್ಮ ಮಗಳೊಂದಿಗೆ ಕೈ ಹಿಡಿದುಕೊಂಡು ಪಕ್ಕದಲ್ಲಿ ನಿಂತಿರುವುದು ಕಾಣಿಸಿಕೊಂಡಿದೆ. ಕೆಲವು ಫೋಟೋಗಳಲ್ಲಿ ಅವರು ಕ್ಷಿಪಣಿ ಉಡಾವಣೆ ಹಾಗೂ ಮಿಲಿಟರಿ ಕಾರ್ಯಗಳನ್ನು ನೋಡುತ್ತಿರುವುದು ಕಂಡುಬಂದಿದೆ.
ಕಿಮ್ ಜಾಂಗ್ ಉನ್ ತನ್ನ ವೈಯಕ್ತಿಕ ಜೀವನದ ಬಗ್ಗೆ ಹಲವು ವಿಚಾರಗಳು ಇನ್ನು ಕೂಡಾ ರಹಸ್ಯವಾಗಿಯೇ ಇದೆ. 2013ರಲ್ಲಿ ಮಾಜಿ ಬಾಸ್ಕೆಟ್‌ಬಾಲ್ ತಾರೆ ಡೆನ್ನಿಸ್ ರಾಡ್‌ಮನ್ ಬ್ರಿಟಿಷ್ ದಿನಪತ್ರಿಕೆಯೊಂದರಲ್ಲಿ ಕಿಮ್‌ಗೆ ‘ಜು ಎ’ ಹೆಸರಿನ ಮಗುವಿದೆ ಎಂದು ತಿಳಿಸಿದ್ದರು.
ರಾಡ್‌ಮನ್ ಕಿಮ್ ಅವರ ಕುಟುಂಬದೊಂದಿಗೆ ಸಮಯ ಕಳೆದಿದ್ದು, ಕಿಮ್ ಅವರನ್ನು ಒಬ್ಬ ಒಳ್ಳೆಯ ತಂದೆ ಎಂದು ಹೇಳಿದ್ದಾರೆ. ಶುಕ್ರವಾರ ಉತ್ತರ ಕೊರಿಯಾದಲ್ಲಿ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯ ವೇಳೆ ಕಿಮ್ ಜಾಂಗ್ ಉನ್ ಅವರೊಂದಿಗೆ ಕಾಣಿಸಿಕೊಂಡ ಬಾಲಕಿಯ ಹೆಸರನ್ನು ರಾಜ್ಯ ಮಾಧ್ಯಮ ಬಹಿರಂಗಪಡಿಸಿಲ್ಲ.
ಉತ್ತರ ಕೊರಿಯಾ ನಿನ್ನೆ ಪ್ಯೊಂಗ್ಯಾಂಗ್ ಅಂತಾರಾಷ್ಟ್ರೀಯ ಏರ್‌ಫೀಲ್ಡ್‌ನಿಂದ ಖಂಡಾಂತರ ಕ್ಷಿಪಣಿಯನ್ನು ಪರೀಕ್ಷಾರ್ಥವಾಗಿ ಹಾರಿಸಿತು. ಅದು ಜಪಾನಿನ ಸಮುದ್ರದ ಬಳಿ ಬಂದಿಳಿದಿದೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy