ತಿಪಟೂರು: ತಾಲೂಕಿನ ಗುರುಗದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಲೂರಿನಲ್ಲಿ ಗ್ರಾಮದಲ್ಲಿ ಕುಡಿಯುವ ನೀರಿಲ್ಲದೆ 8 ಮನೆಗಳ ಗೃಹಿಣಿಯರು ಪರದಾಡುತ್ತಿದ್ದಾರೆ.
ಗೌಡನಕಟ್ಟೆ ವಾಟರ್ ಮ್ಯಾನ್ ವಿಶ್ವನಾಥ್ ತಮಗೆ ಬೇಕಾದ ಮಿನಿ ವಾಟರ್ ಟ್ಯಾಂಕ್ ಗಳಿಗೆ ನೀರು ತುಂಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಮದ ಸುನಂದಾ ಎಂಬ ಮಹಿಳೆ ಮಾತನಾಡಿ ನಮಗೆ ಕುಡಿಯಲು ನೀರು ಸರಿಯಾಗಿ ಸಿಗದೆ ಎಂಟು ವರ್ಷಗಳೇ ಕಳೆದಿದೆ ಕುಡಿಯುವ ನೀರಿಗಾಗಿ ನಾವು ಸುಮಾರು 150 ಮೀಟರ್ ದೂರದ ಮಿನಿ ವಾಟರ್ ಟ್ಯಾಂಕು ಗಳಿಗೆ ಹೋಗಿ ನೀರನ್ನು ತರುವಂತಹ ಘಟನೆ ಗ್ರಾಮದ ವೃದ್ಧರಿಗೆ ಮತ್ತು ಮಹಿಳೆಯರಿಗೆ ಘಟನೆ ಎದುರಾಗಿದೆ ಎಂದರು.
8 ಮನೆಗಳಿಗೆ ನೀಡಿದಂತಹ ಮಿನಿ ವಾಟರ್ ಟ್ಯಾಂಕ್ ಸ್ವಚ್ಛತೆ ಕೂಡ ಆಗಿರುವುದಿಲ್ಲ ಸುತ್ತಮುತ್ತ ಗಿಡಗಂಟೆಗಳು ಬೆಳೆದು ಪಾಳುಬಿದ್ದಿರುವ ಸ್ಥಿತಿಯಲ್ಲಿ ವಾಟರ್ ಟ್ಯಾಂಕ್ ಇದೆ.
ಇದೆ ವಿಚಾರವೇ ಸುಮಾರು ಹತ್ತಾರು ಬಾರಿ ಗ್ರಾಮ ಪಂಚಾಯಿತಿ ಪಿಡಿಓ ಮತ್ತು ಅಧ್ಯಕ್ಷರು ಮತ್ತು ಸದಸ್ಯರ ಗಮನಕ್ಕೆ ತಂದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಅದಲ್ಲದೆ ಇದುವರೆಗೆ ಕೂಡ ಯಾವುದೇ ರೀತಿಯ ನ್ಯಾಯ ದೊರಕಿಲ್ಲ ಎಂದು ಅಲ್ಲಿಯ ಸ್ಥಳೀಯ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಗ್ರಾಮದ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸುನಂದಾ ದ್ರಾಕ್ಷಾಯಣಮ್ಮ ಮಮತಾ ನಂಜಮ್ಮ ಸುನಂದಾ ಸೇರಿದಂತೆ ಇನ್ನು ಮುಂತಾದ ಮಹಿಳೆಯರು ಗ್ರಾಮಸ್ಥರು ಹಾಜರಿದ್ದರು.
ವರದಿ: ಮಂಜು ಗುರುಗದಹಳ್ಳಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB