ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲ ಪಕ್ಷಗಳು ತಂತ್ರ, ರಣ ತಂತ್ರ ಹೆಣಿಯುತ್ತಿವೆ. ಅಧಿಕಾರಕ್ಕಾಗಿ ಮತದಾರರ ಮನೆ ಭಾಗಿಲಿಗೆ ಹೋಗೋದು ಒಂದು ಕಡೆಯಾದರೆ ಎದುರಾಳಿ ಅಭ್ಯರ್ಥಿಗಳನ್ನು ಮಟ್ಟ ಹಾಕಲು ತಮ್ಮ ಪಕ್ಷದಲ್ಲಿ ಯಾವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕು ಎಂಬ ಲೆಕ್ಕಾಚಾರ ಮತ್ತೊಂದೆಡೆ ಭರ್ಜರಿಯಾಗಿ ನಡೆದಿದೆ.
ಇನ್ನು ಸಾರ್ವಜನೀಕ ಸಭೆಗಳಲ್ಲಿ ಸೌಲಭ್ಯಗಳ ಸುರಿಮಳೆ ಯಥೆಚ್ಚವಾಗಿ ಸುರಿಯುತ್ತದೆ. ಇವುಗಳ ಮಧ್ಯೆಯೆ ಎಚ್. ಡಿ ಕುಮಾರಸ್ವಾಮಿ ಅವರನ್ನು ಸೋಲಿಸೋಕೆ ಸಿದ್ದರಾಮಯ್ಯ ಅವರು ಹೊಸ ಅಸ್ತ್ರ ಉಪಯೋಗಿಸಲು ಮುಂದಾಗಿದ್ದು ಇದಕ್ಕೆ ಹೈಕಮಾಂಡ್ ಅಸ್ತು ಅನ್ನುತ್ತಾ ಎಂಬ ಪ್ರಶ್ನೆ ಎದುರಾಗಿದೆ.
ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕಾದ್ರೆ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಮಣಿಸಿ ದೊಡ್ಡ ಮಟ್ಟದಲ್ಲಿ ಜಯಭೇರಿ ಭಾರಿಸಬೇಕು. ಅದಕ್ಕೆ ಮಂಡ್ಯ, ರಾಮನಗರದಂತಹ ಭದ್ರ ಕೋಟೆಯಲ್ಲಿ ಜೆಡಿಎಸ್ ಮಣಿಸಬೇಕು. ರಮ್ಯಾ ಅವರನ್ನ ಚನ್ನಪಟ್ಟಣದಿಂದ ಕಣಕ್ಕಿಳಿಸಿದರೆ ಪಕ್ಷಕ್ಕೆ ಅನುಕೂಲವಾಗಲಿದೆ. ಇದು ಮಂಡ್ಯದ ಮೇಲೂ ಪರಿಣಾಮ ಬೀರಲಿದೆ ಅನ್ನೋದು ಸಿದ್ದರಾಮಯ್ಯ ವಾದ ಎಂದು ಹೇಳಲಾಗುತ್ತಿದೆ.
ತ್ರಿಕೋನ ಸ್ಪರ್ಧೆಯಲ್ಲಿ ರಮ್ಯಾ ಗೆಲುವಿಗೆ ಅವಕಾಶ ಜಾಸ್ತಿ ಇರಲಿದೆ. ಮುಖ್ಯವಾಗಿ ಕುಮಾರಸ್ವಾಮಿ ಅವರನ್ನ ರಾಮನಗರ ಜಿಲ್ಲೆಯಲ್ಲಿ ಕಟ್ಟಿ ಹಾಕಬಹುದು. ಆದರೆ ಇದಕ್ಕೆ ಹೈಕಮಾಂಡ್ ಹಾಗೂ ಕೆಪಿಸಿಸಿ ಅಧ್ಯಕ್ಷರು ಒಪ್ಪುತ್ತಾರಾ ಅನ್ನೋ ಕುತೂಹಲ ಕೆರಳಿಸಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


