ಪಾವಗಡ: ಪಟ್ಟಣದ ಅಗಸರ ಕುಂಟೆಗೆ ತಡೆಗೋಡೆ ನಿರ್ಮಿಸುವ ಕಾಮಗಾರಿಗೆ ಸೋಮವಾರ ಶಾಸಕ ವೆಂಕಟರವಣಪ್ಪ ಶಂಕುಸ್ಥಾಪನೆ ನೆರವೇರಿಸಿದರು.
ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷೆ ಜಾಹ್ನವಿ, ಮುಖ್ಯಾಧಿಕಾರಿ ಅರ್ಚನಾ, ಸದಸ್ಯ ಸುದೇಶ್ ಬಾಬು, ರಾಜೇಶ್, ರವಿ, ವೇಲು, ವೆಂಕಟರವಣಪ್ಪ, ಗೀತಾ, ಸುಧಾಲಕ್ಷ್ಮಿ, ಮುಖಂಡ ಹನುಮಂತರಾಯಪ್ಪ, ಪ್ರಮೋದ್ ಕುಮಾರ್, ಎಂ.ಎಸ್. ವಿಶ್ವನಾಥ್, ಅವಿನಾಶ್, ಪರಮೇಶ್ವರ್, ಮೈಲಪ್ಪಎಂಬವರು ಉಪಸ್ಥಿತರಿದ್ದರು.
ಅಗಸರ ಕುಂಟೆ ಅಭಿವೃದ್ಧಿಪಡಿಸುವ ಸಲುವಾಗಿ ಹಂತ ಹಂತವಾಗಿ ಕಾಮಗಾರಿ ಆರಂಭಿಸಲಾಗುತ್ತಿದೆ. ಕಾಮಗಾರಿ ಮುಕ್ತಾಯವಾದ ಮೇಲೆ ವಾರಾಂತ್ಯದ ದಿನಗಳಲ್ಲಿ ಜನತೆಯ ಮನರಂಜನೆ ದೃಷ್ಟಿಯಿಂದ ಬೋಟಿಂಗ್ ವ್ಯವಸ್ಥೆ ಮಾಡಿಸಲಾಗುವುದು. ಕಣಿವೆ ಬಳಿ ಆರಂಭವಾಗಿರುವ ಸಾಲುಮರದ ತಿಮ್ಮಕ್ಕ ಉದ್ಯಾನದಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತಿದೆ. ಇಲಾಖೆಗೆ ಆದಾಯವೂ ಬರುತ್ತಿದೆ.
ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವೆಂಕಟರವಣಪ್ಪ ಕುಂಟೆಗೆ ನಾಗಲಮಡಿಕೆಯಿಂದ ನೀರು ಹರಿಸಿರುವುದರಿಂದ ಪಟ್ಟಣದ ವ್ಯಾಪ್ತಿಯಲ್ಲಿ ಅಂತರ್ಜಲ ಹೆಚ್ಚಿದೆ. ಈ ವರ್ಷ ಕೊಳವೆಬಾವಿಗಳಲ್ಲಿ ನೀರಿರುವುದರಿಂದ ಬೇಸಿಗೆಯಲ್ಲಿಯೂ ನೀರಿನ ಅಭಾವವಿಲ್ಲ ಎಂದು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy