ರಾಜಸ್ಥಾನ: ಮದುವೆ ಸಮಾರಂಭದಲ್ಲಿ ಕರೆಂಟ್ ಹೋದ ಕಾರಣ ವಧುಗಳಿಬ್ಬರು ಅದಲು-ಬದಲು ಆದ ಘಟನೆ ರಾಜಸ್ಥಾನದ ಉಜ್ಜೈನಿಯಲ್ಲಿ ನಡೆದಿದೆ.
ರಾಜಸ್ಥಾನದ ಅಸ್ಲಾನಾ ಗ್ರಾಮದಲ್ಲಿ ಮದುವೆ ಸಮಾರಂಭದಲ್ಲಿ ವಿದ್ಯುತ್ ಕೈಕೊಟ್ಟಿದೆ. ಪೂಜೆ ಪ್ರಾರಂಭಿಸಿ ಸಪ್ತಪದಿ ತುಳಿಯುವ ವೇಳೆ ಎರಡು ಜೋಡಿಗಳಿದ್ದ ಕಾರಣ ವಧುಗಳು ಅದಲು-ಬದಲಾಗಿದ್ದಾರೆ.
ನಿಕಿತಾ ಎಂಬ ವಧು ತಮ್ಮ ಭಾವಿ ಪತಿ ಗಣೇಶ್ ಬದಲಿಗೆ ಭೋಲಾ ಕೈಹಿಡಿದಿದ್ದು, ಗಣೇಶ್ನೊಂದಿಗೆ ಕರಿಷ್ಮಾ ಕೈಹಿಡಿದು ಕುಳಿತುಕೊಂಡಿದ್ದಾರೆ.
ಮದುವೆಯ ಕೆಲಕಾರ್ಯ ನಡೆದ ಬಳಿಕ ಜೋಡಿ ಅದಲು- ಬದಲು ಆಗಿರುವುದು ತಿಳಿದು ಬಂದಿದೆ. ಬಳಿಕ ತುರಾತುರಿಯಲ್ಲಿ ಜೋಡಿಯನ್ನು ಸರಿಪಡಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5