ಲಂಚ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಬಂಧನ. ಪಂಜಾಬ್‌ನ ಬಟಿಂಡಾ ಗ್ರಾಮಾಂತರ ಕ್ಷೇತ್ರದ ಶಾಸಕ ಅಮಿತ್ ರತನ್ ಕೊಟ್‌ಫಾಟಾ ಅವರನ್ನು ವಿಜಿಲೆನ್ಸ್ ಬಂಧಿಸಿದೆ. ಶಾಸಕರ ಆಪ್ತ ಸಹಾಯಕ ರಶೀಮ್ ಗಾರ್ಗ್ ಅವರನ್ನು ಪಂಜಾಬ್ ವಿಜಿಲೆನ್ಸ್ ಬ್ಯೂರೋ ಬಂಧಿಸಿದ ಕೆಲವೇ ದಿನಗಳಲ್ಲಿ ಶಾಸಕರ ಬಂಧನವಾಗಿದೆ.
ಆಮ್ ಆದ್ಮಿ ಪಕ್ಷದ ಶಾಸಕನ ಬಂಧನದ ಬಗ್ಗೆ ವಿಜಿಲೆನ್ಸ್ ಬ್ಯೂರೋದ ಉನ್ನತ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ಮಾಹಿತಿ ನೀಡಿದೆ. ಬುಧವಾರ ಸಂಜೆ ರಾಜಪುರದಿಂದ ಶಾಸಕರನ್ನು ಬಂಧಿಸಲಾಗಿದ್ದು, ಅವರ ಬಂಧನವನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಫೆಬ್ರವರಿ 16 ರಂದು ಶಾಸಕರ ಆಪ್ತ ಸಹಾಯಕ ರಶೀಮ್ ಗಾರ್ಗ್ ಅವರನ್ನು ಬಂಧಿಸಲಾಗಿತ್ತು. 25 ಲಕ್ಷ ಸರಕಾರದ ಅನುದಾನ ಪಡೆಯಲು ರಶೀಮ್ ಅವರು 5 ಲಕ್ಷ ರೂ. ವಿಜಿಲೆನ್ಸ್ ಬ್ಯೂರೋದ ತಂಡವು 4 ಲಕ್ಷ ರೂ.ಗಳೊಂದಿಗೆ ಗಾರ್ಗ್ ಅವರನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


