ಮಂಗಳೂರು: ಫ್ಲಿಪ್‌ಕಾರ್ಟ್‌ನಿಂದ ವ್ಯಕ್ತಿಯೊಬ್ಬರು ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದು, ಅದರ ಬದಲಿಗೆ ದೊಡ್ಡ ಕಲ್ಲು ಮತ್ತು ಇ-ತ್ಯಾಜ್ಯವನ್ನು ಪಡೆದಿರುವ ವಿಲಕ್ಷಣ ಪ್ರಕರಣ ನಡೆದಿದೆ.
ಚಿನ್ಮಯ ರಮಣ ಎಂಬ ವ್ಯಕ್ತಿ ಫ್ಲಿಪ್‌ಕಾರ್ಟ್‌ನಿಂದ ಲ್ಯಾಪ್‌ಟಾಪ್ ಖರೀದಿಸಿದ್ದರು. ಆದರೆ ಅವರಿಗೆ ಲ್ಯಾಪ್‌ಟಾಪ್ ಬಾಕ್ಸ ಅಲ್ಲಿ ದೊಡ್ಡ ಕಲ್ಲು ಕಳುಹಿಸಲಾಗಿದೆ. ಈ ವಿಚಾರವನ್ನ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದೆ ಬದಲಾಗಿ ದೊಡ್ಡ ಕಲ್ಲು ಮತ್ತು ಇ-ತ್ಯಾಜ್ಯವನ್ನು ಸ್ವೀಕರಿಸಿದೆ. ದೀಪಾವಳಿ ಮಾರಾಟದ ಸಮಯದಲ್ಲಿ ಎಂದು ಬರೆದಿದ್ದಾರೆ.
ಅವರು ಬಾಕ್ಸ್ ತೆರೆಯುವ ವಿಡಿಯೋವನ್ನು ಸಹ ಪೋಸ್ಟ್ ಮಾಡಿದ್ದಾರೆ. ಆದಾಗ್ಯೂ, ಫ್ಲಿಪ್‌ಕಾರ್ಟ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಸಂಪೂರ್ಣ ಮೊತ್ತವನ್ನು ಪಾವತಿಸಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


