ತಿಪಟೂರು: ಲಾರಿಯ ಟೈರ್ ಬ್ಲಾಸ್ಟ್ ಆಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಿಪಟೂರು ತಾಲೂಕಿನ ಕೆ.ಬಿ. ಕ್ರಾಸ್ ಬಳಿಯಲ್ಲಿ ನಡೆದಿದ್ದು, ಲಾರಿಯ ಟಯರ್ ಚೆಕ್ ಮಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಲಾರಿ ಚಾಲಕ ಕೊರಟಗೆರೆ ತಾಲೂಕಿನ ಸೋಂಪುರ ಗ್ರಾಮದ ವೆಂಕಟೇಶ್(43) ಮೃತಪಟ್ಟ ಚಾಲಕ ಎಂದು ಗುರುತಿಸಲಾಗಿದೆ. ಲಾರಿ ಚಾಲನೆಯ ವೇಳೆ ಟೈರ್ ನಲ್ಲಿ ಸಮಸ್ಯೆ ಇರುವ ಬಗ್ಗೆ ಅನುಮಾನಗೊಂಡ ಚಾಲಕ ಕೆ.ಬಿ.ಕ್ರಾಸ್ ಬಳಿ ಲಾರಿ ನಿಲ್ಲಿಸಿ, ಟೈರ್ ಬಳಿ ಚೆಕ್ ಮಾಡಲು ಹೋಗಿದ್ದು, ಇದೇ ವೇಳೆಗೆ ಟೈರ್ ಏಕಾಏಕಿ ಬ್ಲಾಸ್ಟ್ ಆಗಿದೆ.
ಲಾರಿ ಟೈರ್ ಬ್ಲಾಸ್ಟ್ ಆದ ತೀವ್ರತೆಗೆ ಚಾಲಕ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy