ಜಪಾನ್ ನ ಯಮಗತ ರಾಜ್ಯ ಸರ್ಕಾರ ಜನರು ದಿನಕ್ಕೆ ಒಮ್ಮೆ ನಗಬೇಕು ಎಂಬ ಕಾನೂನನ್ನು ಜಾರಿಗೆ ತಂದಿದೆ. ಜನರು ದೀರ್ಘ ಆರೋಗ್ಯವಂತರಾಗಿ ಬಾಳಲು ನಗುವಿಗಿಂತ ಉತ್ತಮ ಔಷಧವಿಲ್ಲ ಎಂದು ಬಲವಾಗಿ ನಂಬಿರುವ ಆ ರಾಜ್ಯ ಸರ್ಕಾರ ಈ ಹೊಸ ಕಾನೂನನ್ನು ಜಾರಿಗೆ ತಂದಿದೆ.
ಯಮಗತ ಜನರು ನಗುವಿನ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಈ ಕಾನೂನು ಹೇಳುತ್ತದೆ. ದಿನಕ್ಕೆ ಒಮ್ಮೆಯಾದರೂ ನಗುವ ಮೂಲಕ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಇದು ಸೂಚಿಸುತ್ತದೆ. ಕೆಲಸದ ಸ್ಥಳಗಳಲ್ಲೂ ನಗುವಿನ ವಾತಾವರಣ ಮೂಡಿಸಲು ಈ ಕಾನೂನಿನಲ್ಲಿ ಹಲವು ಅಂಶಗಳನ್ನು ಸೇರಿಸಲಾಗಿದೆ.
ಸಂಸ್ಥೆಯಲ್ಲಿ ನಗುವಿನ ವಾತಾವರಣ ಮೂಡಿಸುವ ಜವಾಬ್ದಾರಿಯನ್ನು ಆಡಳಿತ ಮಂಡಳಿಗೆ ವಹಿಸಲಾಗಿದೆ. ರಾಜ್ಯಾದ್ಯಂತ ಪ್ರತಿ ತಿಂಗಳು 8ರಂದು ನಗು ದಿನವನ್ನೂ ಆಚರಿಸಬೇಕು. ಕನ್ಸರ್ವೇಟಿವ್ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಈ ಮಸೂದೆಯನ್ನು ಮಂಡಿಸಿ ಸದಸ್ಯರ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA