ಕೊರಟಗೆರೆ: ನಮ್ಮ ನಿಮ್ಮ ಜೀವನಕ್ಕೆ ಕಾನೂನು ಬಹಳ ಮುಖ್ಯ, ಹೇಗೆ ನಮ್ಮ ನೆರಳು ನಮ್ಮನ್ನು ಹೇಗೆ ಹಿಂಬಾಲಿಸುವುದೋ ಅದೇ ರೀತಿ ಕಾನೂನು ಸಹ ನಮ್ಮ ಜೊತೆ ಇರಬೇಕು ಎಂದು ಕಾನೂನು ಸಲಹೆಗಾರ ವಕೀಲರಾದ ಟಿ. ಕೃಷ್ಣಮೂರ್ತಿ ತಿಳಿಸಿದರು.
ತಾಲೂಕಿನ ಜಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಹಕ್ಕು ಪಡೆಯಲು ನಮಗೆ ಕಾನೂನು ತುಂಬಾ ಅವಶ್ಯಕ, ಸಂವಿಧಾನದಲ್ಲಿ ಬಂದ ಕಾನೂನುಗಳ ಜೋತೆ ಹೊಸ ಹೊಸ ಕಾನೂನು ಸೇರ್ಪಡೆ ಆಗಿದೆ. ಈ ಎಲ್ಲಾ ಕಾನೂನು ನಮಗೆ ತಿಳಿದಿರಬೇಕು. ಹಾಗಾಗಿ ನಮಗೆ ಇಂತಹ ಕಾರ್ಯಕ್ರಮಗಳು ಬಹಳ ಮುಖ್ಯ 1982 ರಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಬಂತು ಇದರಲ್ಲಿ ಬಹಳ ಪ್ರೀತಿಯಲ್ಲಿ ರಾಜ್ಯ ರಾಷ್ಟ್ರೀಯ ಹಾಗೂ ಜಿಲ್ಲಾ ತಾಲೂಕು ಕಾನೂನು ಪ್ರಾಧಿಕಾರಗಳಾಗಿ ವಿಂಗಡಣೆಯಾಗಿದೆ. ಬಡವರಿಗೆ ನ್ಯಾಯ ಪಡೆಯಲು ಈ ಪ್ರಾಧಿಕಾರ ಚಳುವಳಿಕೆ ನೀಡುವುದರ ಇದರ ಜೊತೆಗೆ ಯಾರು ಬಡವರು ವಕೀಲರಿಗೆ ಹಣ ನೀಡಿ ವಕೀಲರು ನೇಮಿಸಲು ಆಗದೆ ಇರುವವರು ಅರ್ಜಿ ಸಲ್ಲಿಸಿದರೆ ಅವರ ಪರವಾಗಿ ಉಚಿತವಾಗಿ ವಾದ ಮಾಡಿ ನ್ಯಾಯ ದೊರಕಿಸಲಾಗುವುದು ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಸಿ.ಡಿ.ಪ್ರಭಾಕರ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವುದು ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸುತ್ತಿರುವುದು ಬಹಳ ಉಪಯೋಗದ ಕೆಲಸ, ಇದರಿಂದ ನಾವು ಉಚಿತವಾಗಿ ಕಾನೂನು ಏನು ಹೇಳುತ್ತದೆ ಎಂಬುದನ್ನು ತಿಳಿಯಬಹುದಾಗಿದೆ, ಮಹಿಳೆಯರು ವಿಶೇಷ ಚೇತನಿಗೆ ಹಾಗೂ ಮಳೆ ಬೆಂಕಿ ಹಾನಿಯಾದಾಗ ಬಡತನ ರೇಖೆಗಿಂತ ಕೆಳಗಿರುವವರಿಗೆ ಈ ಕಾನೂನು ಬಹಳ ಉಪಯೋಗವಾಗಲಿದೆ, ಇನ್ನು ಮುಂದೆ ಗ್ರಾಮಗಳಲ್ಲಿ ಗ್ರಾಮ ನ್ಯಾಯಾಲಯ ಮಾಡಿದರೆ ರೈತರಿಗೂ ಬಡವರಿಗೆ ಬಹಳ ಉಪಯೋಗವಾಗುತ್ತದೆ. ಈ ಬಾರಿ ನಮ್ಮ ಅಗ್ರಹಾರ ಪಂಚಾಯಿತಿಯಲ್ಲಿ ಇಂತಹ ಕಾನೂನು ಅರಿವು ಕಾರ್ಯಕ್ರಮ ಮಾಡುತ್ತಿರುವುದು ಬಹಳ ಸಂತೋಷದ ವಿಷಯವಾಗಿದೆ ಎಂದರು.
ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತೆ ಮೂಲಭೂತ ಸೌಕರ್ಯ ಮೂಲಭೂತ ಹಕ್ಕು ಪಡೆಯುವುದು ಹೇಗೆ ಎಂಬುದು ಗ್ರಾಮೀಣ ಭಾಗದ ಜನರಿಗೆ ತಿಳಿಸಿಕೊಟ್ಟರೆ ಖುದ್ದು ಅವರೇ ಬಂದು ಪಂಚಾಯಿತಿ ಸೇರಿದಂತೆ ಕಛೇರಿಗಳಲ್ಲಿ ಕೆಲಸ ಮಾಡಿಸಿಕೊಳ್ಳಲು ಸುಲಭದ ದಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ವಕೀಲ ಸಂಘದ ಕಾರ್ಯದರ್ಶಿ ರಾಜು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಂಗನರಸಯ್ಯ, ಕಾರ್ಯದರ್ಶಿ ಮುನಿಯಯ್ಯ, ಉಪಾಧ್ಯಕ್ಷೆ ಸರಸ್ವತಿ ಮಂಜುನಾಥ್, ಸದಸ್ಯರುಗಳಾದ ದಾಕ್ಷಾಯಣಮ್ಮ, ಕರಿಯಣ್ಣ, ರಾಗಿಣಿ, ಸೇರಿದಂತೆ ಇನ್ನಿತರ ಸಾರ್ವಜನಿಕರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC