ವಾಷಿಂಗ್ಟನ್: ಸ್ಟಾರ್‌ಬಕ್ಸ್ ತನ್ನ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ಅವರನ್ನು ಹೆಸರಿಸಿದೆ.
ಲಕ್ಷ್ಮಣ್ ಅಕ್ಟೋಬರ್ 1 ರಂದು ಕಂಪನಿಗೆ ಸೇರಿಕೊಳ್ಳಲಿದ್ದಾರೆ. ಏಪ್ರಿಲ್ 2023ರಲ್ಲಿ ಪ್ರಸ್ತುತ ಸಿಇಓ ಹೊವಾರ್ಡ್ ಷುಲ್ಟ್ಜ್ ನಿರ್ಗಮನದ ನಂತ್ರ ಲಕ್ಷ್ಮಣ್ ಈ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಸ್ವತಂತ್ರ ಸ್ಟಾರ್‌ಬಕ್ಸ್ ನಿರ್ದೇಶಕ ಮಂಡಳಿಯ ಅಧ್ಯಕ್ಷ ಮೆಲೋಡಿ ಹಾಬ್ಸನ್ ಅವರು ಲಕ್ಷ್ಮಣ್ ನರಸಿಂಹನ್ ಅವರನ್ನು ಸ್ಫೂರ್ತಿದಾಯಕ ನಾಯಕ ಎಂದು ಕರೆದಿದ್ದಾರೆ. ಸ್ಟಾರ್‌ಬಕ್ಸ್‌ನ ಬೆಳವಣಿಗೆಯನ್ನು ವೇಗಗೊಳಿಸಲು ಮತ್ತು ನಮ್ಮ ಮುಂದಿರುವ ಅವಕಾಶಗಳನ್ನು ಈಡೇರಿಸಿಕೊಳ್ಳಲು ಸೂಕ್ತವಾದ ಆಯ್ಕೆಯಾಗಿದೆ’ ಎಂದು ಅವರು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy