ಹೆಚ್.ಡಿ.ಕೋಟೆ: ತಾಲ್ಲೂಕಿನ ನೂಲ್ಲುಕುಪ್ಪೆ ಗ್ರಾಪಂ ವ್ಯಾಪ್ತಿಯ ಲಕ್ಷ್ಮೀಪುರ ಹಾಡಿಯಲ್ಲಿ ಜನರನ್ನು ಕೇಳುವವರ್ಯಾರು ಎಂದು ಪ್ರಶ್ನೆ ಉಂಟಾಗಿದೆ. ಹೆಚ್.ಡಿ.ಕೋಟೆ ತಾಲ್ಲೂಕು ಅತಿ ಹೆಚ್ಚು ಹಾಡಿಗಳಿಂದ ಹೊಂದಿರುವ ತಾಲ್ಲೂಕು ಸರ್ಕಾರದಿಂದ ಕೋಟಿಗಟ್ಟಲೆ ಅನುದಾನವನ್ನು ನೀಡಿದ್ದರೂ ಕೂಡ ಹಾಡಿಗಳು ಇನ್ನೂ ಅಭಿವೃದ್ಧಿಯಾಗಿಲ್ಲ.
ಮೈಸೂರು ಮತ್ತು ಮಾನದವಾಡಿ ಮುಖ್ಯ ರಸ್ತೆ, ಕೋಟೆಯ ಹೃದಯ ಭಾಗವಾಗಿರುವ ಹ್ಯಾಂಡ್ ಪೋಸ್ಟ್ ನಿಂದ 5 ಕಿ.ಮೀ. ಇರುವ ಲಕ್ಷ್ಮೀಪುರ ಹಾಡಿಯ ದುಸ್ಥಿತಿಯನ್ನು ಇಲ್ಲಿನ ಜನರು ತೋಡಿಕೊಂಡಿದ್ದು, ಇಲ್ಲಿ ನಾವು ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಚರಂಡಿ ಕೊಳಚೆ ನೀರಿನಲ್ಲಿ ಹುಳುಗಳಾಗಿವೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳೂ ಕೂಡ ಕಾಣಿಸಿಕೊಂಡಿವೆ. ಇಲ್ಲಿ ಇಷ್ಟೊಂದು ಸಮಸ್ಯೆಗಳಿದ್ದರೂ ಸರ್ಕಾರದ ಯಾವ ಅಧಿಕಾರಿಗಳೂ ಕ್ರಮಕೈಗೊಳ್ಳುತ್ತಿಲ್ಲ ಎಂದು ಇಲ್ಲಿನ ನಿವಾಸಿ ಚಂದ್ರಮ್ಮ ಅವರು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿ ಹಾಡಿಯಲ್ಲಿ ಶಾಲೆ ಹಾಗೂ ಅಂಗನವಾಡಿ ಇಲ್ಲ .ಇವರು ಮಕ್ಕಳು ಅಂಗನವಾಡಿ ಹೋಗಬೇಕಂದರೆ ಆನಗಟ್ಟಿ ಹಾಡಿಯಲ್ಲಿ ಅಂಗನವಾಡಿಗೆ 2 ಕಿ.ಮೀ.ನಷ್ಟು ದೂರ ಸಣ್ಣ ಮಕ್ಕಳನ್ನು ನಡೆಸಿಕೊಂಡು ಹೋಗಬೇಕು ಅಳಲು ಹೇಳಿಕೊಂಡರು.
ವರದಿ: ಚಂದ್ರ ಹಾದನೂರು