ಬೆಂಗಳೂರು: ಭಿನ್ನಮತೀಯರ ಗುಂಪು ಕಟ್ಟಿಕೊಂಡು ದೆಹಲಿ ಯಾತ್ರೆ ಮಾಡಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅವರ ತಂಡ ಸದ್ಯ ಮೌನಕ್ಕೆ ಶರಣಾಗಿದೆ.
ಇಲ್ಲಿಯವರೆಗೆ ಮಾಧ್ಯಮಗಳ ಎದುರು ಹಲವಾರು ಹೇಳಿಕೆಗಳನ್ನು ನೀಡುತ್ತಾ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಹಲವು ಟೀಕೆಗಳನ್ನು ಮಾಡುತ್ತಿದ್ದ ಯತ್ನಾಳ್ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ.
ಯುದ್ದಕ್ಕೂ ಮುನ್ನವೇ ಶಸ್ತ್ರ ತ್ಯಾಗ ಎನ್ನುವಂತೆ ಭಿನ್ನಮತೀಯರ ಗುಂಪು ಮೌನಕ್ಕೆ ಶರಣಾಗಿದೆ. ಕೇಂದ್ರ ಶಿಸ್ತು ಸಮಿತಿ ನೋಟಿಸ್ ಬೆನ್ನಲ್ಲೇ ರೆಬಲ್ ತಂಡ ತಣ್ಣಗಾಗಿದೆ,.
ಪಕ್ಷದಲ್ಲಿನ ತಟಸ್ಥ ಬಣದವರ ಬೆಂಬಲ ಇಲ್ಲದೆ ಯತ್ನಾಳ್ ಬಣ ಏಕಾಂಗಿಯಾಗಿ ಹೋರಾಟ ಮಾಡುವಂತಾಗಿದೆ. ಪದೇ ಪದೇ ತಮ್ಮ ಬಣವನ್ನು ವರಿಷ್ಠರು ನಿರ್ಲಕ್ಷಿಸುತ್ತಿದ್ದಾರೆ ಎಂಬ ಬೇಸರವೂ ರೆಬೆಲ್ ಬಣದಲ್ಲಿದೆಯಂತೆ.
ವರಿಷ್ಠರ ಬೆಂಬಲ ಮತ್ತು ತಟಸ್ಥ ಬಣದ ಬೆಂಬಲ ಇಲ್ಲದೆ ಮುಂದೆ ಹೋದರೆ ಮುಖಭಂಗ ಅನುಭವಿಸಬೇಕಾಗುತ್ತದೆ ಎಂಬ ಭೀತಿಯೂ ರೆಬೆಲ್ ಬಣವನ್ನು ಕಾಡುತ್ತಿದೆ. ಹೀಗಾಗಿ ತಟಸ್ಥನಿಲುವು ತಾಳಿ, ಪಕ್ಷದಲ್ಲಿ ತಮಗೆ ನೀಡಿದ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ಪ್ರತ್ಯೇಕವಾಗಿಯೇ ಕೆಲಸ ಮಾಡಲು ರೆಬೆಲ್ ಬಣ ಮುಂದಾಗಿದೆ ಎನ್ನಲಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4