ಇಸ್ರೇಲ್‍ನತ್ತ ಲೆಬನಾನ್ ರಾಕೆಟ್ ದಾಳಿ ನಡೆಸಿದ ಬಳಿಕ ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಇಸ್ರೇಲ್ ಸೋಮವಾರ ಮುಂಜಾನೆ ಗುಂಡಿನ ದಾಳಿ ನಡೆಸಿದೆ.
ಉತ್ತರ ಇಸ್ರೇಲ್‍ನ ತೆರೆದ ಪ್ರದೇಶದಲ್ಲಿ ರಾಕೆಟ್ ಬಿದ್ದಿದೆ. ಇದರಿಂದ ಯಾವುದೇ ಹಾನಿ ಅಥವಾ ಗಾಯಗಳಾಗಿಲ್ಲ ಎಂದು ಸೇನೆ ಸ್ಪಷ್ಟ ಪಡಿಸಿದೆ. ರಾಕೆಟ್ ಉಡಾವಣೆಯಾದ ಸ್ವಲ್ಪ ಸಮಯದ ಬಳಿಕ ಇಸ್ರೇಲ್ ದಕ್ಷಿಣ ಲೆಬನಾನ್‍ನಲ್ಲಿ ಮೂಲಸೌಕರ್ಯಗಳ ಮೇಲೆ ಗುರಿಯಿಟ್ಟು ದಾಳಿ ನಡೆಸಿದೆ. ಉತ್ತರ ಇಸ್ರೇಲ್‍ನಲ್ಲಿ ವಾಡಿಕೆಯ ಚಟುವಟಿಕೆಗಳು ಮುಂದುವರೆದಿವೆ.
ರಾಕೆಟ್ ದಾಳಿಯ ಜವಾಬ್ದಾರಿಗಳನ್ನು ತಕ್ಷಣವೇ ಯಾರು ಒಪ್ಪಿಕೊಂಡಿಲ್ಲ.
ಇಸ್ರೇಲ್ ಮತ್ತು ಲೆಬನಾನ್‍ನ ಉಗ್ರಗಾಮಿ ಹಿಜ್ಬೊಲ್ಲಾ ಗುಂಪು ಕಡು ಶತ್ರುಗಳಾಗಿದ್ದು, 2006ರಿಂದಲೂ ಯುದ್ಧ ನಡೆಸುತ್ತಿವೆ. ಅಂದಿನಿಂದ ಗಡಿ ಪ್ರದೇಶವು ಉದ್ವಿಗ್ನವಾಗಿದೆ. ಆದರೆ ಬಹುತೇಕ ಶಾಂತವಾಗಿದೆ.
ಸಣ್ಣ ಪ್ಯಾಲೇಸ್ಟಿನಿಯನ್ ಗುಂಪುಗಳು ಲೆಬನಾನ್‍ನಲ್ಲಿ ಸಕ್ರಿಯವಾಗಿವೆ. ಇತ್ತೀಚಿನ ವರ್ಷಗಳಲ್ಲಿ ಹಲವಾರು ರಾಕೆಟ್ ದಾಳಿಗಳನ್ನು ನಡೆಸಿರುವುದಾಗಿಯೂ ವರದಿಯಾಗಿದೆ. ಕಳೆದ ವರ್ಷ ಇಸ್ರೇಲ್ ಮತ್ತು ಗಾಜಾ ಉಗ್ರಗಾಮಿಗಳ ನಡುವಿನ 11 ದಿನಗಳ ಯುದ್ಧದ ನಂತರ ಈ ಪ್ರದೇಶವನ್ನು ಕೆಣಕಲು ಮತ್ತೆ ದುಸ್ಸಾಹಸ ನಡೆದಿದೆ ಎನ್ನಲಾಗಿದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy