ಛತ್ರಪತಿ ಸಂಭಾಜಿನಗರ: ಬಿಜೆಪಿಯೊಂದಿಗೆ 30 ವರ್ಷ ಮೈತ್ರಿ ಮಾಡಿಕೊಂಡರೂ ಶಿವಸೇನೆ ಬದಲಾಗಿಲ್ಲ, ಈಗ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡರೆ ಬದಲಾಗುತ್ತಾ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ನವೆಂಬರ್ 20 ರ ಮಹಾರಾಷ್ಟ್ರ ಚುನಾವಣೆಗೆ ಮುಂಚಿತವಾಗಿ ಕಲಂನೂರಿ, ಹಿಂಗೋಲಿ ಮತ್ತು ವಸ್ಮತ್ ವಿಧಾನಸಭಾ ಕ್ಷೇತ್ರಗಳ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಅಭ್ಯರ್ಥಿಗಳ ಪರ ಹಿಂಗೋಲಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಶಿವಸೇನಾ (ಯುಬಿಟಿ) ನಾಯಕ ಮಾತನಾಡಿ, ಬಿಜೆಪಿ ಮತ್ತು ಮೈತ್ರಿಕೂಟದ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಇಲ್ಲಿಗೆ ಬಂದು ನಾವು (ಶಿವಸೇನೆ-ಯುಬಿಟಿ) ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತವನ್ನು ತ್ಯಜಿಸಿದ್ದೇವೆ ಎಂದು ಜನರಿಗೆ ಹೇಳುತ್ತಾರೆ. ನಾನು ಬಿಜೆಪಿ ಬಿಟ್ಟಿದ್ದೇನೆ ಹೊರತು ಸಿದ್ಧಾಂತ ಬಿಟ್ಟಿಲ್ಲ, ಬಾಳ್ ಠಾಕ್ರೆಯವರ ಚಿಂತನೆಯನ್ನು ಬಿಟ್ಟಿಲ್ಲ ಎಂದರು.
ಶಿವಸೇನೆ ಕಾಂಗ್ರೆಸ್ ಆಗುವುದು ಹೇಗೆ? ಕಾಂಗ್ರೆಸ್ ನಮ್ಮೊಂದಿಗಿದೆ. 25–30 ವರ್ಷ ಜತೆಗಿದ್ದರೂ ಶಿವಸೇನೆ ಬಿಜೆಪಿಯಾಗಲಿಲ್ಲ. ಈಗ ಅದು ಕಾಂಗ್ರೆಸ್ ಆಗುವುದು ಹೇಗೆ? ಎಂದು ಮರು ಪ್ರಶ್ನೆ ಹಾಕಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q