ಕೊರಟಗೆರೆ: ಪಟ್ಟಣದ ಹೊರವಲಯದ ಬೈಲಾಂಜನೇಯ ದೇವಸ್ಥಾನ ಬಳಿ ಭಾನುವಾರ ಮಧ್ಯಾಹ್ನ ಪಟ್ಟಣದ ಬಡ ರೈತ ಗೋವಿಂದಪ್ಪ ಹಸುಗಳನ್ನು ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಪಕ್ಕದಲ್ಲಿ ಇದ್ದ ಬೆಟ್ಟದಿಂದ ಬಂದ ಚಿರತೆ ಏಕಾಏಕಿ ಸೀಮೆ ಹಸುವಿನ ಮೇಲೆ ದಾಳಿ ಮಾಡಿದೆ.
ಚಿರತೆ ದಾಳಿಯನ್ನು ಕಂಡ ರೈತ ಗೋವಿಂದಪ್ಪ ಕಿರುಚಾಡಿದ್ದಾನೆ ಅಷ್ಟರಲ್ಲಿ ಚಿರತೆ ಕರುವಿನ ಹೊಟ್ಟೆ ಭಾಗದ ಮೇಲೆ ದಾಳಿ ಮಾಡಿದ ಪರಿಣಾಮ ಕರು ಸ್ಥಳದಲ್ಲಿ ಸಾವನಪ್ಪಿತ್ತು.
ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿದು ಸ್ಥಳಕ್ಕೆ ಬಂದು ಪರಿಶೀಲಿಸಿ, ರೈತರಿಗೆ ಪರಿಹಾರದ ವ್ಯವಸ್ಥೆಯನ್ನು ತಕ್ಷಣ ಮಾಡುತ್ತೇವೆ ಎಂದು ತಿಳಿಸಿ, ಈ ಭಾಗದಲ್ಲಿ ಬೆಟ್ಟ ಗುಡ್ಡಗಳು ಜಾಸ್ತಿ ಇರುವುದರಿಂದ ಚಿರತೆಗಳು ಕರಡಿಗಳು ಕಾಣಿಸಿಕೊಳ್ಳುತ್ತವೆ. ರೈತರು ಈ ಭಾಗದಲ್ಲಿ ಸ್ವಲ್ಪ ಜಾಗೃತಿಯಿಂದ ಇರಬೇಕು ರೈತರು ಸಾರ್ವಜನಿಕರ ಹಿತ ದೃಷ್ಟಿಯಿಂದ ಬೋನುಗಳನ್ನು ಇಡುವ ವ್ಯವಸ್ಥೆಯನ್ನು ಮಾಡುತ್ತೇವೆ ಎಂದರು..
ವರದಿ : ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx