ಕೊರಟಗೆರೆ: ಕಳೆದ ಕೆಲವು ತಿಂಗಳಿಂದ ಕಾವಲುಬೀಳು ಗ್ರಾಮಸ್ಥರಿಗೆ ನಿದ್ದೆಗೆಡಿಸಿದ ಚಿರತೆ ಅರಣ್ಯ ಅಧಿಕಾರಿಗಳು ಇಟ್ಟ ಬೋನಿಗೆ ಸೋಮವಾರ ಬಿದ್ದಿದೆ.
ಕೊರಟಗೆರೆ ಪಟ್ಟಣದ ಹೊರವಲಯದ ಕಾವಲುಬೀಳು ಗ್ರಾಮದ ಜನತೆಗೆ ಬೆಚ್ಚಿಬೀಳುಸುತ್ತಿದ್ದ ಚಿರತೆಗಳ ಹಾವಳಿಂದಾಗಿ ಅಲ್ಲಿನ ರೈತರು ಹಾಗೂ ಸಾರ್ವಜನಿಕರ ಭಯದ ವಾತಾವರಣ ನಿರ್ಮಾಣವಾಗಿತ್ತು.
ಕಳೆದ ಕೆಲವು ದಿನಗಳ ಹಿಂದೆ ಮನೆ ಮುಂದೆ ಇದ್ದ ಸಾಕು ನಾಯಿನ ಹೋತ್ತುಕೊಂಡು ಹೋಗಲು ಬಂದಿದ್ದ ಎರಡು ಚಿರತೆಯನ್ನ ಕಂಡ ಮನೆಯವರು ಜೋರಾಗಿ ಶಬ್ದ ಮಾಡಿದ ಕಾರಣ ಓಡಿ ಹೋಗಿತ್ತು. ನಂತರ ಅರಣ್ಯ ಅಧಿಕಾರಿಗಳು ಬೋನನ್ನ ಇಟ್ಟು ಒಂದು ಚಿರತೆಯನ್ನ ಹಿಡಿದು ಹೊರಗಡೆ ಬಿಡಲಾಗಿತ್ತು. ಮತ್ತೆ ಇನ್ನೊಂದು ಚಿರತೆಯ ಸೆರೆಗಾಗಿ ಬೋನ್ ಇಡಲಾಗಿತ್ತು. ಮತ್ತೆ ಸುಮಾರು 4 ವರ್ಷದ ಚಿರತೆ ಅರಣ್ಯ ಅಧಿಕಾರಿಗಳು ಇಟ್ಟ ಬೋನಿಗೆ ಬಿದ್ದಿದ್ದು, ಇಲ್ಲಿನ ರೈತರ ಹಾಗೂ ಸಾರ್ವಜನಿಕರಿಗೆ ಸಂತಸ ತಂದಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಬೇಟಿ ನೀಡಿ ಚಿರತೆಯನ್ನ ಬೇರೆಡೆ ಅರಣ್ಯಕ್ಕೆ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕೊರಟಗೆರೆ ಪಟ್ಟಣದ ಹೊರವಲಯದ ಕಾವಲುಬೀಳು ಗ್ರಾಮದ ಬಳಿ ಮತ್ತೊಂದು ಚಿರತೆ ಸೆರೆ
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


