ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಮೆರೆಯುತ್ತಿದ್ದಾರೆ. ಅವರಿಗೆ ತಾಕತ್ತಿದ್ದರೆ ಕಾಂಗ್ರೆಸ್ ನಿಂದ ಹೊರಬಂದು ಒಂದು ಪಕ್ಷ ಕಟ್ಟಿ 5 ಸ್ಥಾನ ಗೆದ್ದು ತೋರಿಸಲಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಹಿರಂಗ ಸವಾಲ್ ಹಾಕಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಜೆಡಿಎಸ್ ವಿರುದ್ಧ ಮಾತನಾಡಿದ್ದಾರೆ. 123 ಸೀಟು ಬಂದ್ರೆ ಪಕ್ಷ ವಿಸರ್ಜನೆ ಮಾಡೋದಾಗಿ ಹೇಳಿದ್ರು. ಇನ್ನೂ ಮಾಡಿಲ್ಲ ಅಂತ ಮಾತಾಡಿದ್ದಾರೆ. ಕನ್ನಡದ ಬಗ್ಗೆ ಪಾಠ ಮಾಡೋ ಸಿದ್ದರಾಮಯ್ಯ ಅವರಿಗೆ ಕನ್ನಡ ಗೊತ್ತಿದೆಯಾ? ವಿಧಾನಸಭೆಯಲ್ಲಿ ಮಾತಾಡಿದ್ರೆ ಆಗ ಉತ್ತರ ಕೊಡ್ತಿದ್ದೆ ಎಂದು ತಿರುಗೇಟು ನೀಡಿದ್ದಾರೆ.
ನಾನು ಸ್ಪಷ್ಟವಾಗಿ ಹೇಳಿದ್ದೇನೆ. 123 ಸ್ಥಾನ ಕೊಟ್ಟು ಪಂಚರತ್ನ ಯೋಜನೆ ಜಾರಿ ಮಾಡದೇ ಹೋದ್ರೆ ಪಕ್ಷ ವಿಸರ್ಜನೆ ಮಾಡ್ತೀನಿ ಅಂತಾ ಹೇಳಿದ್ದೆ. 123 ಬಂದಿಲ್ಲ ವಿಸರ್ಜನೆ ಮಾಡಿಲ್ಲ ಅಂತ ಅಲ್ಲಿ ಟೇಂಕಾರದ ಮಾತು ಆಡ್ತಾರೆ. ಇದೇ ಮನುಷ್ಯ 58 ಸ್ಥಾನ ನನ್ನಿಂದ ಬಂತು ಅಂತಾ ಹೇಳಿದ್ದರು. 1999ರಲ್ಲಿ ಇದೇ ಮನುಷ್ಯ ಜೆಡಿಎಸ್ ಅಧ್ಯಕ್ಷ ಆಗಿದ್ದಾಗ 10 ಸ್ಥಾನಕ್ಕೆ ಬಂದಿದ್ವಿ. ಅವರೂ ಸೋತಿದ್ದರು. ಆದ್ರೆ ನಾನು ಒಬ್ಬ ಏಕಾಂಗಿಯಾಗಿ 40 ಸ್ಥಾನಕ್ಕೆ ರೀಚ್ ಆಗಿದ್ದೇನೆ.
ಸಿದ್ದರಾಮಯ್ಯರಿಂದ ಪಕ್ಷ ಕಟ್ಟೋದು ಹೇಳಿಸಿಕೊಳ್ಳಬೇಕಾಗಿಲ್ಲ. ಇವರು ಹಲವು ಭಾಗ್ಯ ಕೊಟ್ಟು ಸಾಧನೆ ಮಾಡಿದ್ದಾರೆ ಅಲ್ಲವೇ? ತಾಕತ್ತಿದ್ದರೆ ಒಂದು ಪಕ್ಷ ಕಟ್ಟಿ 5 ಸ್ಥಾನ ಗೆದ್ದು ತೋರಿಸಲಿ? ಎಂದು ಗುಡುಗಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


