ನಮ್ಮ ಸರ್ಕಾರ ಯಶಸ್ವಿಯಾಗಿ 100 ದಿನ ಪೂರೈಸಿದೆ. ಐದು ಗ್ಯಾರಂಟಿಗಳ ಪೈಕಿ ನಾಲ್ಕು ಗ್ಯಾರಂಟಿಗಳನ್ನು ಪೂರೈಸಿದ್ದೇವೆ. ನಿರುದ್ಯೋಗಿಗಳಿಗೆ 3 ಸಾವಿರ ಭತ್ಯೆ ನೀಡ ಗ್ಯಾರಂಟಿ ಮಾತ್ರ ಬಾಕಿಯಿದೆ. ಅದು ಮುಂದಿನ ದಿನಗಳಲ್ಲಿ ಜಾರಿಯಾಗಲಿದೆ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ನಾವು ನುಡಿದ್ದಂತೆ ನಡೆದಿದ್ದೇವೆ, ಜನರು ಕೂಡ ಸಂತೃಪ್ತಿಯಿಂದ ಇದ್ದಾರೆ. ಲೋಕಸಭೆ ಚುನಾವಣೆ ನಮ್ಮ ಮನೆ ಹೊತ್ತಿನಲ್ಲಿ ಬಂದು ನಿಂತಿದೆ. ಎಲ್ಲಾ ಪಕ್ಷಗಳು ಚುನಾವಣೆಗೆ ಸಜ್ಜಾಗುತ್ತಿವೆ. ಕಾಂಗ್ರೆಸ್ ರಾಜ್ಯದಲ್ಲಿ ಅತಿ ಹೆಚ್ಚು ಲೋಕಸಭೆ ಕ್ಷೇತ್ರಗಳನ್ನು ಗೆಲ್ಲಬೇಕು. ನಾವು ಗೆಲ್ಲುತ್ತೇವೆ ಅನ್ನೋ ವಿಶ್ವಾಸವಿದೆ ಎಂದು ತಿಳಿಸಿದರು.
ಮೂರು ಡಿಸಿಎಂ ಸ್ಥಾನಗಳನ್ನು ಸೃಷ್ಟಿ ಮಾಡಿದ್ರೆ, ಎಲ್ಲಾ ಸಮುದಾಯಗಳು ನಮ್ಮಗೆ ಬೆಂಬಲ ನೀಡಲು ಅನುಕೂಲ ಆಗುತ್ತೆ. ಪರಿಶಿಷ್ಟ ಜಾತಿ–ಪಂಗಡ, ಅಲ್ಪಸಂಖ್ಯಾತರಿಗೆ, ವೀರಶೈವ ಸಮುದಾಯಗಳಿಗೆ ಉಪಮುಖ್ಯಮಂತ್ರಿ ಸೃಷ್ಟಿ ಮಾಡಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ, ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಪತ್ರ ಬರೆಯಲು ಇಚ್ಚಿಸಿದ್ದೇನೆ. ಇವತ್ತು ಪತ್ರ ಬರೆಯುತ್ತೇನೆ ಎಂದು ಅವರು ತಿಳಿಸಿದರು.
ಮುಂದಿನ ತಿಂಗಳ ಮೊದಲ ವಾರದಲ್ಲಿ ಹೈಕಮಾಂಡ್ ಮುಖಂಡರನ್ನು ಭೇಟಿ ಮಾಡುತ್ತೇನೆ. ಯಾರಿಗೆ ಆಯ್ಕೆ ಮಾಡುತ್ತಾರೆ ಅಂತ ಹೈ ಕಮಾಂಡ್ ನಿರ್ಣಯ ಮಾಡಬೇಕು. ಹೈ ಕಮಾಂಡ್ ತೀರ್ಮಾನವೇ ನಮ್ಮೆಲ್ಲಾರ ತೀರ್ಮಾನ ಎಂದು ಅವರು ಹೇಳಿದರು.


