ಸರಗೂರು: ಗ್ರಂಥಾಲಯಗಳು ಕೇವಲ ಪುಸ್ತಕಗಳ ಸಂಗ್ರಹಾಲಯಗಳಲ್ಲ, ಅವು ಜ್ಞಾನ ಮತ್ತು ಸಮುದಾಯದ ಪ್ರಗತಿಗೆ ಮೂಲಾಧಾರವಾಗಿವೆ ಎಂದು ಗ್ರಂಥಾಲಯ ಮೇಲ್ವಿಚಾರಕ ಬಿಡುಗಲು ಶಿವಣ್ಣ ತಿಳಿಸಿದರು.
ಪಟ್ಟಣದ ಸರ್ಕಾರಿ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು 14 ರಿಂದ 20ವರೆಗೆ ಆಯೋಜಿಸಲಾಗಿದ್ದು, ಕೊನೆಯ ದಿನವಾಗಿದ್ದ ಶುಕ್ರವಾರ ದಂದು ಗ್ರಂಥಾಲಯ
ಪಿತಾಮಹಾ ಡಾ ಎಸ್.ಆರ್.ರಂಗನಾಥನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಭಾರತದ ಮೊದಲ ಪ್ರಧಾನಮಂತ್ರಿ ನೆಹರು ಭಾರತದ ಪ್ರತಿಯೊಬ್ಬ ಪ್ರಜೆಯೂ ಸಹ ಸಾಕ್ಷರತೆ ಮತ್ತುಶಿಕ್ಷಣದಿಂದ ವಂಚಿತರಾಗಬಾರದು. ಪ್ರತಿಯೊಬ್ಬರು ಸಹ ಶಿಕ್ಷಣ ಪಡೆದು ಸಾಕ್ಷರರಾಗಿ ದೇಶ ಪ್ರಗತಿಹೊಂದಬೇಕು ಎಂಬ ಆಸೆಯಿಂದ ಮತ್ತು ಮಕ್ಕಳ ಮೇಲೆ ಅವರಿಗೆ ಇದ್ದ ಅಪಾರ ಪ್ರೀತಿಯಿಂದ ಅವರು ಹುಟ್ಟಿದ ದಿನ ನವೆಂಬರ್ 14ನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುವುದು ಮಹಾನ್ ವ್ಯಕ್ತಿಗಳ ಆದರ್ಶ ತತ್ವ ಸಿದ್ಧಾಂತಗಳನ್ನು ಎಲ್ಲರು ಪಾಲಿಸಿ ದೇಶದ ಏಳಿಗೆಗೆ ಶ್ರಮಿಸಬೇಕು ಎಂದರು.
ಗ್ರಂಥಾಲಯಗಳು ಮಕ್ಕಳ ಮತ್ತು ಯುವಕರ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿವಿಧ ವಿಷಯಗಳ ಮತ್ತು ಪ್ರಕಾರಗಳ ಪುಸ್ತಕಗಳು ಉಚಿತವಾಗಿ ಲಭ್ಯವಿರುವುದರಿಂದ, ಚಿಕ್ಕ ವಯಸ್ಸಿನಲ್ಲಿಯೇ ಓದುವ ಆಸಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಭದ್ರವಾದ ಶೈಕ್ಷಣಿಕ ಅಡಿಪಾಯವನ್ನು ನೀಡುತ್ತದೆ ಎಂದರು.
ಪ್ರತಿಯೊಬ್ಬರಿಗೂ ಗುಣಮಟ್ಟದ ಪುಸ್ತಕಗಳು, ಪತ್ರಿಕೆಗಳು, ಮತ್ತು ಡಿಜಿಟಲ್ ಸಂಪನ್ಮೂಲಗಳು ಗ್ರಂಥಾಲಯದಲ್ಲಿ ಲಭ್ಯವಿದೆ. ಇಲ್ಲಿ ಸಮಾನ ಶೈಕ್ಷಣಿಕ ಅವಕಾಶವನ್ನುಒದಗಿಸಿಕೊಡಲಾಗುತ್ತದೆ. ಎಲ್ಲಾ ಯುವಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು
ಈ ಕಾರ್ಯಕ್ರಮದ ಅಂಗವಾಗಿ ಓದುಗರಿಗೆ ರಸಪ್ರಶ್ನೆ. ವಿದ್ಯಾರ್ಥಿ/ನಿಯರಿಗೆ ಚಿತ್ರಕಲೆ — ಜಾನಪದ ಗೀತೆ – ಭಾವಗೀತೆ ನಡೆಸಲಾಯಿತು.
ರಸಪ್ರಶ್ನೆ ವಿಜೇತರು: ಸೋಮೇಶ ಎಸ್.ಕೆ. (ಪ್ರ) ಮಹದೇವಸ್ವಾಮಿ(ದ್ವಿ) ಸೋಮಶೇಖರ್ ಎಸ್. ಎಸ್. (ತೃ) ಮತ್ತು ಸರ್ಕಾರಿ ಬಾಲಕಿಯ ಪ್ರೌಢಶಾಲೆಯ ವಿಭಾಗದ ಜಾನಪದ ಗೀತೆಯಲ್ಲಿ ಸೃಷ್ಠಿ — (ಪ್ರ) ಲಕ್ಷ್ಮಿ — (ದ್ವಿ) ಸ್ವಾತಿ– (ತೃ) ಮತ್ತು ಭಾವಗೀತೆಯಲ್ಲಿ ಅಪೂರ್ವ — (ಪ್ರ) ಸೌಜನ್ಯ ( ದ್ವಿ) ಅರ್ಚನಾ (ತೃ) ಸ್ಥಾನ ಗಳಿಸಿದರು. ವಿಜೇತರಾದ ಎಲ್ಲರಿಗೂ ಸಮಾರೋಪ ಸಮಾರಂಭದ ದಿನ ತಾಲ್ಲೂಕು ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿಗಳಾದ ಮಧು ಚಂದ್ರು ರವರು ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಿ ಗೌರವಿಸಿದರು.
ಈ ಕಾರ್ಯಕ್ರಮದಲ್ಲಿ ಸಹಾಯಕಿ ವರ್ಷ, ವಿನೋದ್, ಸಂಪತ್ ಕುಮಾರ್, ಮಧು, ಸೋಮೇಶ, ಮಹಾದೇವಸ್ವಾಮಿ, ರಕ್ಷಿತಾ, ಸ್ಮೀತಾ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


