ಕೇರಳದ ಕೋಝಿಕ್ಕೋಡ್ ನ ಕೊಟೊಂಪುಝ ನಿವಾಸಿ ಅಬ್ದುಲ್ ರಹೀಮ್ ಎಂಬಾತನಿಗೆ, ತನ್ನ ಪ್ರಾಯೋಜಕರ ಅಂಗವಿಕಲ ಮಗನನ್ನು ಕೊಲೆ ಮಾಡಿದ ಆರೋಪದ ಹಿನ್ನೆಲೆ ಸೌದಿ ಅರೇಬಿಯಾದಲ್ಲಿ ಜೈಲಿನಲ್ಲಿ ವಿಧಿಸಲಾಗಿದ್ದ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ.
ಹೌದು, ಈ ಸಂಬಂಧ ರಿಯಾದ್ ಕ್ರಿಮಿನಲ್ ನ್ಯಾಯಾಲಯ ಜುಲೈ 2 ರಂದು ಮರಣದಂಡನೆ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ರಾಯಭಾರಿ ಕಚೇರಿಯ ಅಧಿಕಾರಿಗಳು ರಹೀಮ್ ಕುಟುಂಬದ ಪರ ವಕೀಲ ಸಿದ್ದಿಕ್ ತುವ್ವೂರ್ ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಲಯದ ವರ್ಚುವಲ್ ಸಿಸ್ಟಮ್ ಮೂಲಕ ನ್ಯಾಯಾಲಯವು ರಹೀಮ್ ಅವರನ್ನು ಭೇಟಿ ಮಾಡಿದ ನಂತರ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ನ್ಯಾಯಾಲಯವು ಮರಣದಂಡನೆಯನ್ನು ರದ್ದುಗೊಳಿಸುವ ಆದೇಶಕ್ಕೆ ಸಹಿ ಹಾಕಿತು.
ಸದ್ಯ ರಾಯಭಾರಿ ಕಚೇರಿ ಮೂಲಕ ನ್ಯಾಯಾಲಯದಲ್ಲಿ ಠೇವಣಿ ಇಟ್ಟಿದ್ದ ಒಂದೂವರೆ ಕೋಟಿ ರಿಯಾಲ್ ನ ಚೆಕ್ ನ್ನು ಕೊಲೆಯಾದ ಸೌದಿ ಬಾಲಕನ ಕುಟುಂಬದ ಪವರ್ ಆಫ್ ಅಟಾರ್ನಿಗೆ ನ್ಯಾಯಾಲಯ ಹಸ್ತಾಂತರಿಸಿದೆ.
ಅಬ್ದುಲ್ ರಹೀಮ್ ಕೊಲೆ ಮಾಡಿದ್ದಕ್ಕಾಗಿ 18 ವರ್ಷಗಳಿಂದ ಜೈಲಿನಲ್ಲಿದ್ದು, ಈಗಾಗಲೇ ರಹೀಮ್ ಬಿಡುಗಡೆಗಾಗಿ ಸಂಗ್ರಹಿಸಿದ 47 ಕೋಟಿಗೂ ಹೆಚ್ಚು ಭಾರತೀಯ ರೂಪಾಯಿಗಳಲ್ಲಿ ಸ್ಥಳೀಯ ಟ್ರಸ್ಟ್ ಒಂದೂವರೆ ಕೋಟಿ ಸೌದಿ ರಿಯಾಲ್ ಅನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ನೀಡಲಾಗಿದೆ.
ಮಾಹಿತಿ ಪ್ರಕಾರ, ಅಬ್ದುಲ್ ರಹೀಮ್ ತನ್ನ ಜೀವನೋಪಾಯಕ್ಕಾಗಿ 26 ವರ್ಷದಲ್ಲಿ ಸೌದಿ ಅರೇಬಿಯಾವನ್ನು ಸೇರಿ ಅಲ್ಲಿ ಸೌದಿ ಪ್ರಜೆಯೊಬ್ಬರಿಗೆ ಅವರ ಚಾಲಕ ಮತ್ತು ಭಾಗಶಃ ಪಾರ್ಶ್ವವಾಯುವಿಗೆ ಒಳಗಾದ ಮಗನನ್ನು ನೋಡಿಕೊಳ್ಳಲು ಪ್ರಾರಂಭಿಸಿದ್ದು, ಬಾಲಕನು ತನ್ನ ಕುತ್ತಿಗೆಗೆ ಜೋಡಿಸಲಾದ ವಿಶೇಷ ಸಾಧನದ ಮೂಲಕ ಉಸಿರಾಟ ಮತ್ತು ತಿನ್ನುತ್ತಿದ್ದನು.
ಹೀಗಿರುವಾಗ ಒಂದು ದಿವಸ ರಸ್ತೆಯಲ್ಲಿ ಕೆಂಪು ಸಿಗ್ನಲ್ ಅನ್ನು ಉಲ್ಲಂಘಿಸುವಂತೆ ಒತ್ತಾಯಿಸಿ ಗಲಾಟೆ ಮಾಡುತ್ತಿದ್ದ ಹುಡುಗನನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವಾಗ ಆಕಸ್ಮಿಕವಾಗಿ ಉಪಕರಣವನ್ನು ಸ್ಥಳಾಂತರಿಸಿದ ಸಂದರ್ಭದಲ್ಲಿ ಮೂರ್ಛೆಹೋಗಿ ಸತ್ತಿರುತ್ತಾನೆ. ಇದರಿಂದಾಗಿ ಅಬ್ದುಲ್ ರಹೀಮ್ ದೀರ್ಘ ಶಿಕ್ಷೆಗೆ ಗುರಿಯಾಗಿದ್ದನು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA